ದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಮೀನುಗಾರಿಕೆ ವಲಯದ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ಸಭೆಯಲ್ಲಿ ಆಳ ಸಮುದ್ರ ಮೀನುಗಾರಿಕೆ , ಸಮುದ್ರ ಮೀನು ರಫ್ತು ಹಾಗೂ ಮೀನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಪ್ರಗತಿಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆಗಳು ನಡೆದವು.
ಪ್ರಧಾನಿ ಮೋದಿಯವರು ಈ ವಲಯದಲ್ಲಿ ಆಧುನಿಕತೆಯ ಅಗತ್ಯತೆ ಹಾಗೂ ರಾಷ್ಟ್ರೀಯ ಆರ್ಥಿಕತೆಗೆ ಮೀನುಗಾರಿಕೆ ನೀಡುವ ಪಾಲು ಬಗ್ಗೆ ಗಮನ ಸೆಳೆದರು.
ಈ ಹಿಂದೆ, ಏಪ್ರಿಲ್ 28 ರಂದು ಮುಂಬೈನಲ್ಲಿ ₹255 ಕೋಟಿ ಮೊತ್ತದ ಯೋಜನೆಗಳು ಆರಂಭಗೊಂಡಿದ್ದು, ಈ ಸಭೆಯಲ್ಲಿ ಅವುಗಳ ಅನುಷ್ಠಾನ ಪ್ರಗತಿಯು ಪರಿಶೀಲಿಸಲಾಯಿತು.
ಈ ಯೋಜನೆಗಳು ಭಾರತದ ಏಳು ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯವಸ್ಥಿತ ಮೀನುಗಾರಿಕೆ, ರಫ್ತು ದಿಕ್ಕಿನಲ್ಲಿ ಸುಧಾರಣೆ, ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿ ಗುರಿಯಾಗಿವೆ.
ಭಾರತವು ವಿಶ್ವದಲ್ಲೇ ಪ್ರಮುಖ ಮೀನು ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದ ಕೋಟ್ಯಂತರ ಕುಟುಂಬಗಳಿಗೆ ಮೀನುಗಾರಿಕೆ ಮೂಲ ಆದಾಯದ ಮೂಲವಾಗಿದೆ. ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ.














