.4. ಮಾನಸಿಕ ಕಾರಣಗಳು : 1) ಏಕಾಗ್ರತೆಯ ಕೊರತೆ : ತರಗತಿಯಲ್ಲಿ ಕುಳಿತು ಪಾಠ ಕೇಳಲು, ಆನಂತರ ಅಧ್ಯಯನ ಮಾಡಲು, ಹೋಂವರ್ಕ್ ಮಾಡಲು ಮನಸ್ಸಿನ ಏಕಾಗ್ರತೆ ಬಹಳ ಮುಖ್ಯ ಸಾಮಾನ್ಯವಾಗಿ ಗರಿಷ್ಠ ಏಕಾಗ್ರತಾ ಅವಧಿ 30ರಿಂದ 45 ನಿಮಿಷಗಳು, ಆನಂತರ ಏಕಾಗ್ರತೆ ಕುಗ್ಗತೊಡಗುತ್ತದೆ. ಆದರೆ ಆಂತರಿಕ ಮತ್ತು ಬಾಹ್ಯ ಕಾರಣಗಳಿಂದ ಮನಸ್ಸಿನ ಏಕಾಗ್ರತೆ ನಷ್ಟವಾಗುತ್ತದೆ
ಆಂತರಿಕ ಕಾರಣಗಳು : ಯಾವುದೇ ಚಿಂತೆ, ವ್ಯಥೆ, ಬೇಸರ, ದುಃಖ, ಸಿಟ್ಟುಕೋಪಗಳು, ಭಯ ಆತಂಕಗಳು, ದ್ವಂದ್ವ, ಗೊಂದಲಗಳು, ಇತರ ಚಟುವಟಿಕೆ-ಮತ್ತು-ವ್ಯಕ್ತಿ ವಿಶೇಷಗಳ ಮೇಲೆ ಆಕರ್ಷಣೆಗಳು ಮನಸ್ಸನ್ನು ತಮ್ಮೆಡೆಗೆ ಆಕರ್ಶಿಸಿ, ಏಕಾಗ್ರತೆ ಯನ್ನು ಭಂಗ ಮಾಡುತ್ತವೆ. ಉಪವಾಸ, ತುಂಬಿದ ಹೊಟ್ಟೆ, ನಿದ್ರೆ ಇಲ್ಲದೇ ಉಂಟಾಗುವ ದಣಿವು, ಲೈಂಗಿಕ ಆಸೆ ಬಯಕೆಗಳು, ತಪ್ಪಿತಸ್ಥ ಆಲೋಚನೆಗಳು ಕೂಡ ಏಕಾಗ್ರತೆಯನ್ನು ನಾಶಮಾಡಬಲ್ಲವು.
ಬಾಹ್ಯ ಕಾರಣಗಳು : ಪರಿಸರದಲ್ಲಿ ನಡೆಯುವ ಚಟುವಟಿಕೆಗಳು ರೇಡಿಯೋ
ಟೀವಿ ಕಾರ್ಯಕ್ರಮಗಳು, ಗದ್ದಲ, ಅಹಿತಕಾರಿ ವಾತಾವರಣ, ಅಧ್ಯಯನಕ್ಕೆ ಅಡ್ಡಿಯುಂಟು ಮಾಡುವ ಯಾವುದೇ ವಸ್ತು, ವ್ಯಕ್ತಿ ವಿಷಯಗಳು ಏಕಾಗ್ರತೆಯನ್ನು ಮೊಟಕುಗೊಳಿಸುತ್ತವೆ. ಕೆಲವು ಮಕ್ಕಳಲ್ಲಿ ಮಿದುಳಿನ ಸಣ್ಣ ಪ್ರಮಾಣದ ಹಾನಿಯಿಂದ, ಏಕಾಗ್ರತೆ ಪ್ರಾರಂಭದಿಂದಲೂ ಕಡಿಮೆ ಇರುತ್ತದೆ.
ಏಕಾಗ್ರತೆಯ ವೃದ್ಧಿ ಹೇಗೆ : ದೇಹದ ಆರೋಗ್ಯ, ಮನಸ್ಸಿನ ನೆಮ್ಮದಿ, ಪ್ರಶಾಂತ ಪರಿಸರವು ಏಕಾಗ್ರತೆಯನ್ನು ವೃದ್ಧಿಸಲು ನೆರವಾಗುತ್ತವೆ. ಹಿತಮಿತ ಆಹಾರ ಸೇವನೆ, ಆರು ಗಂಟೆಗಳ ಭಂಗವಿಲ್ಲದ ನಿದ್ರೆ, ವ್ಯಾಯಾಮ, ಮನಸ್ಸಿಗೆ ಮುದ ನೀಡುವ ಹವ್ಯಾಸ-ಚಟುವಟಿಕೆಗಳು, ಪಂಚೇಂದ್ರಿಯಗಳಿಗೆ ಮುದ ನೀಡುವ, ವಿಕರ್ಶಣೆಗಳಿಲ್ಲದ ವಾತಾವರಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು.
ii) ಕಲಿಯುವ ಇಚ್ಛೆ, ಶ್ರದ್ಧೆ ( Motivation) : ಶಾಲೆ-ಕಾಲೇಜಿಗೆ ಏಕೆ ಹೋಗಬೇಕು. ಪಠ್ಯವಿಷಯಗಳನ್ನು ಏಕೆ ಕಲಿಯಬೇಕು, ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಏಕೆ ಕಷ್ಟಪಡಬೇಕು. ಈ ಎಲ್ಲ ಕೆಲಸ-ಶ್ರಮಕ್ಕೆ ಏನು ಲಾಭ, ಏನು ಪುರಸ್ಕಾರ, ಲಾಭ-ಅನುಕೂಲ-ಪುರಸ್ಕಾರ ಗಳಿಸಿಕೊಡುವ ಚಟವಟಿಕೆ-ಕೆಲಸ ಮಾಡಲು ವ್ಯಕ್ತಿ ಇಚ್ಛೆಪಡುತ್ತಾನೆ. ಶ್ರದ್ದೆ ತೋರಿಸುತ್ತಾನೆ. ಲಾಭ-ಅನುಕೂಲ ವಿಲ್ಲದ ಕೆಲಸವನ್ನು ಯಾರೂ ಮಾಡಲು ಇಚ್ಛೆಪಡುವುದಿಲ್ಲ. ತಂದೆತಾಯಿಗಳು ಕೊಡುವ ಬಹುಮಾನ, ಪ್ರೋತ್ಸಾಹಗಳು ವಿದ್ಯಾರ್ಥಿಯ ಕಲಿಯುವ ಶ್ರದ್ಧೆಯನ್ನು ಹೆಚ್ಚಿಸುತ್ತವೆ. ವಿದ್ಯೆಯ ಮಹತ್ವವನ್ನು ಹೇಳಿಕೊಡುವ ಶಿಕ್ಷಕರು, ವಿದ್ಯಾವಂತರಿಗೆ ಗೌರವ ಕೊಡುವ ಸಮಾಜ ವಿದ್ಯಾರ್ಥಿಗಳಲ್ಲಿ ಕಲಿಯುವ ಶ್ರದ್ಧೆಯನ್ನು ಹೆಚ್ಚಿಸುತ್ತದೆ. ಆದರೆ ಈಗಾಗಿರುವುದೇನು? ಪದವೀಧರರಿಗೆ ನಿರುದ್ಯೋಗ, ಪ್ರತಿಭೆಗೆ ಮಾನ್ಯತೆ ಇಲ್ಲ. ಹಣ, ವಶೀಲಿ, ಶಿಫಾರಸು, ಅಡ್ಡಮಾರ್ಗಗಳಿಂದ ಪದವಿಯನ್ನು ಸಂಪಾದಿಸಬಹುದು, ಉದ್ಯೋಗವನ್ನೂ ಸಂಪಾದಿಸಬಹುದು. ವೃತ್ತಿಪರ ಕೋರ್ಸ್‌ಗಳಿಗೇ ಬೆಲೆ-ಮಾನ್ಯತೆ ಉಳಿದ ಕೋರ್ಸ್‌ಗಳಿಗೆ ಬೆಲೆ ಇಲ್ಲ. ಹೀಗಾಗಿ ವಾಣಿಜ್ಯ ಮತ್ತು ಕಲಾ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಇಚ್ಚೆ, ಶ್ರದ್ದೆ ಕಡಿಮೆಯಾಗಬಹುದು.
ಯಾವುದೇ ಕಾರಣದಿಂದ, ಅತೃಪ್ತಿ, ನೋವು, ನಿರಾಶೆಗೆ ಒಳಗಾದ ವಿದ್ಯಾರ್ಥಿ ತಾತ್ಕಾಲಿಕವಾಗಿ ಅನಂತರ ದೀರ್ಘಕಾಲ
ಕಳೆಯುವುದರಿಂದ ಈಚೆ ಮತ್ತು ಶ್ರದ್ಧೆ ಹಾಗೂ ಉತ್ಸಾಹಗಳನ್ನು ಕಳೆದುಕೊಳ್ಳುತ್ತಾನೆ ಎಂಬುದನ್ನು ಎಲ್ಲರೂ ಗಮನಿಸಬೇಕು.
ವಿದ್ಯಾಭ್ಯಾಸದ ಗುರಿ ಉದ್ಯೋಗ ಸಂಪಾದನೆಗಷ್ಟೇ ಸೀಮಿತವಾಗಿರಬಾರದ ಅದರ ಗುರಿ ವ್ಯಕ್ತಿತ್ವ ವಿಕಾಸ, ಜೀವನ ನಡೆಸಲು ಬೇಕಾದ ಜ್ಞಾನ ಮತ್ತು ಕೌಶಲಗಳನ್ನು ಕಲಿಯುವುದು, ಕಷ್ಟನಷ್ಟ ನೋವು ನಿರಾಶೆ ಅವಮಾನಗಳನ್ನು ಎದುರಿಸುವ ಧೈಯ್ಯ-ಮನೋಭಾವವನ್ನು ಬೆಳೆಸಿಕೊಳ್ಳುವುದು. ಪ್ರಕೃತಿದತ್ತ ದೈಹಿಕ ಮಾನಸಿಕ ಸಾಮರ್ಥ್ಯಗಳನ್ನು ಪೂರ್ಣವಾಗಿ ಬಳಸಿಕೊಳ್ಳುವ ಶಕ್ತಿಯನ್ನು ಸಂಪಾದಿಸು ವುದು ಇದು ಮನವರಿಕೆಯಾದರೆ ಪ್ರತಿವಿದ್ಯಾರ್ಥಿಯ ಕಲಿಕಾ ಇಚ್ಛೆ, ಶ್ರದ್ಧೆ, ಶಖಂಡಿತ ಉತ್ತಮಗೊಳ್ಳುತ್ತದೆ.
ಯಾವುದೇ ವಿದ್ಯಾರ್ಥಿಯ ಇಚ್ಛೆ, ಶ್ರದ್ಧೆ ಕಡಿಮೆಯಾದಾಗ, ಅದಕ್ಕೆ ಕಾರಣವನ್ನು ಪತ್ತೆ ಹಚ್ಚಿ, ಸರಿಪಡಿಸಬೇಕಾದದ್ದು ಪಾಲಕರ ಮತ್ತು ಶಿಕ್ಷಕರ ಮುಖ್ಯ ಹೊಣೆಯಾಗಿರುತ್ತದೆ.
iii) ಕೀಳರಿಮೆ : ಆತ್ಮವಿಶ್ವಾಸದ ಕೊರತೆ-ಶಾಲೆಯಲ್ಲಿ ಎಲ್ಲರೊಡನೆ ಬೆರೆತು.ಸಹಪಾಠಿಗಳೊಂದಿಗೆ ಸ್ಪರ್ಧಿಸಿ, ವೇಗವಾಗಿ ಕಲಿಯಲು ಹಾಗೂ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಲು ವಿದ್ಯಾರ್ಥಿಗೆ ತನ್ನ ಬಗ್ಗೆ ಆತ್ಮವಿಶ್ವಾಸವಿರ ಬೇಕು. ಸ್ವಾಭಿಮಾನವಿರಬೇಕು. ಕೀಳರಿಮೆ ಇರುವ ವಿದ್ಯಾರ್ಥಿ, ತನ್ನನ್ನು ಇತರರಿಗಿಂತ ಕಡಿಮೆ, ಕೀಳು ಎಂದು ಭಾವಿಸುವ ವಿದ್ಯಾರ್ಥಿ, ಸ್ಪರ್ಧಿಸಲು ಹಿಂಜರಿಯುತ್ತಾನೆ. ತನಗೆ ಯಶಸ್ಸು ಸಿಗುವುದಿಲ್ಲ ಎಂಬ ನಕಾರಾತ್ಮಕ ಧೋರಣೆಯನ್ನು ಬೆಳೆಸಿಕೊಳ್ಳುತ್ತಾನೆ. ತನ್ನ ಹೊರರೂಪ, ಹಿನ್ನೆಲೆ, ಹಣಕಾಸಿನ ಸ್ಥಿತಿ, ಮನೆತನದ ಸ್ಥಾನಮಾನ, ಜಾತಿ, ವರ್ಗ, ಹಿಂದಿನ ವಿಫಲತೆ, ಇತರರ ಹೀನಾಯ, ಟೀಕೆ ಟಿಪ್ಪಣಿಗಳಿಂದ ವಿದ್ಯಾರ್ಥಿ ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾನೆ. ವಿದ್ಯಾರ್ಥಿಯ ಈ ಕೀಳರಿಮೆಯನ್ನು ಕಿತ್ತುಹಾಕಲು, ಅವನಲ್ಲಿ ಅಥವಾ ಅವಳಲ್ಲಿ ಸ್ವಾಭಿಮಾನವನ್ನು ಬೆಳೆಸಲು ಎಲ್ಲರೂ ತಮ್ಮ ಕಾಣಿಕೆ ನೀಡಬೇಕು, ಶ್ಲಾಘನೆ, ಮೆಚ್ಚುಗೆ, ಒಳ್ಳೆಯ ಪ್ರೋತ್ಸಾಹದ ಮಾತುಗಳು, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ-ಯಾವುದೇ ವ್ಯಕ್ತಿಯ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ತಂದೆತಾಯಿಗಳು, ಶಿಕ್ಷಕರು ಯಾವುದೇ ವಿದ್ಯಾರ್ಥಿಯನ್ನು ಬಹಿರಂಗ ವಾಗಿ ಶಿಕ್ಷಿಸಿ, ಅವಮಾನ ಮಾಡಬಾರದು. ಸದಾ ತಪ್ಪು ಹುಡುಕುತ್ತಾ, ಟೀಕಾಬಾಣ ಗಳನ್ನು ಬಿಡಬಾರದು. ಇತರ ಸಹವಯಸ್ಕರು ಅಥವಾ ಕಿರಿಯರಿಗೆ ಹೋಲಿಸಿ ಪರಿಹಾಸ್ಯ ಮಾಡಬಾರದು.
iv) ಭಾವನೆಗಳು : ಸಂತೋಷ, ಸ್ನೇಹ, ಪ್ರೀತಿ, ವಿಶ್ವಾಸ, ಧೈಯ್ಯ, ಸಹನೆಗಳು ವಿದ್ಯಾರ್ಥಿಯ ಮನೋಸಾಮರ್ಥ್ಯವನ್ನು ಹೆಚ್ಚಿಸಿದರೆ, ದುಃಖ, ಕೋಪ, ಭಯ, ಅಸಹನೆ, ಮತ್ಸರಗಳು ಆತನ / ಆಕೆಯ ಮನೋಸಾಮರ್ಥ್ಯವನ್ನು ತಗ್ಗಿಸುತ್ತವೆ ನಿತ್ಯ ಜೀವನದಲ್ಲಿ ನಕಾರಾತ್ಮಕ ಭಾವನೆಗಳನ್ನು ಪ್ರಚೋದಿಸುವ ನೂರೆಂಟು ಕಾರಣ ಗಳಿರುತ್ತವೆ. ಅವುಗಳನ್ನು ಎಷ್ಟು ಸಾಧ್ಯವೋ ಅಷ್ಟು ನಿವಾರಿಸಬೇಕು. ಸಕಾರಾತ್ಮಕ ಭಾವನೆಗಳನ್ನುಂಟುಮಾಡುವ ಚಟುವಟಿಕೆ – ಕಾರ್ಯಕ್ರಮ – ಸನ್ನಿವೇಶಗಳನ್ನು ಹಮ್ಮಿ ಕೊಳ್ಳಬೇಕು. ಸಂಗೀತ, ಸಾಹಿತ್ಯ, ನೃತ್ಯ ಅಭಿನಯ, ಚಿತ್ರಕಲೆ, ಕ್ರೀಡೆ, ಸಮಾಜ ಸೇವಾ ಚಟುವಟಿಕೆಗಳು, ಇತರ ಹವ್ಯಾಸಗಳು ಈ ದಿಸೆಯಲ್ಲಿ ಬಹಳ ಸಹಾಯಕಾರಿ.
v) ನೆನಪು-ಮರೆವು : ಆಸಕ್ತಿಪೂರ್ಣ ವಿಷಯ, ವಸ್ತು, ಏಕಾಗ್ರತೆಯಿಂದ ಗ್ರಹಿಸುವುದು ಅರ್ಥ ಮಾಡಿಕೊಳ್ಳುವುದು. ಮನನ, ಪುನಃಸ್ಕರಣೆ, ಚರ್ಚೆಯಿಂದ ವಿಷಯ. ವಸ್ತು, ಕೌಶಲ ಸದಾ ನೆನಪಿನಲ್ಲಿರುತ್ತದೆ. ಅನಾಸಕ್ತಿ, ಕ್ಲಿಷ್ಟ ವಿಷಯ, ಮನಸ್ಸಿನ ಚಂಚಲತೆ, ಅರ್ಥ ಮಾಡಿಕೊಳ್ಳದೆ ಬಾಯಿಪಾಠ ಮಾಡುವುದು. ಪುನಸ್ಕರಣೆ, ಚರ್ಚೆ ಮಾಡದಿರುವುದು, ಭಾವೋದ್ವೇಗಗಳು ವಿಷಯ, ವಸ್ತುವನ್ನು ಮರೆಸುತ್ತವೆ.
ಅಧ್ಯಯನ ವಿಧಾನ,:
ತಪ್ಪು ವಿಧಾನ : ಅನೇಕ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಸರಿಯಾದ ವಿಧಾನ. ತಂತ್ರಗಳನ್ನು ಬಳಸುವುದಿಲ್ಲ, ತಪ್ಪು ವಿಧಾನಗಳನ್ನು ಬಳಸುತ್ತಾರೆ. ಉದಾಹರಣೆಗೆ,
1) ಪ್ರಶಾಂತವಲ್ಲದ, ಅನೇಕ ಆಕರ್ಶಣೆ, ವಿಕರ್ಶಣೆಗಳಿರುವ ಸಮಯ, ಸ್ಥಳವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವುದು.
2) ಟೈಮ್ ಟೇಬಲ್ ಹಾಕಿಕೊಳ್ಳದೇ, ಅಡ್ಡಾದಿಡ್ಡಿಯಾಗಿ ಯಾವುದೇ ವ್ಯವಸ್ಥೆ, ಕ್ರಮವಿಲ್ಲದೇ ಓದುವುದು.
3) ವಿಶ್ರಾಂತಿ ಇಲ್ಲದೆ ಗಂಟೆಗಟ್ಟಳೆ ಓದುವುದು. ಒಂದೇ ವಿಷಯವನ್ನು, ಗಂಟೆಗಟ್ಟಳೆ ಓದುವುದು.
4) ವಿಷಯವನ್ನು ಅರ್ಥ ಮಾಡಿಕೊಳ್ಳದೇ ಬಾಯಿಪಾಠ ಮಾಡುವುದು.
5) ಉಪವಾಸವಿದ್ದು ಅಥವಾ ಅತಿಯಾಗಿ ಊಟ ಮಾಡಿ ಅಥವಾ ನಿದ್ದೆಗೆಟ್ಟು ಓದುವುದು.
6) ಅಧ್ಯಯನ ಮಾಡಿದ ವಿಷಯವನ್ನು ಮನನ-ವಿಶ್ಲೇಷಣೆ ಮಾಡದಿರು ವುದು. ಸ್ಮರಣೆ ಮಾಡಿಕೊಳ್ಳದಿರುವುದು.
7) ಕೋರ್ಸ್‌ನ ಪ್ರಾರಂಭದಿಂದಲೂ ಓದದೇ, ಪರೀಕ್ಷೆ ಸಮೀಪಿಸುತ್ತಿ ದ್ದಂತೆ, ಕೆಲವೇ ಅಧ್ಯಾಯಗಳನ್ನು ಆಯ್ಕೆ ಮಾಡಿಕೊಂಡು ಓದುವುದು.
8) ಕಾಪಿ ಮಾಡಿ, ಇತರ ಅಕ್ರಮಗಳಿಂದ ಪಾಸ್ ಮಾಡಬಹುದು ಎಂದು ನಂಬುವುದು.
9) ಗೈಡ್ ಗಳನ್ನು, ಟ್ಯೂಶನ್ ನೋಟ್ಸ್ ಗಳನ್ನು ಓದಿದರೆ ಸಾಕು ಎಂದು ತಿಳಿಯುವುದು. ತರಗತಿಗಳನ್ನು ಅಟೆಂಡ್ ಮಾಡದೇ, ಪಠ್ಯಪುಸ್ತಕ ಗಳನ್ನು ಓದದೇ ಇರುವುದು.
ಸರಿಯಾದ, ವೈಜ್ಞಾನಿಕ ಅಧ್ಯಯನ ವಿಧಾನ :
1) ಅಧ್ಯಯನ ಮಾಡಲು ಒಂದು ನಿರ್ದಿಷ್ಟ ಸಮಯ, ಸ್ಥಳವನ್ನು ಆಯ್ಕೆ ಮಾಡಿಕೊಂಡು, ನಿತ್ಯ ಅದೇ ಸಮಯದಲ್ಲಿ ಅದೇ ಸ್ಥಳದಲ್ಲಿ ಅಧ್ಯಯನ ಮಾಡಬೇಕು. ಈ ಸಮಯದಲ್ಲಿ ವಿದ್ಯಾರ್ಥಿ ಪ್ರಶಾಂತ ಚಿತ್ತನಾಗಿರಬೇಕು. ಪರಿಸರದಲ್ಲಿ ಯಾವುದೇ ಅಹಿತ-ಅಡ್ಡಿ ಆತಂಕ ಗಳಿರಬಾರದು.
- 30ರಿಂದ 40 ನಿಮಿಷಗಳ, ಏಕಾಗ್ರತೆಯಿಂದ, ವಿಷಯವನ್ನು ಅರ್ಥ ಮಾಡಿಕೊಂಡು ಓದಬೇಕು.
3) ಪುಸ್ತಕ ಮುಚ್ಚಿ, ಓದಿದ್ದರ ಸಾರಾಂಶವನ್ನು, ಮುಖ್ಯಾಂಶಗಳನ್ನು ಬರೆಯಬೇಕು.
4) ಸ್ವಲ್ಪ ಸಮಯ (ಮೂರರಿಂದ ಐದು ನಿಮಿಷ) ವಿರಮಿಸಬೇಕು.
5) ಮತ್ತೆ ಓದು. ಆದರೆ ಬೇರೆ ವಿಷಯವನ್ನು (ಸಬ್ಬೆಕ್ಸ್) ತೆಗೆದುಕೊಳ್ಳ ಬೇಕು.
6) ಕಲಿತದ್ದನ್ನು ಸಹಪಾಠಿಗಳೊಂದಿಗೆ ಚರ್ಚಿಸಬೇಕು. ಇಲ್ಲವೇ ಸ್ವಗತ ಹೇಳಿಕೊಳ್ಳಬೇಕು. ಪ್ರಶ್ನೆಗೆ ಉತ್ತರವನ್ನು ಬರೆಯುವ ತಾಲೀಮು ಮಾಡಬೇಕು.
7) ಕಲಿತದ್ದನ್ನು ಅವಧಿಗೊಂದಾವರ್ತಿ, ಬಿಡುವಿದ್ದಾಗಲೆಲ್ಲ ನೆನೆಸಿಕೊಳ್ಳ ಬೇಕು. ಯಾವುದು ಬೇಗ ಮರೆತುಹೋಗುತ್ತದೋ, ಅದನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳಬೇಕು. (ಉದಾ. ಹೆಸರುಗಳು, ಇಸವಿಗಳು, ಫಾರ್ಮುಲಾಗಳು)
8) ಪರೀಕ್ಷೆಯ ಹಿಂದಿನ ತಿಂಗಳಲ್ಲಿ ಹೊಸತನ್ನು ಕಲಿಯಲು ಹೋಗದೇ, ಕಲಿತದ್ದನ್ನು ರಿವೈಸ್ ಮಾಡಬೇಕು. ಕಾಲಮಿತಿ ಹಾಕಿಕೊಂಡು ಉತ್ತರ ಬರೆಯುವ ಅಭ್ಯಾಸ ಮಾಡಬೇಕು.
9) ಸಮಯಕ್ಕೆ ಸರಿಯಾಗಿ ಆಹಾರ ಸೇವನೆ, ನಿದ್ರೆ, ಮನರಂಜನಾ ಚಟುವಟಿಕೆಗಳನ್ನು ಮಾಡಬೇಕು.
10) ಪರೀಕ್ಷೆ ಭೂತವಲ್ಲ ರಾಕ್ಷಸವಲ್ಲ. ನಾನು ಕ್ರಮವಾಗಿ ಸಿದ್ಧತೆ ಮಾಡಿದ್ದೇನೆ. ಪರೀಕ್ಷೆಯಲ್ಲಿ ನನಗೆ ತಿಳಿದಷ್ಟು ಉತ್ತರಗಳನ್ನು ಬರೆಯುವುದಷ್ಟೇ ನನ್ನ ಕರ್ತವ್ಯ ಫಲಿತಾಂಶ ಒಳ್ಳೆಯದೇ ಇರುತ್ತದೆ ಎಂಬ ಸಕಾರಾತ್ಮಕ ಧೋರಣೆ ಇರಲಿ.
11) ತುಂಬಾ ಸ್ಪರ್ಧೆ, ಒತ್ತಡವಿದ್ದರೆ, ‘ಆಯಿತು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಳ್ಳೆಯದಾಗಲಿ’ ಎಂದು ಹೇಳಿಕೊಳ್ಳಬೇಕು.
12) ಹಾಗೂ ಆತಂಕ, ಭಯವಾದರೆ, ದೀರ್ಘ ಉಸಿರಾಟ, ಧ್ಯಾನ ಮೌನ-ಸಹಾಯಕಾರಿ.
ಆದ್ದರಿಂದ ಕಲಿಕೆಯಲ್ಲಿ ಹಿಂದುಳಿಯುವ ಮಕ್ಕಳನ್ನು ಶಿಕ್ಷಕರು ಮತ್ತು ಪಾಲಕರು ದೂಷಿಸಬಾರದು. ದಡ್ಡರು, ಸೋಮಾರಿಗಳೆಂದು ಹೀನಾಯ ಮಾಡ ಬಾರದು. ಶಿಕ್ಷಿಸಬಾರದು ಕಲಿಕೆಯಲ್ಲಿ ಹಿಂದುಳಿಯುವಿಕೆಗೆ ಕಾರಣವೇನೆಂದು ಪತ್ತೆ ಮಾಡಬೇಕು. ಪರಿಚಯದ ವೈದ್ಯರ ನೆರವನ್ನೂ ಪಡೆಯಬೇಕು. ಮಕ್ಕಳ ಕಲಿಕೆಯ ವೇಗ-ಗುಣಮಟ್ಟ ಹೆಚ್ಚಲು ಏನು ಮಾಡಬೇಕೆಂದು ನಿರ್ಧರಿಸಬೇಕು. ಈ ಮಕ್ಕಳಿಗೆ ನೆರವಾಗಬೇಕು.













