ಮನೆ ಜ್ಯೋತಿಷ್ಯ ವೈದ್ಯಕೀಯ ಜ್ಯೋತಿಷ್ಯ

ವೈದ್ಯಕೀಯ ಜ್ಯೋತಿಷ್ಯ

0

 ರಾಶಿಗಳಿಂದ  :

       ಮಿಥುನರಾಶಿ ಕಾಲಪುರುಷನ ಸ್ವಾಶಕೋಶ ಸ್ಥಾನ. ಈ ಅಂಗವೇ ಪೀಡಿತವಾದರೆ ಉಸಿರಾಟವು ಬಲಹೀನವಾಗಿ ಹೃದಯ ಬಲಹೀನವಾಗಿ ರಕ್ತದ ಒತ್ತಡ ಬರುತ್ತದೆ.

Join Our Whatsapp Group

        ಸಿಂಹರಾಶಿ ರಕ್ತವನ್ನು ತೋರಿಸುತ್ತದೆ. ಈ ರಾಶಿ ಪೀಡಿತವಾದರೆ ರಕ್ತದ ಬಲ ಕುಗ್ಗುತ್ತದೆ. ಕನ್ಯಾ ರಾಶಿ ಪೀಡಿತವಾದರೆ ನರಗಳು ದುರ್ಬಲವಾಗಿ, ಗಡುಸಾಗಿ ಸಂಕೂಚಿತವಾಗಿ ಅಥವಾ ಅದು ಹಿಗ್ಗಿ, ರಕ್ತ ಚಲನೆ ವೇಗ ಕಡಿಮೆಯಾಗಿ ನಾಳಗಳಲ್ಲಿ ಕೊಬ್ಬಿನಾಂಶ ಶೇಖರವಾಗಲೂ ಅವಕಾಶವಾಗುತ್ತದೆ. ಕುಂಭ ಹೃದಯದ ರಕ್ತ ಚಲನೆರಾಶಿ ಇದು ಪೀಡಿತವಾಗಿರುವುದರಿಂದ ಹೃದಯದ ರಕ್ತನಾಳಗಳಲ್ಲಿ ಕೊಬ್ಬಿನಾಂಶದಿಂದ ರಕ್ತ ಚಲನೆಗೆ. ತೊಂದರೆಯಾಗಿ ಹೃದಯದ ಶಕ್ತಿ ಬಲಹೀನವಾಗಿ ಹೃದಯದ ಸರಿಯಾಗಿ ಕೆಲಸ ಮಾಡದೆ ಅದು ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ.

 ನಿಯಮಾವಳಿ  :

1. ಅಗ್ನಿ ರಾಶಿಯ ರವಿ ಮಂಗಳರು ಲಗ್ನ ಅಥವಾ ಚತುರ್ಥದಲ್ಲಿದ್ದರೆ….

2. ಯಾವುದೇ ಜಾತಕದಲ್ಲಿ ರವಿ ಕೆಟ್ಟಾಗ ಅಥವಾ ತೊಂದರೆಪಟ್ಟಾಗ ಅಧಿಕ ಒತ್ತಡ ರವಿ +ಕುಜ ತೊಂದರೆ ಪಟ್ಟಾಗ ಕಡಿಮೆ ಒತ್ತಡ ಬರುವ ಸಾಧ್ಯತೆ ಇರುತ್ತದೆ.

3. ಲಗ್ನ ಚತುರ್ಥ, ಸಪ್ತಮ, ದಶಮದಲ್ಲಿ ಅಧಿಕ ಗ್ರಹ ವಿದ್ಯಾಗ /ದೃಷ್ಟಿ ಇದ್ದರೆ….

4. ಪುರುಷನ ರಾಶಿಯಲ್ಲಿ ಅನೇಕ ಗ್ರಹಗಳು ಅದು ಲಗ್ನ/ ಚತುರ್ಥದಲ್ಲಿದ್ದರೆ….

5. ರವಿ- ಮಂಗಳ, ರವಿ – ಶನಿ, ಶನಿ – ಮಂಗಳ, ರವಿ – ಕೇತು ರಾಹು – ಮಂಗಳ ಈ ಗ್ರಹಗಳ ಯುತಿಯೋಗ, ಪ್ರತಿ ಯೋಗ ಲಗ್ನ ಅಥವಾ ಚತುರ್ಥ (ಸಪ್ತಮ/ ದಸಮದಲ್ಲಿದ್ದರೆ)…..

6. ಲಗ್ನೇಶ,ಚತುರ್ಥೇಶ ದುರ್ಬಲವಿದ್ದರೆ….

7. ಚಂದ್ರ ದುರ್ಬಲವಿದ್ದು ಲಗ್ನ/ ಚತುರ್ಥದಲ್ಲಿ ಅಶುಭ ಗ್ರಹಗಳು ಇದ್ದರೆ, ಪಾಪಗಳ ಮಧ್ಯೆ ಇದ್ದರೂ…..

8. ಶನಿಯಿಂದ ದೃಷ್ಟಿಸಲ್ಪಟ್ಟ ಚಂದ್ರನು 1,4,6,8, ಈ ಸ್ಥಾನಗಳಲ್ಲಿದ್ದರೆ…..

9. ರವಿ, ಚಂದ್ರ, ಚತುರ್ಥೇಶ, ಚತುರ್ಥ ಸ್ಥಾನ,ಸಿಂಹ,ಕುಂಭ ರಾಶಿ ಅಥವಾ ಲಗ್ನೇಶ ಈ ಏಳರಲ್ಲಿ ಯಾವುದೇ ನಾಲ್ಕು ದೂಷಿತವಿದ್ದರೂ…

10. ಶನಿಯು ಅಗ್ನಿ ರಾಶಿಯಲ್ಲಿ ರವಿಯೂ ವಾಯು ಅಥವಾ ಜಲ ತತ್ವದ ರಾಶಿಯಲ್ಲಿದ್ದರೆ ತೊಂದರೆ.

 1.ಸೂರ್ಯನಿಗೆ ಪರಿಹಾರ :

         ಪ್ರತಿದಿನ ಸೂರ್ಯ ನಮಸ್ಕಾರ,ಆದಿತ್ಯ ಹೃದಯದ ಸ್ತೋತ್ರ ಪಠಿಸಿ.ಪ್ರತಿ ಭಾನುವಾರ ನವಗ್ರಹಗಳಿಗೆ ಏಳು ಪ್ರದಕ್ಷಿಣೆ ಹಾಕಿ, 1/4 ಕಿಲೋ ಗೋದಿ, ದಕ್ಷಿಣೆ ಹಣದ ಸಹಿತ ದಾನ ಮಾಡಿ.ಪ್ರತಿದಿನ ಶಿವ ಅಷ್ಟೋತ್ತರ ನಾಮಾವಳಿ ಪಠಿಸಿ. ಪ್ರತಿ ಸೋಮವಾರ ಬಿಲ್ವಪತ್ರೆಯಿಂದ ಪೂಜಿಸಿ, ಭಾನುವಾರಗಳಲ್ಲಿ ಉಪ್ಪು ರಹಿತ ಆಹಾರವನ್ನು ಸ್ವೀಕರಿಸಿ. ಬೆಲ್ಲ ಗೋಧಿಯಿಂದ ಮಾಡಿದ ಹಲ್ವ ಚಪಾತಿಯನ್ನು ಸ್ವೀಕರಿಸಿ. ಸೂರ್ಯ ಅಸ್ತದೊಳಗೆ ಆಹಾರ ಸೇವಿಸಿ.

      ಪ್ರತಿದಿನ ಗಾಯಿತ್ರಿ ಮಂತ್ರ ಜಪಿಸಿ..ಸಾಧ್ಯವಾದರೆ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿ.

     ಪ್ರತಿ ವರ್ಷ ಬರುವ ರಥಸಪ್ತಮಿಯ  ವ್ರತವನ್ನು ಆಚರಿಸಿ.ಭಾನುವಾರಗಳಲ್ಲಿ ಸೂರ್ಯನಿಗೆ ಪೂಜಿಸಿ ಕೆಂಪು ವಸ್ತ್ರ ತಾಮ್ರದ ವಸ್ತು ಮತ್ತು ಗೋಧದಾನ ಮಾಡಿ. ಪ್ರತಿದಿನ ಸೂರ್ಯ ಯಂತ್ರ ಪೂಜಿಸಿ.

2. ಕಡಿಮೆ ರಕ್ತದೊತ್ತಡಕ್ಕೆ : ಕುಜ ಮತ್ತು ಸೂರ್ಯನಿಗೆ ಮತ್ತು ಇವರನ್ನು ಪೀಡಿಸುವ ಗ್ರಹಗಳಿಗೆ ಪರಿಹಾರ ಮಾಡಿ.

3. ರಾಶಿಗಳಲ್ಲಿ: ಜಾತಕದಲ್ಲಿ ಮಿಥುನ ರಾಶಿಯನ್ನು ಪೀಡಿಸುವ ಗ್ರಹಗಳಿಗೆ ಪರಿಹಾರ ಮಾಡಿ.

4. ಕೊಲೆಸ್ಟ್ರಾಲ್   (ಕೊಬ್ಬಿ) ಗೆ :ಶನಿ ಮತ್ತು ಗುರುವಿಗೆ ಪರಿಹಾರ ಅಥವಾ ಅವರನ್ನು ಬಿಡಿಸುವ ಗ್ರಹಗಳಿಗೆ.

5. ನರಗಳು ಮತ್ತು ರಕ್ತನಾಳಗಳನ್ನು ಗಡುಸತ್ವ  ಕಡಿಮೆ ಮಾಡಿ. ರಕ್ತದ ತಡೆಯಿಲ್ಲದ ಹರಿಯಲು ಬುಧ ಮತ್ತು ಕುಜರಿಗೆ ಪರಿಹಾರ ಮಾಡಿ.