ಮನೆ ಜ್ಯೋತಿಷ್ಯ ವೈದ್ಯಕೀಯ ಜ್ಯೋತಿಷ್ಯ

ವೈದ್ಯಕೀಯ ಜ್ಯೋತಿಷ್ಯ

0

 ಉದಾಹರಣೆ -6

     ಜಾತಕ 6ನೇ ಅಧಿಪತಿ ಶುಕ್ರ, ರವಿ ಜೊತೆ ಪೂರ್ಣ ಅಸ್ತನಾಗಿ ಕೇವಲ ಒಂದು ಡಿಗ್ರಿ12. ಅಂತರದ್ದಾರೆ. ಶುಕ್ರ ಮೊದಲೇ ಷಷ್ಠಾಧಿಪತಿಯಾಗಿ ಅಷ್ಟಮಾಧಿಪತಿ ಗುರು ನಕ್ಷತ್ರ ಸ್ಥಿತನಾಗಿ ಕೇವಲ 2 ಡಿಗ್ರಿ 30 ಡಿಗ್ರಿ ಅಂಶದಲ್ಲಿ ಅಂದರೆ ವರುಣಾವಸ್ಥೆಯಲ್ಲಿ ಇದ್ದಾರೆ, ರವಿಯ ಜೊತೆ ಅಸ್ತ. ಇನ್ನು ಪೀಡಿತ ಮತ್ತು ಶುಕ್ರನು ಮಾರಕ+ ದ್ವಾದಶಾಧಿಪತಿ + ಶತೃ ಗ್ರಹವಾದ ಕುಜನ ದೃಷ್ಟಿಯಿಂದ ಇನ್ನೂ ಪೀಡಿತ.ಲಗ್ನದಿಂದ ಮೂರನೇ ಸ್ಥಾನ ಕಟಕ ರಾಶಿ ಕೆಟ್ಟಿದೆ. ಅಂದರೆ ಮೂರನೇ ಸ್ಥಾನ ಗಂಟಲು,ಕತ್ತು, ಶಾಸಕೋಶ ಭಾಗ ಮತ್ತು ಶುಕ್ರನು ಪೀಡಿತವಾಗಿ ಚಂದ್ರನನ್ನು ಪೀಡಿಸುವುದರಿಂದ ಗಂಟಲು ಕ್ಯಾನ್ಸರ್ ಆಗಿದೆ. ಗಂಟಲುಕಾರಕ ಚಂದ್ರ. ಆದ್ದರಿಂದ ಮರಣಿಸಿದರು ಇಲ್ಲಿ ಚಂದ್ರನಿಗೆ ವ್ರಣಕಾರಕ ಕುಜ ಸಂಬಂಧ.

Join Our Whatsapp Group

★ಶನಿಯು ಮತ್ತು ಕುಜರು ಪರಸ್ಪರ ಕೇಂದ್ರದಲ್ಲಿ ಒಬ್ಬೊಬ್ಬರೇ ಒಬ್ಬರಿಗೆ ದೃಷ್ಟಿ ಇದೆ

★ ಶುಭ ಗ್ರಹ ಶುಕ್ರ, ಆರನೆಯ ಅಧಿಪತಿಯಾಗಿ ಆಸ್ತಾನಾಗಿ ಕೆಟ್ಟಿದ್ದರೆ. ವಕ್ರ ಗ್ರಹ ಕುಜನ ದೃಷ್ಟಿ ಇದೆ.

 ★ಕಟಕ ರಾಶಿ ಕೆಟ್ಟಿದೆ. ಆರನೇ ಸ್ಥಾನಕ್ಕೆ ಕೇತುವಿನ ದೃಷ್ಟಿ ಇದೆ.

★ ರವಿಚಂದ್ರರ ಪ್ರತಿ ಯೋಗ ಒಂದಕ್ಕೊಂದು ಕೇಂದ್ರದಲ್ಲಿದೆ. ಸಾಮಾನ್ಯವಾಗಿ ಜೀವಕ್ಕೆ ತೊಂದರೆ.

 ಉದಾಹರಣೆ ಜಾತಕ 7 ಬೋನ್ ಕ್ಯಾನ್ಸರ್ – (ತೊಡೆ) 7-6- 1986

    ಕೇತು,ದೃಷ್ಟಿ ಆರನೇ ಸ್ಥಾನ ಮತ್ತು ಸ್ಥಾನಾಧಿಪತಿಯ ಮೇಲೆ,ರಾಹು ದೃಷ್ಟಿ ಪಡೆದ ಕುಜನ ದೃಷ್ಟಿಯು ಕಟಕ ಮತ್ತು ಮೀನ ರಾಶಿಯ ಮೇಲೆ.ಮಾರಕ ಚಂದ್ರ ರವಿಯಿಂದ ಆಸ್ತನಾಗಿ ಲಗ್ನಾಧಿಪತಿ ವಕ್ರ ಶನಿಯ ಮೇಲೆ, ಮೂರು ಜಲತತ್ವ ಪೀಡಿತವಾಗಿದೆ.ಮೂಳೆಗೆ ಕಾರಕ ಗ್ರಹ ಶನಿ, ಧನುಸ್ಸುರಾಶಿಯಲ್ಲಿ ವಕ್ರ ಕುಜ ರಾಹು ದೃಷ್ಟಿ ರಾಹುದಶೆ ಶನಿಭುಕ್ತಿಯಲ್ಲಿ ತೊಡೆಯಲ್ಲಿ ಕಾಣಿಸಿಕೊಂಡಿದೆ. ರಾಶಿ ಚಕ್ರದಲ್ಲಿ ಮಕರ ರಾಶಿಯು ಮೂಳೆಯ ಕಾರಕವಾಗಿ, ವಕ್ರಶನಿಯ ದೃಷ್ಟಿ ಪಡೆದು ಅವರ ಭಕ್ತಿಯಲ್ಲಿ ಹೆಚ್ಚು ತೊಂದರೆ, ರಾಹು ಶನಿ ಷಷ್ಠಾಷ್ಟಕ ಪುಸ್ತಕ ಯೋಗದಲ್ಲಿದೆ.

 ಉದಾಹರಣೆ ಜಾತಕ 8 ಶ್ವಾಸಕೋಶ ಕ್ಯಾನ್ಸರ್ 2-7-1957:

     ಈ ಜಾತಕದಲ್ಲಿ ಕಾಲಪುರುಷನ ಮಿಥುನರಾಶಿಯು ಶ್ವಾಸಕೋಶ ತೋರಿಸುತ್ತದೆ.ಮಿಥುನದಲ್ಲಿ ಬುಧ ರವಿಯಿಂದ ಅಸ್ತ ರಾಹು ದೃಷ್ಟಿಯು ಪಡೆದಿದ್ದಾನೆ. ಲಗ್ನದಲ್ಲಿ ನೀಚ ಕುಜನ ದೃಷ್ಟಿ ರಾಹುವಿನ ಮೇಲೆ. ಕೇತು ಮತ್ತು ಮಾರಕ ವಕ್ರ ಶನಿಯ ದೃಷ್ಟಿ ಲಕ್ನಾಧಿಪತಿ ಚಂದ್ರನ ಮೇಲೆ ಇರುವುದರಿಂದ ರಾಹು ದೆಶೆಯಲ್ಲಿ ಶ್ವಾಸಕೋಶದಲ್ಲಿ ನೀರು ತುಂಬಿ,ಕ್ಯಾನ್ಸರ್ ವ್ಯಾಧಿ  ಆರಂಭ 22ನೆಯ ದ್ರೇಕ್ಕಾಣ ಶುಕ್ರ.ಮತ್ತು ೬೪ನೆಯ ನವಾಂಶಧಿಪತಿ ಕುಜ ಲಗ್ನದಲ್ಲಿ ಕೇತು ಆರನೇ ಮನೆಗೆ ದೃಷ್ಟಿ ರಾಹದೆಶೆ ಶನಿಭುಕ್ತಿಯಲ್ಲಿ ಆರಂಭ.ಭುಧ ಭುಕ್ತಿಯಲ್ಲಿ ಮರಣ

 ದೊಡ್ಡ ಕರುಳು ಕ್ಯಾನ್ಸರ್ -9.-1 -1942 

 ಈ ಜಾತಕರಿಗೆ ದೊಡ್ಡ ಕರುಳಿನ ಕ್ಯಾನ್ಸರಾಗಿ ಮರಣ ಹೊಂದಿದ್ದಾರೆ.ಈ ಜಾತಕದಲ್ಲಿ ಭಾವ ಕುಂಡಲಿಯಲ್ಲಿ ಪ್ರಕಾರ ಕುಜ,ಮೀನರಾಶಿಗೆ ಬರುತ್ತಾರೆ. ಕ್ಯಾನ್ಸರ್ ಕಾರಕರು ಕೇತು + ಕುಜ ಕೇತು ಆರನೇ ಭಾವದ ಸಂಬಂಧವಿದೆ ದೊಡ್ಡ ಕರುಳು ಕರಕಾ ಶನಿಯು ನೀಚನಾಗಿ ದೊಡ್ಡ ಕರುಳು  ರಾಶಿ ಕಾಲ ಪುರುಷನ ರೀತಿ ತುಲಾರಾಶಿಗೆ ದೃಷ್ಟಿ.ಕೇತು ಮತ್ತು ಕುಜ ಮಾರಕ ಮತ್ತು ದ್ವಾದಶಾಧಿಪತಿಯಾಗಿ ತುಲಾ ರಾಶಿಯ ಮೇಲೆ ದೃಷ್ಟಿ ಇದರಿಂದ ಮರಣ.

 ಜ್ಯೋತಿಷ್ಯದ ರೀತಿ ಪರಿಹಾರ :

     ಜಾತಕದಲ್ಲಿ – ಕೇತು ಕುಜ (ಕೇತು- ಮಾಂಸ ಕಣಗಳ/ ಜೀವಕೋಶ ಕಾರಕ/ ಕುಜ  ರಕ್ತ ಕಣಗಳ ಕಾರಕ ) ಪರಿಹಾರ ಮಾಡಿ. ಕೇತುವಿಗೆ – ಪ್ರತಿಶನಿವಾರ— ಒಂದು ಚೆಂಬಿನಲ್ಲಿ ನೀರು ದರ್ಬೆ+ ಗರಿಕೆ ಹಾಕಿಕೊಂಡು ಒಂಬತ್ತು ಪ್ರದಕ್ಷಿಣೆ ಅರಳಿಮರರಕ್ಕೆ ಹಾಕಿ.ಎಲ್ಲ ನೀರು ಮರದ ಬುಡಕ್ಕೆ ಹಾಕಿ  ಆನಂತರ ನವಗ್ರಹಗಳಿಗೆ 9 ಸುತ್ತು ಹಾಕಿ 100 ಗ್ರಾಂ ತೊಗರಿ ಬೇಳೆ ದಾನ ಮಾಡಿ ಸಂದರ್ಭನು ಸಾರಾ ಚಂದ್ರ, ಶುಕ್ರ, ಶನಿ,ಗ್ರಹಗಳಿಗೆ ದಾನ ಮಾಡಿ.