1. ಸ್ತ್ರೀಯರ ಹೊಟ್ಟೆ ನೋವು, ಹೊಟ್ಟೆ ಉಬ್ಬಸ, ಕ್ರೀಮಿ ಇವುಗಳಲ್ಲಿ ಅಶೋಕ ವೃಕ್ಷದ ಚೂರ್ಣ ಅಂದರೆ ತೊಗಟೆ, ಹೂವು ಬೀಜ 15 ಗ್ರಾಂ ಜೇನಿನಾಗಲೀ ಹಾಲಿನಲ್ಲಾಗಲೀ, ಬಿಸಿ ನೀರಿನಲ್ಲಾ ಗಲೀ ಸೇವಿಸಿದರೆ ಗುಣವಾಗುವುದು.
2.ರಕ್ತ ಪದರದಲ್ಲಿ ಇದರ ಚೂರ್ಣ ಅಥವಾ ಕಷಾಯ ಸೇವಿಸಿದರೆ ರಕ್ತಸ್ರಾವ ನಿಂತುಹೋಗುತ್ತದೆ.
3.ಶ್ವೇತ ಪದರ, ಇದರ ಚೂರ್ಣವನ್ನು ಹಾಲಿನಲ್ಲಿ ಅರ್ಧ ತೊಲದಂತೆ ಎರಡು ಹೊತ್ತು ಸೇವಿಸಬೇಕು.
4.ಬಾಳೆಯ ಹೂವನ್ನು ತಂದು ಒರಳಲ್ಲಿ ಕುಟ್ಟಿ ಬಂದ ರಸವನ್ನು ಮೊಸರಿನಲ್ಲಿ ಕದಡಿ ಕುಡಿಯಲು ರಕ್ತದ ಋತುಸ್ರಾವ ಕಡಿಮೆಯಾಗುವುದು.
5.ನೆಲ್ಲಿಕಾಯಿಯನ್ನು ಕುಟ್ಟಿ ರಸವನ್ನು ರಕ್ತಸ್ರಾವ ಅಧಿಕವಾಗಿ ಆಗುವ ಹೆಣ್ಣು ಮಕ್ಕಳಿಗೆ ಕುಡಿಸಿದರೆ ಗುಣ.
6.ಋತುಸ್ರಾವ ಹೆಚ್ಚಾದಾಗ ಎಳೆಯಾದಾದ ಬೆಂಡೆಕಾಯಿಯನ್ನು ಕಲ್ಲು ಸಕ್ಕರೆಯ ಸಹಿತ ತಿನ್ನುತ್ತಿದ್ದರೆ ಸ್ರಾವ ಕಡಿಮೆಯಾಗುವುದು.
7.ಬೂದಗುಂಬಳಕಾಯಿ ಲೇಹ್ಯ, ಹುಳಿ, ಸಾರು, ಪಲ್ಯ ಸೇವಿಸಿದರೆ ಋತುಸ್ರಾವ ನಿಗದಿತ ವೇಳೆಯಲ್ಲಿ ಸಮರ್ಪಕವಾಗಿ ಆಗುವುದು
8.ದಂಡಿನ ಸೊಪ್ಪನ್ನು ತೊಳೆದು ಹೆಚ್ಚಿ ಬೇಯಿಸಿ ತಿನ್ನುವುದರಿಂದ ಋತುಮತಿಯಾಗಿ ರಕ್ತ ಹೆಚ್ಚಾ ಹೊಗುತ್ತಿದ್ದರೆ ಕಡಿಮೆ ಆಗುವುದು.
9.ಎಲೆಕೋಸನ್ನು ಸಣ್ಣಗೆ ಹಚ್ಚಿ ಬೆಯಿಸಿ ತಿನ್ನುವುದರಿಂದ ಋತುಮತಿಯಾಗಿ ರಕ್ತ ಹೆಚ್ಚಾಗಿ ಹೋಗುತ್ತಿದ್ದರೆ ಕಡಿಮೆ ಆಗುವುದು.
10.ಅಶೋಕಾರಿಷ್ಠವು ಎಲ್ಲಾ ವಿಧವಾದ ಸ್ತ್ರೀ ರೋಗಗಳಿಗೂ ಉತ್ತಮ ಔಷಧಿಯಾಗಿದೆ.