ಮನೆ ರಾಜಕೀಯ “ಮೆಹಬೂಬಾ’ ಸಿನಿಮಾ ವಿಮರ್ಶೆ

“ಮೆಹಬೂಬಾ’ ಸಿನಿಮಾ ವಿಮರ್ಶೆ

0

ಅನ್ಯ ಧರ್ಮದ ಜೋಡಿಯ ಪ್ರೀತಿ, ಪ್ರೇಮ ಎಂದಾಗ ಅಲ್ಲೊಂದಿಷ್ಟು ರೋಚಕತೆ ಇರುತ್ತದೆ, ಸಹಜವಾಗಿಯೇ ಅಡ್ಡ-ಆತಂಕ, ಜೊತೆಗೆ ಮುಂದೇನಾಗುತ್ತದೆ ಎಂಬ ಕುತೂಹಲ ಸಹಜವಾಗಿಯೇ ಇರುತ್ತದೆ. ಅಂತಹ ಕುತೂಹಲವನ್ನು ತನ್ನೊಳಗಿಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ “ಮೆಹಬೂಬಾ’.

ಮೊದಲೇ ಹೇಳಿದಂತೆ ಇದೊಂದು ಅಪ್ಪಟ ಲವ್‌ ಸ್ಟೋರಿ. ರಾಜಕೀಯ ಹಿನ್ನೆಲೆಯ ಹುಡುಗನಿಗೆ ಮುಸ್ಲಿಂ ಹುಡುಗಿಯೊಂದಿಗೆ ಪ್ರೇಮಾಂಕುರವಾಗುತ್ತದೆ. ಅಲ್ಲಿಂದ ಇಡೀ ಸಿನಿಮಾದ “ಕಲರ್‌’ ಕೂಡಾ ಬದಲಾಗುತ್ತಾ ಹೋಗುತ್ತದೆ.

ನಿರ್ದೇಶಕರು ಇದನ್ನು ಕೇವಲ ಒಂದು ಲವ್‌ ಸ್ಟೋರಿಯಾಗಿ ತೋರಿಸದೇ, ಇದರ ಸುತ್ತಲಿನ ಹಲವು ಸೂಕ್ಷ್ಮ ಅಂಶಗಳನ್ನು ತೆರೆದಿಡುತ್ತಾ ಹೋಗಿದ್ದಾರೆ. ಇದೇ ಕಾರಣದಿಂದ “ಮೆಹಬೂಬಾ’ ಕೇವಲ ಒಂದು ಲವ್‌ ಸ್ಟೋರಿಯಾಗದೇ, ಆಲೋಚಿಸುವ ಹಲವು ಅಂಶಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕುವ ಸಿನಿಮಾವಾಗಿ ಗಮನ ಸೆಳೆಯುತ್ತದೆ.

ಚಿತ್ರದಲ್ಲಿ ಹಲವು ತಿರುವುಗಳು, ಆಯಾಮಗಳು ಬಂದು ಪ್ರೇಕ್ಷಕರನ್ನು ಸದಾ “ಎಚ್ಚರ’ವಾಗಿಡುತ್ತಲೇ ಸಿನಿಮಾ ಸಾಗುತ್ತದೆ. ಸಾಕಷ್ಟು ಅಂಶಗಳನ್ನು ಕಥೆಯಲ್ಲಿ ಹೇಳಬೇಕೆಂಬ ನಿರ್ದೇಶಕರ ಉತ್ಸಾಹ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಎಲ್ಲಾ ಓಕೆ, ಸಿನಿಮಾದ ಅಂತ್ಯ ಏನು ಎಂದು ನೀವು ಕೇಳಬಹುದು. ಆ ಕುತೂಹಲಕ್ಕೆ ತೆರೆಮೇಲೆ ಉತ್ತರ ಸಿಗುತ್ತದೆ.

ನಾಯಕ ಶಶಿ ನಟನೆಯಲ್ಲಿ ಭರವಸೆ ಮೂಡಿಸಿದ್ದಾರೆ. ಜೊತೆಗೆ ಆ್ಯಕ್ಷನ್‌ ದೃಶ್ಯಗಳಲ್ಲೂ ಗಮನ ಸೆಳೆಯುತ್ತಾರೆ. ನಾಯಕಿ ಪಾವನಾ ಮುಸ್ಲಿಂ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಬುಲೆಟ್‌ ಪ್ರಕಾಶ್‌, ಜೈ ಜಗದೀಶ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

ಹಿಂದಿನ ಲೇಖನಜೆಸಿಬಿ- ಟಿ.ವಿ.ಎಸ್ ಎಕ್ಸ್ ಎಲ್ ನಡುವೆ ಅಪಘಾತ: ವ್ಯಕ್ತಿ ಸಾವು
ಮುಂದಿನ ಲೇಖನಇಂಡಸ್ ಕಂಪನಿ ಮೊಬೈಲ್ ನೆಟ್​​ ವರ್ಕ್ ಟವರ್ ಬೆಂಕಿಗಾಹುತಿ