ಮನೆ ಅಪರಾಧ ಅತಿಯಾದ ಮಾತ್ರೆ ಸೇವಿಸಿ ವೈದ್ಯಕೀಯ ವಿದ್ಯಾರ್ಥಿನಿ ಸಾವು

ಅತಿಯಾದ ಮಾತ್ರೆ ಸೇವಿಸಿ ವೈದ್ಯಕೀಯ ವಿದ್ಯಾರ್ಥಿನಿ ಸಾವು

0

ಮೈಸೂರು: ಅತಿಯಾದ ಮಾತ್ರೆ ಸೇವಿಸಿದ ವೈದ್ಯಕೀಯ ವಿಧ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಲಲಿತಾದ್ರಿಪುರ ಗ್ರಾಮದಲ್ಲಿ ನಡೆದಿದೆ.

ಡಾ.ಸಹನಾ ಮೃತ ದುರ್ದೈವಿ.ಜೆ.ಎಸ್.ಎಸ್.ಆಯುರ್ವೇದಿಕ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿಧ್ಯಾರ್ಥಿಯಾಗಿದ್ದ ಸಹನಾ ಮೂಲತಃ ಕೆ.ಆರ್.ಪೇಟೆ ತಾಲೂಕಿನವರು ಎಂದು ಹೇಳಲಾಗಿದೆ.

ಲಲಿತಾದ್ರಿಪುರ ಗ್ರಾಮದ ಬಾಡಿಗೆ ಮನೆಯಲ್ಲಿ ತಂಗಿದ್ದ ಸಹನಾ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.ಕೂಡಲೇ ಇವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆಂದು ಹೇಳಲಾಗಿದೆ.

ಅತಿಯಾದ ಮಾತ್ರೆ ಸೇವನೆ ಇವರ ಸಾವಿಗೆ ಕಾರಣ ಎನ್ನಲಾಗಿದೆ. ಇದು ಆಕಸ್ಮಿಕವೋ…ಆತ್ಮಹತ್ಯೆಯೋ ತನಿಖೆಯಲ್ಲಿ ಖಚಿತಪಡಿಸಬೇಕಿದೆ. ಎರಡು ವರ್ಷಗಳ ಹಿಂದೆ ಇವರ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದರೆಂದು ತಿಳಿದುಬಂದಿದೆ.

ಮೈಸೂರು ಗ್ರಾಮಾಂತರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ…

ಹಿಂದಿನ ಲೇಖನನಾಳೆ ಮುಸ್ಲಿಂ ಸಂಘಟನೆಯಿಂದ ಮೈಸೂರು ಬಂದ್ ಗೆ ಕರೆ
ಮುಂದಿನ ಲೇಖನಅಪ್ಪು 47ನೇ ಹುಟ್ಟುಹಬ್ಬ:’ಜೇಮ್ಸ್’ ಚಿತ್ರ ಬಿಡುಗಡೆ