ಅಗ್ನಿತತ್ವ – ಕುಜ, ಜಲತತ್ವ -ಶುಕ್ರ, ಭೂತತ್ವ- ಬುಧ, ವಾಯುತತ್ವ- ಶನಿ ಮತ್ತು ಆಕಾಶತತ್ವಕ್ಕೆ -ಗುರು ಕಾರಕ.
ಜಾತಕದಲ್ಲಿ ಕುಜ (ಅಗ್ನಿ)ಪೀಡಿತನಾದರೆ – ಹಸಿವು, ತಲೆಸುತ್ತು, ತಾಪಮಾನ, ರಕ್ತದ ಸಂಬಂಧ, ಬಾಯಾರಿಕೆ, ಅಜೀರ್ಣವಾಗುತ್ತದೆ.
ಜಾತಕದಲ್ಲಿ ಬುಧ (ಭೂ) *ಪಿಡಿತನಾದರೆ – ತ್ರಿದೋಷಗಳು, ಚರ್ಮ,ಸಂಧಿದೋಷಗಳು, ನರಗಳ ಬಾಧೆ.
ಜಾತಕದಲ್ಲಿ ಶುಕ್ರ ಜಲ ಪಿಡಿತನಾದರೆ – ವರ್ಣಗಳು’ ಮೂತ್ರದೋಷ,ಲಾಲಾರಸ ದೋಷ ಉತ್ಪತ್ತಿ.
ಜಾತಕದಲ್ಲಿ ಶನಿ ವಾಯು ಪೀಡಿತನಾದರೆ – ದೀರ್ಘವ್ಯಾದಿ, ಮೂಳೆವ್ಯಾದಿ, ದೇಹ ಬಿಳುಚಿಕೊಳ್ಳುವುದು, ಸಣ್ಣ ದೇಹ, ಬಲಹೀನ.
ಜಾತಕದಲ್ಲಿ (ಗುರು) ಆಕಾಶ *ಪೀಡಿತನಾದರೆ – ಕಫ, ಜನನಾಂಗದ ದೋಷ,ಇಂದ್ರಿಯ ದೋಷ, ಮುದಿತನ. ಜಾತಕದಲ್ಲಿ ಗ್ರಹಗಳು ಯಾವ ತತ್ವದಲ್ಲಿ ಹೆಚ್ಚು ಇರುತ್ತದೋ ಅದರಂತೆ ಆರೋಗ್ಯದಲ್ಲಿ ಆರೋಗ್ಯದಲ್ಲಿ ಹೆಚ್ಚು ದೋಷವಿರುತ್ತದೆ.
ರೋಗ ಉತ್ಪತ್ತಿ ಮತ್ತು ಮರಣ
ಆಶ್ಲೇಷ, ಭರಣಿ, ಮೂಲ, ಸ್ವಾತಿ, ಪುಬ್ಬ, ಪೂರ್ವಾಷಾಡ ಪೂರ್ವಭಾದ್ರ, ಆರಿದ್ರ ಶತಭಿಷ ಈ ನಕ್ಷತ್ರಗಳಲ್ಲಿರುವ ದಿನ, ಭಾನುವಾರ ಮಂಗಳವಾರ, ಶನಿವಾರಗಳಲ್ಲಿ, ಪಾಡ್ಯ, ಅಷ್ಟಮಿ, ದ್ವಾದಶಿ, ಚತುರ್ಧಶಿ, ಪೌರ್ಣಮಿ ಮತ್ತು ಅಮಾಸೆಯ ಈ ತಿಥಿಗಳಲ್ಲಿ ಕೂಡಿದಾಗ ರೋಗ ಆರಂಭವಾದರೆ ಅವರು ಖಂಡಿತ ಮರಣಿಸುವವರು. ಇವರನ್ನು ಸರ್ವವೈದ್ಯರಾದ ಅಶ್ವಿನಿ ಕುಮಾರರಿಂದಲೂ ಉಳಿಸಿಕೊಳ್ಳಲಾಗದು.
ಮುಹೂರ್ತ ಗಣಪತಿ ಗ್ರಂಥದಿಂದ
ಭಾನುವಾರ- ಅನುರಾಧ /ಭರಣಿ ನಕ್ಷತ್ರ, ಸೋಮವಾರ – ಆರಿದ್ರ/ ಉತ್ತರಾಷಾಢ ನಕ್ಷತ್ರ, ಮಂಗಳವಾರ – ಮುಖ /ಶತಭಿಷ ನಕ್ಷತ್ರ,ಬುಧವಾರ -ವಿಶಾಖ/ ಅಶ್ವಿನಿ ನಕ್ಷತ್ರ,ಗುರುವಾರ – ಜೇಷ್ಠ / ಮೃಗಶಿರ ನಕ್ಷತ್ರ, ಶುಕ್ರವಾರ- ಶ್ರವಣ/ ಆಶ್ಲೇಷ ನಕ್ಷತ್ರ / ಶನಿವಾರ- ಪೂರ್ವ ಭಾದ್ರ ಹಸ್ತ ನಕ್ಷತ್ರ -ಈ ದಿನಗಳಲ್ಲಿ ಈ ನಕ್ಷತ್ರವಿರುವಾಗ ವ್ಯಾಧಿ ಆರಂಭವಾದರೆ ಮರಣ.