ಮನೆ ಕ್ರೀಡೆ ಮೆಲ್ಟ್‌’ವಾಟರ್‌ ಚಾಂಪಿಯನ್ಸ್ ಟೂರ್ ಫೈನಲ್ಸ್ ಚೆಸ್‌ ಟೂರ್ನಿ: ಅನೀಶ್ ಗಿರಿಯನ್ನು ಪರಾಭವಗೊಳಿಸಿದ ಭಾರತದ ಎರಿಗೈಸಿ

ಮೆಲ್ಟ್‌’ವಾಟರ್‌ ಚಾಂಪಿಯನ್ಸ್ ಟೂರ್ ಫೈನಲ್ಸ್ ಚೆಸ್‌ ಟೂರ್ನಿ: ಅನೀಶ್ ಗಿರಿಯನ್ನು ಪರಾಭವಗೊಳಿಸಿದ ಭಾರತದ ಎರಿಗೈಸಿ

0

ಸ್ಯಾನ್‌ ಫ್ರಾನ್ಸಿಸ್ಕೊ: ನಡೆಯುತ್ತಿರುವ ಮೆಲ್ಟ್‌’ವಾಟರ್‌ ಚಾಂಪಿಯನ್ಸ್ ಟೂರ್ ಫೈನಲ್ಸ್ ಚೆಸ್‌ ಟೂರ್ನಿಯ ಐದನೇ ಸುತ್ತಿನಲ್ಲಿ ಭಾರತದ ಗ್ರ್ಯಾಂಡ್‌’ಮಾಸ್ಟರ್ ಅರ್ಜುನ್ ಎರಿಗೈಸಿ ಅವರು,  ನೆದರ್ಲೆಂಡ್ಸ್‌’ನ ಅನೀಶ್ ಗಿರಿ ಅವರನ್ನು ಪರಾಭವಗೊಳಿಸಿದರು.

ಶನಿವಾರ ನಡೆದ ಪಂದ್ಯದಲ್ಲಿ ಅರ್ಜುನ್‌ 2.5–1.5ರಿಂದ ನೆದರ್ಲೆಂಡ್ಸ್‌ನ ಗ್ರ್ಯಾಂಡ್‌’ಮಾಸ್ಟರ್ ವಿರುದ್ಧ ಗೆದ್ದರು.

ಭಾರತದ ಇನ್ನೋರ್ವ ಯುವ ಗ್ರ್ಯಾಂಡ್‌ಮಾಸ್ಟರ್ ಆರ್‌. ಪ್ರಗ್ನಾನಂದ ಅವರು ಜಿದ್ದಾಜಿದ್ದಿನ ಸೆಣಸಾಟದಲ್ಲಿ ಪೋಲೆಂಡ್‌ನ ಜಾನ್ ಕ್ರಿಸ್ಟಾಫ್ ಡುಡಾ 3.5–3.5ರಿಂದ ಡ್ರಾ ಸಾಧಿಸಿದರು.

ಅರ್ಜುನ್ ಅವರಿಗೆ ಇದು ಟೂರ್ನಿಯಲ್ಲಿ ಎರಡನೇ ಜಯವಾಗಿದೆ. ಸದ್ಯ ಅವರು ಮತ್ತು 17 ವರ್ಷದ ಪ್ರಗ್ನಾನಂದ ತಲಾ ಆರು ಪಾಯಿಂಟ್ಸ್ ಗಳಿಸಿದ್ದಾರೆ.

ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ 4–3ರಿಂದ ವಿಯೆಟ್ನಾಂನ ಕುವಾಂಗ್ ಲಿಯೆಮ್ ಅವರನ್ನು ಸೋಲಿಸಿದರು.

ಮತ್ತೊಂದು ಪಂದ್ಯದಲ್ಲಿ ಅಮೆರಿಕದ ವೆಸ್ಲಿ ಸೊ 3–0ರಿಂದ ಅಜರ್‌’ಬೈಜಾನ್‌ನ ಶಕ್ರಿಯಾರ್ ಮಮೆದ್ಯರೊವ್ ಅವರನ್ನು ಮಣಿಸಿದರು.

ಆಡಿದ ಎಲ್ಲ ಪಂದ್ಯಗಳಲ್ಲೂ ಗೆದ್ದು 15 ಪಾಯಿಂಟ್ಸ್ ಗಳಿಸಿರುವ ಕಾರ್ಲ್‌ಸನ್‌ ಅಗ್ರಸ್ಥಾನದಲ್ಲಿದ್ದಾರೆ. ಡುಡಾ (9 ಪಾಯಿಂಟ್ಸ್) ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಗ್ನಾನಂದ ಮತ್ತು ಅರ್ಜುನ್‌ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದ್ದಾರೆ.

ಹಿಂದಿನ ಲೇಖನಮೇಲುಕೋಟೆ: ಮರದ ಕೊಂಬೆ ಬಿದ್ದು, ಮೂವರು ವಿದ್ಯಾರ್ಥಿಗಳು , ಓರ್ವ ಶಿಕ್ಷಕನಿಗೆ ಗಂಭೀರ ಗಾಯ
ಮುಂದಿನ ಲೇಖನಹಾಸನದ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ತುಮಕೂರಿನಲ್ಲಿ ಪತ್ತೆ