ಮನೆ ಮಾನಸಿಕ ಆರೋಗ್ಯ ಮಾನಸಿಕ ಕಾಯಿಲೆ

ಮಾನಸಿಕ ಕಾಯಿಲೆ

0

 ಕಾರಣಗಳು :-

      ಇಂದಿಗೂ ಈ ಕಾಯಿಲೆಗೆ ಈಡಾಗುವುದಾದರೂ ಏಕೆ ಎಂಬ ಪ್ರಶ್ನೆ ನಿಗೂಢವಾಗಿಯೇ ಇದೆ. ಆದರೆ ಕಾಯಿಲೆ ಬರಲು ಪ್ರೇರಣೆ ಕೊಡುವ ಅಂಶಗಳು ಹಾಗೂ ಗೊತ್ತಾಗ ಈ ಕಾಯಿಲೆಯಲ್ಲಿ ಮಿದುಳಿನಲ್ಲಾಗುವ ಬದಲಾವಣೆಗಳು ವೈದ್ಯರಿಗೂ ಸ್ಪಷ್ಟವಾಗಿ ಗೊತ್ತಾಗ ತೊಡಗಿದೆ. ಸ್ಕಿಜೋಫ್ರೀಯ ರೋಗಕ್ಕೆ ಕಾರಣಗಳನ್ನು ಹೀಗೆ ಸ್ಥೂಲವಾಗಿ ಹೇಳಬಹುದು.

Join Our Whatsapp Group

ಅನುವಂಶಿಯತೆ :-

     ಶೇಖಡ ಹತ್ತುರಷ್ಟು ರೋಗಿಗಳಲ್ಲಿ ಅವರ ಕುಟುಂಬದಲ್ಲಿ ಯಾರಾದರೂ ಇನ್ನೊಬ್ಬರಿಗೆ ಈ ಕಾಯಿಲೆ ಇದ್ದಿದ್ದು ಕಂಡುಬರುತ್ತದೆ ಹಲವು ಜೀನುಗಳ ಮುಖಾಂತರ, ಈ ಕಾಯಿಲೆ ಬರುವ ಸಂಭಾವ್ಯತೆ ವಂಶದಲ್ಲಿ  ಒಬ್ಬರಿಗೆ ಕಾಯಿಲೆ ಇದ್ದರೆ ಅವರ ಮಕ್ಕಳಿಗೆ ಕಾಯಿಲೆ ಬರಲೇಬೇಕೆಂಬ ನಿಯಮವಿಲ್ಲ ಮುಂದಿನ ತಲೆಮಾರು ಅಥವಾ ಹಲವು ತಲೆಮಾರುಗಳ ನಂತರ ಕಾಯಿಲೆ ಕಾಣಿಸಿಕೊಳ್ಳಬಹುದು. ಆದರೂ ಸ್ಕಿಜೋಫ್ರೀನನಿಯ ವಂಶಪಾರಂಪರ್ಯವಾಗಿ ಬರುತ್ತದೆ ಎಂದು ತಿಳಿಯಬೇಕಿಲ್ಲ.

 ಪರಿಸರದ ಕಾರಣಗಳು :-

       ಅತಿ ಜನಸಂದಣಿ, ವಿಪರೀತ ಆತಂಕ, ಒತ್ತಡದ ಜೀವನಶೈಲಿ,ಪರಿಸರಮಾಲಿನ್ಯ, ಪ್ರೀತಿವಿಶ್ವಾಸದ ಅಭಾವ,ಮೇಲಿಂದ ಮೇಲೆ ಒದಗುವ ಕಷ್ಟ, ನಷ್ಟ,ಸೋಲು ನಿರಾಶೆಗಳು,ನರಗಳ ಅವ್ಯವಸ್ಥಿತ  ವಾಸಸ್ಥಳಗಳು ಮುಂತಾದವೆಲ್ಲ ಕಾಯಿಲೆ ಪ್ರಕಟವಾಗಲು ಅಥವಾ ಕಾಯಿಲೆ ದೀರ್ಘಕಾಲ ಉಳಿಯಲು ಪ್ರಮುಖ ಪಾತ್ರವಹಿಸುತ್ತವೆ ಎನ್ನಲಾಗುತ್ತದೆ.

 ಮಿದುಳಿನಲ್ಲಾಗುವಬದಲಾವಣೆಗಳು :-

       1. ನರ ಕೋಶಗಳ ನರವಾಹಕ ವ್ಯವಸ್ಥೆಯಲ್ಲಿ ಬದಲಾವಣೆಗಳು, ನಾರ್ ಎಪಿನೆಫ್ರಿನ್, ಡೋಪಮಿನ್, ಸೆರೋಟೋನಿನ್ಯಾಗಳಂತಹ ನರ ವಾಹಕ ವ್ಯವಸ್ಥೆಗಳು ಸ್ಕಿಜೋಪ್ರೀನಿಯ ರೋಗದಲ್ಲಿ ಸಹಜ ರೀತಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟವಾಗಿದೆ ಡೋಪಮಿನ್ ವ್ಯವಸ್ಥೆ ಸೂಕ್ಷ್ಮ  ಸಂವೇದನೆಯಾಗಿ ಹೈಪರ್ ಸೆಂಸಿಟಿವ್ಕ ಕೆಲಸ ಮಾಡಿದರೆ, ಸೆರೋಟೊನಿನ್ ಪ್ರಮಾಣ ತಗ್ಗಿರುತ್ತದೆ.

2. ಮಿದುಳಿನೊಳಕ್ಕೆ ಬರುವ ಅಸಂಖ್ಯಾತ ಪ್ರಚೋದನೆಗಳನ್ನು ಪರಿಶೀಲಿಸಿ,ಯಾವುದು ಮುಖ್ಯಗ, ಯಾವುದು ಅಮುಖ್ಯ ಯಾವುದಕ್ಕೆ ಆದ್ಯತೆ ಮೇರೆಗೆ ಗಮನ ಕೊಡಬೇಕು ಎಂದು ವಿಂಗಡಿಸುವ ವ್ಯವಸ್ಥೆಗೆ ಸ್ಕಿಜೋಫ್ರೀನಿಯ ರೋಗದಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಒಂದು ವಾದವಿದೆ.

3. ದೀರ್ಘಕಾಲ ರೋಗದಿಂದ ಬಳಲುವ ರೋಗಿಗಳಲ್ಲಿ ಮೆದುಳಿನ ಕುಳಿಗಳು ದೊಡ್ಡವಾಗುತ್ತದೆ ಮಿದುಳಿನ ವಸ್ತು ಸವೆದಿರುತ್ತದೆ ಎಂಬುದು ಸಿಟಿ ಸ್ಕ್ಯಾನ್ ಎಂ.. ಆರ್ ಐ.ಚಿತ್ರಗಳಿಂದ ತಿಳಿದು ಬರುತ್ತದೆ.

4. ಈಗ ಲಭ್ಯವಿರುವ ಮಾಹಿತಿಯಿಂದ, ಸ್ಕಿಜೋಫ್ರೀನಿಯ ಮೆದುಳಿಗೆ ಸಂಬಂಧಿಸಿದ ಕಾಯಿಲೆ ಎಂಬುದು ಸ್ಪಷ್ಟವಾಗಿದೆ.

ಹಿಂದಿನ ಲೇಖನಡೆಂಗ್ಯೂ ಕುರಿತು ಆತಂಕ ಬೇಡ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ:  ಡಾ. ಕೆ ವಿ ರಾಜೇಂದ್ರ
ಮುಂದಿನ ಲೇಖನವರಕೂಡು ಮೊರಾರ್ಜಿ ಶಾಲೆ ಪಕ್ಕ ಹುಲಿ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ