ಬೆಂಗಳೂರು: ಕ್ರಿಮಿನಲ್ ಮೊಕದ್ದಮೆಯಲ್ಲಿ ಮೊದಲ ಬಾರಿಗೆ ಆರೋಪಿಯನ್ನು ಹಾಜರುಪಡಿಸಿದಾಗ ಮ್ಯಾಜಿಸ್ಟ್ರೇಟ್ ಅಥವಾ ವಿಶೇಷ ನ್ಯಾಯಾಲಯಗಳು ಆರೋಪಿಯ ಕೆಲವು ಪ್ರಾಥಮಿಕ ವಿಚಾರಣೆಗಳನ್ನು ಮಾಡಬೇಕು ಎಂದು ಹೈಕೋರ್ಟ್ ಹೇಳಿದೆ.
ಒಂದು ವೇಳೆ ಆರೋಪಿಯು ಬಾಲಾಪರಾಧಿಯಾಗಿದ್ದು, ಮಾನಸಿಕವಾಗಿ ಸದೃಢನಾಗಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕಾನೂನಿನ ಇತರ ಅವಶ್ಯಕತೆಗಳಂತಹ ಪ್ರಮುಖ ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು, ಇದು ಕೇವಲ ಔಪಚಾರಿಕವಾಗಿರಬಾರದು ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಮ್ಯಾಜಿಸ್ಟ್ರೇಟ್/ವಿಶೇಷ ನ್ಯಾಯಾಲಯಗಳಿಗೆ ಜಸ್ಟಿಸ್ ಸಿ ಎಂ ಜೋಶಿ ಈ ಸಂಬಂಧ ನಿರ್ದೇಶನ ನೀಡಿದ್ದಾರೆ, ಆರೋಪಿ ಅಪ್ರಾಪ್ತ ಬಾಲಕ ಎಂದು ಖಚಿತಪಡಿಸಿಕೊಳ್ಳದೆ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಆರೋಪಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆಯುವವರೆಗೆ ಮೂರು ವರ್ಷಗಳ ಗರಿಷ್ಠ ಶಿಕ್ಷೆಯೊಂದಿಗೆ ಜುವೆನೈಲ್ ಹೋಮ್‌ನಲ್ಲಿ ಇರಿಸಬೇಕಾಗಿತ್ತು, ಆದರೆ ಮೂರು ವರ್ಷ ಮತ್ತು ಮೂರು ತಿಂಗಳು ಜೈಲಿನಲ್ಲಿ ಇರಿಸಲಾಗಿತ್ತು.
ಆತ ಅಪರಾಧಿಯಾಗಲಿ, ಇಲ್ಲದಿರಲಿ ಆತನನ್ನು ಅಪ್ರಾಪ್ತನಂತೆ ಪರಿಗಣಿಸಬೇಕು ಎಂದು ತಿಳಿಸಿದ ನ್ಯಾಯಮೂರ್ತಿ ಜೋಶಿ, ಬೀದರ್ ಜಿಲ್ಲೆಯ 24 ವರ್ಷದ ಯುವಕ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿ ಈ ಆದೇಶ ನೀಡಿದ್ದಾರೆ.