ಸೂಚನೆ : ಬೆಟ್ಟದ ನೆಲ್ಲಿಕಾಯಿಯನ್ನು ಪ್ರತ್ಯೇಕವಾಗಿ ಇತರ ಔಷಧಿ ದ್ರವ್ಯಗಳೊಡನೆ ಸೇರಿಸಿ ತಯಾರಿಸಿದ ಔಷಧಿಗಳ ಹೆಸರನ್ನು ಪಟ್ಟಿ ಮಾಡಿದೆ ತ್ರಿಫಲ ಜೊತೆಗಿನ ಔಷಧಿಗಳನ್ನು ಪಟ್ಟಿಯಲ್ಲಿ ಸೇರಿಸಿ ಇರುವುದಿಲ್ಲ.
ಅರ್ಟಿಪ್ಲೆಕ್ಸ್ ಕ್ಯಾಪ್ಸೂಲ್ : ಅಲರ್ಜಿಯಿಂದ ಉಂಟಾದ ಮೈ ತುರಿಕೆಯನ್ನು ನಿವಾರಿಸುತ್ತದೆ.
ಆಪಿಟಾಯ್ಜ್ ಸಿರಪ್ : ಹಸಿವಿಲ್ಲದವರಿಗೆ ಮತ್ತು ಅಜೀರ್ಣಕ್ಕೆ ಉಪಯುಕ್ತ ವಾಕರಿಕೆಯನ್ನು ಕಡಿಮೆ ಮಾಡುತ್ತದೆ.
ಅಬಾನ ಮಾತ್ರೆಗಳು : ಅಧಿಕ ಕೊಬ್ಬಿನಾಂಶ, ರಕ್ತದ ಏರೋತ್ತಡ ಹೃದಯ ಸಂಬಂಧದ ತೊಂದರೆಗಳಿಗೆ ಉಪಯುಕ್ತ.
ಅಭಯಾರಿಷ್ಟ : ಮೂಳೆ ರೋಗ, ಅಲರ್ಜಿ ಮತ್ತು ಮಲಬದ್ಧತೆಗೆ ಉಪಯುಕ್ತ.
ಅಮೃತ ಪ್ರಾಶ ಫೃತಂ : ವೀರ್ಯಾಣುಗಳ ಕೊರತೆ ನಿವಾರಣೆಗೆ,ಸಾಮಾನ್ಯ ಮತ್ತು ಲೈಂಗಿಕ ದುರ್ಬಲತೆಗೆ, ಶ್ವೇತ ಪ್ರದರ, ತೂಕ ಕಳೆದುಕೊಳ್ಳುವಿಕೆಯ ಚಿಕಿತ್ಸೆಗೆ ಉಪಯುಕ್ತ.
ಅಮೃತ ಮೆಹಾರಿ ಚೂರ್ಣ : ಮಧುಮೇಹ ಮತ್ತು ಮಧುಮೇಹದಿಂದ ಉಂಟಾಗುವ ಇತರ ತೊಂದರೆಗಳ ಚಿಕಿತ್ಸೆಗೆ ಉಪಯುಕ್ತ.
ಅಮೃತಾಮಲಕ ತೈಲ : ಉಷ್ಣದಿಂದ ಉಂಟಾದ ಕಣ್ಣುರಿ, ಕಣ್ಣಿನಿಂದ ನೀರು ಸುರಿಯುವುದು, ಕಣ್ಣು ಮಂಜಾಗುವುದು ಮತ್ತು ಉಷ್ಣದ ಶೂಲೆಗೆ ಬಾಹ್ಯ ಲೇಪನವಾಗಿ ಉಪಯುಕ್ತ.
ಅರಗ್ವಧಾರಿಷ್ಟಂ : ಭೇಧಿಕಾರಕ ಮತ್ತು ರಕ್ತವನ್ನು ಶುದ್ದಿ ಮಾಡುತ್ತದೆ. ವರ್ಣ ಮತ್ತು ತೊನ್ನು ಚಿಕಿತ್ಸೆಗೆ ಉಪಯುಕ್ತ. ಜಂತುಹುಳಗಳನ್ನು ನಾಶಪಡಿಸುತ್ತದೆ.
ಅಲ್ಸರೆಕ್ಸ್ ಮಾತ್ರೆಗಳು : ಕರುಳಿನ ಹುಣ್ಣಿನ ಚಿಕಿತ್ಸೆಗೆ ಉಪಯುಕ್ತ.ವಾಕರಿಕೆ ಮತ್ತು ವಾಂತಿಯನ್ನು ಕಡಿಮೆ ಮಾಡುತ್ತದೆ.
ಅಲೈವ್ ಸಿರಫ್ : ಜಾಂಡೀಸ್ ಕಾಯಿಲೆಗೆ, ಹಸಿವಿಲ್ಲದಿರುವಿಕೆಗೆ,ಮಲಬದ್ಧತೆ ಕೊಬ್ಬಿದ ಪಿತ್ತಜನಾಂಗದ ಚಿಕಿತ್ಸೆಗೆ ಉಪಯುಕ್ತ,ಮಕ್ಕಳ ಬೆಳವಣಿಗೆಗೆ ಸಹಕಾರ.
ಅವಿಪತ್ತಿ ಚೂರ್ಣಂ : ಹುಳಿತೇಗು, ಅಜೀರ್ಣ, ಹೊಟ್ಟೆಯುಬ್ಬರ ಮತ್ತು ಮಲಬದ್ಧತೆಗೆ ಉಪಯುಕ್ತ.
ಅಸ್ತಿಪೋಷಕ್ ಮಾತ್ರೆಗಳು : ವಯಸ್ಸಾದವರಲ್ಲಿ ಮತ್ತು ಶಾಶ್ವತ ಮುಟ್ಟು ನಿಲುಗಡೆಯಾದ ಸ್ತ್ರೀಯರಲ್ಲಿ ಕಂಡುಬರುವ ಎಲುಬು, ತೂತಿಕೆ ರೋಗ, ಮುರಿದ ಮೂಳೆ ಕ್ಯಾಲ್ಸಿಯಂ ಕೊರತೆ,ಗೇಣ್ಣು ನೋವು ಮತ್ತು ಬಾಲನೆರೆ ಚಿಕಿತ್ಸೆಗೆ ಉಪಯುಕ್ತ.
ಆಟೋ ಜೈಮ್ ಸಿರಪ್ : ಜೀರ್ಣಶಕ್ತಿಯೆಯನ್ನು ಉತ್ತಮಪಡಿಸುತ್ತದೆ. ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುತ್ತದೆ. ಆರಾಮವೆವೆನಿಸುವ ಅನುಭವವಾಗುತ್ತದೆ.
ಆಫ್ ಕೇರ್ ಕಣ್ಣಿನ ಔಷಧಿ : ಎಲ್ಲಾ ಬಗೆಯ ಕಣ್ಣಿನ ತೊಂದರೆಗಳಿಗೆ ಉಪಯುಕ್ತ ಮದ್ರಾಸ ಐ ಕಾಯಿಲೆಗೆ ಉಪಯುಕ್ತ.
ಆಮ್ಲ ಮಾತ್ರೆಗಳು : ಆರೋಗ್ಯ ವರ್ಧಕ ಟಾನಿಕ್, ಕಾಯಕಲ್ಪ ಗುಣವಿದೆ. ರೋಗನಿರೋಧಕ ಶಕ್ತಿಯನ್ನುಂಟು ಮಾಡುತ್ತದೆ. ಇದರಲ್ಲಿ ಜೀವಸತ್ವ ಸಿ ಹೆಚ್ಚಾ ಗಿರುವುದರಿಂದ ಮುಪ್ಪಿನ ಲಕ್ಷಣಗಳು ಉಂಟಾಗದಂತೆ ತಡೆಯುತ್ತದೆ ಮತ್ತು ಕಣ್ಣಿನ ದೃಷ್ಟಿ ಮತ್ತು ಕೂದಲು ಬೆಳವಣಿಗೆಯನ್ನು ತಮ್ಮಪಡಿಸುತ್ತದೆ.
ಆಮ್ಲಕ್ಕಿ ರಸಾಯನ : ಕಾಮೋತೇಜಕ, ದೇಹಕ್ಕೆ ಶಕ್ತಿ ಮತ್ತು ಚೈತನ್ನವನ್ನುಂಟು ಮಾಡುತ್ತದೆ.
ಆಮ್ಲ ಕೇಶ ತೈಲ : ಈ ತೈಲ ಕೂದಲನ್ನು ಮೃದುವಾಗಿ ಮತ್ತು ಕಪ್ಪಾಗುವಂತೆ ಮಾಡುತ್ತದೆ ಕೂದಲು ಚೆನ್ನಾಗಿ ಬೆಳವಣಿಗೆ ಯಾಗಲು ಈ ತೈಲ ಸಹಕಾರಿ.
ಆಮ್ಲ ತೈಲ : ಕೂದಲು ಬೆಳವಣಿಗೆಗೆ ಉಪಯುಕ್ತ. ಕೂದಲನ್ನು ಮೃದುಗೊಳಿಸಿ ಹೊಳಪಾಗುವಂತೆ ಮಾಡುತ್ತದೆ.
ಆಮ್ಲ ಪಿತ್ತಾಂತಹ ಯೋಗ ಮಾತ್ರೆಗಳು : ಆಮ್ಲ ಪಿತ್ತ, ಜೀರ್ಣಕಾರಕ,ಹೃದಯದ ಊರಿ, ವಾಂತಿ, ಅಜೀರ್ಣ ಹಸಿವಿಲ್ಲದಿರುವಿಕೆ, ಪಿತ್ತ ಜನಾಂಗದ ತೊಂದರೆಗಳಿಗೆ ಉಪಯುಕ್ತ ವಾತರಿಕೆಯಾಗದಂತೆ ತಡೆಯುತ್ತದೆ.
ಆಯುರ್ ಸುಲಿನ್ : ಮಧುಮೇಹ ಚಿಕಿತ್ಸೆಗೆ ಉಪಯುಕ್ತ.
ಆಲೂ ಪೆಕ್ಟ್ ಮಾತ್ರೆಗಳು : ತಲೆ ಹೊಟ್ಟು ಕಡಿಮೆಯಾಗುತ್ತದೆ. ಮತ್ತು ಕೂದಲು ಉದುರುವುದು ನಿಲ್ಲುತ್ತದೆ. ಹೇನುಕರೆ ವಾಸಿಯಾಗುತ್ತದೆ.














