ಮೊದಲನೇ ಹಂತ ಗ್ರಹಿಸುವಿಕೆ : ಯಾವುದೇ ಮಾಹಿತಿ / ಜ್ಞಾನ ಕಣ್ಣು ಕಿವಿಗಳ ಮೂಲಕ ಮಿದುಳನ್ನು ತಲುಪುತ್ತದೆ. ಯಾವುದೇ ಕೌಶಲ ಕೇಳಿ, ನೋಡಿ ಮಾಡಿದಾಗ ಮಿದುಳನ್ನು ತಲುಪುತ್ತದೆ. ಮಿದುಳು ಅದನ್ನು ಅರ್ಥ ಮಾಡಿಕೊಳ್ಳಬೇಕು. ಅಮಿಗ್ಡಿಲಾ, ಹಿಪೋಕ್ಯಾಂಪಸ್‌ನಂತಹ ಮಿದುಳಿನ ಭಾಗಗಳು, ಮಿದುಳಿನ ಅರೆಗೋಳದ ಮುಂಭಾಗ, ಹಿಂಭಾಗ, ಕಪೋಲ ಭಾಗಗಳು ಈ ಕ್ರಿಯೆಯಲ್ಲಿ ಭಾಗಿಯಾಗುತ್ತವೆ. ಈ ರೀತಿ ವಿಷಯ / ಕೌಶಲ ಗ್ರಹಿಸಲ್ಪಟ್ಟು, ಅಲ್ಪಕಾಲದ ನೆನಪಾಗುತ್ತದೆ. ಕೆಲವು ನಿಮಿಷಗಳಿಂದ ಒಂದು ದಿನದವರೆಗೆ ಈ ನೆನಪಿದ್ದು, ಆಮೇಲೆ ಅಳಿಸಿಹೋಗುತ್ತದೆ.
ಎರಡನೇ ಹಂತದಲ್ಲಿ ವಿಷಯ / ಕೌಶಲ : ದೀರ್ಘಕಾಲ ಅಥವಾ ಜೀವನ ಪರ್ಯಂತ ಉಳಿಯುವಂತೆ, ಮಿದುಳಿನ ವಿವಿಧ ಭಾಗಗಳಲ್ಲಿ ಮುದ್ರಣವಾಗುತ್ತದೆ. ದೃಶ್ಯಮಾಹಿತಿಗಳು ಮಿದುಳಿನ ಹಿಂಭಾಗದಲ್ಲಿ ಮುದ್ರಣಗೊಂಡರೆ, ಶಬ್ದಮಾಹಿತಿ ಕಪೋಲ ಭಾಗದಲ್ಲಿ ಮುದ್ರಿತವಾಗುತ್ತದೆ. ವಿಷಯದ ಅರ್ಥ, ಗೂಢಾರ್ಥ, ಸೂತ್ರಗಳು, ಕಾರ್ಯಾಕಾರಣಗಳು, ಚಿಂತನೆಗಳು ಮಿದುಳಿನ ಮುಂಭಾಗದಲ್ಲಿ ಶೇಖರ ವಾಗುತ್ತವೆ. ಈ ಮುದ್ರಣ ಒಂದು ರಾಸಾಯನಿಕ ಕ್ರಿಯೆ. ಅಸಿಟೈಲ್ಕೋಲಿನ್ ಎಂಬ ನರವಾಹಕ ವಸ್ತು ಈ ಮುದ್ರಣದಲ್ಲಿ ಶಾಯಿಯಂತೆ ಬಳಸಲ್ಪಡುತ್ತದೆ. ಅಸಿಟೈಲ್ ಕೋಲಿನ್ ಮೂಲತಃ ಒಂದು ಪ್ರೋಟೀನ್ ನಾವು ತೆಗೆದುಕೊಳ್ಳುವ ಯಾವುದೇ ಪ್ರೋಟೀನ್‌ಭರಿತ ಆಹಾರದಿಂದ (ಉದಾ, ಬೇಳೆಕಾಳುಗಳು, ಕಡಲೆಕಾಯಿ, ಹಾಲು, ಹಣ್ಣು, ತರಕಾರಿ, ಮೀನು, ಮೊಟ್ಟೆ, ಮಾಂಸ) ನಮ್ಮ ಮಿದುಳಿನಲ್ಲೇ ತಯಾರಾಗು ತ್ತದೆ. ಹೀಗೆ ತಯಾರಾದ ಅಸಿಟೈಲ್ ಕೋಲಿನ್ ನರತಂತುಗಳ ತುದಿಗಳಲ್ಲಿ ಶೇಖರ ವಾಗಿ, ನಲವತ್ತರಿಂದ ಅರವತ್ತು ನಿಮಿಷಗಳ ಅವಧಿಯ ಮುದ್ರಣಕ್ಕೆ ಸಾಕಾಗುತ್ತದೆ. ಆನಂತರ ಈ ನರವಾಹಕ ಉತ್ಪತ್ತಿಯಾಗಲು ಸ್ವಲ್ಪ ಸಮಯ ನೀಡಬೇಕು. ಗಂಟೆಗಟ್ಟಳೆ ರಿಕಾರ್ಡಿಂಗ್ ಸಾಧ್ಯವಿಲ್ಲ ಮಧ್ಯೆ ಮಧ್ಯೆ ಬಿಡುವು ಕೊಟ್ಟರೆ ಒಳ್ಳೆಯದು.
ಮೂರನೆಯ ಹಂತ : ಮುದ್ರಣಗೊಂಡ ಮಾಹಿತಿ, ಶಾಶ್ವತ ನೆನಪಿನ ಸಂಗ್ರಹಕ್ಕೆ ಹೋಗುತ್ತದೆ. ಬೇಕೆಂದಾಗ ಸ್ಮರಣೆಯಾಗಬೇಕಾದರೆ, ಆಗಾಗ ಸ್ಮರಿಸಿ ಕೊಳ್ಳುತ್ತಾ ಅಭ್ಯಾಸವಾಗಬೇಕು.
ಉತ್ತಮ ಕಲಿಕೆ, ನೆನಪಿಗೆ ಪೂರಕವಾದ ಅಂಶಗಳು ಹಲವಾರಿವೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ:
1. ಮಿದುಳಿನ ಬೆಳವಣಿಗೆ ಮತ್ತು ಕಾರ್ಯಸಾಮರ್ಥ್ಯ : ಗರ್ಭಧಾರಣೆಯ ಒಂಭತ್ತು ತಿಂಗಳು ಮತ್ತು ಹುಟ್ಟಿದ ನಂತರದ ಐದು ವರ್ಷಗಳಲ್ಲಿ ಮಿದುಳಿನ ಗರಿಷ್ಠ ಬೆಳವಣಿಗೆ ಹಾಗೂ ವಿಕಾಸ ನಡೆಯುತ್ತದೆ. ಶೇಕಡಾ 15ರಷ್ಟು ಮಕ್ಕಳಲ್ಲಿ ಮಿದುಳಿನ ಬೆಳವಣಿಗೆ-ವಿಕಾಸ ಅಸಮರ್ಪಕ ಅಥವಾ ಅಪೂರ್ಣವಾಗಿರುತ್ತದೆ. ಸಹಜವಾಗಿ ಈ ಮಕ್ಕಳ ಬುದ್ಧಿಮಟ್ಟ (ಐಕ್ಯೂ) ಸಾಧಾರಣಕ್ಕಿಂತ ಕಡಿಮೆ ಇದ್ದು, ಅವರ ಕಲಿಕಾ ಸಾಮರ್ಥ್ಯ ಕಡಿಮೆ ಇರುತ್ತದೆ. ಮಗುವಿನ ಬೆಳವಣಿಗೆ ನಿಧಾನವಾಗುವುದು (ಉದಾ. ಕತ್ತು ನಿಲ್ಲುವುದು, ನಿಲ್ಲುವುದು, ನಡೆಯುವುದು, ಮಾತನಾಡುವುದು) ಹಾಗೂ ಯಾವುದೇ ಮಾಹಿತಿ ಕೌಶಲವನ್ನು ಕಲಿಯುವುದು ನಿಧಾನವಾಗುವುದು. ಇದನ್ನು ಗಮನಿಸಬೇಕು. ಈ ಮಕ್ಕಳು ಎಲ್ಲ ವಿಷಯಗಳಲ್ಲೂ ಕಲಿಯಲು ಹಿಂದೆ ಬೀಳುತ್ತಾರೆ. ಇಂತಹ ಮಕ್ಕಳನ್ನು ನೀನು ದಡ್ಡ, ಸೋಮಾರಿ ಕಷ್ಟಪಡುವುದಿಲ್ಲ. ನೀನು ಉದ್ಧಾರ ವಾಗುವುದಿಲ್ಲ ಎಂದು ಹೀಗಳೆಯಬಾರದು. ಪಾಲಕರು, ಶಿಕ್ಷಕರು ಸಹನೆಯಿಂದ, ನಿಧಾನವಾಗಿ ಎಷ್ಟೂ ಸಾಧ್ಯವೋ ಅಷ್ಟು ಕಲಿಸಲು ಪ್ರಯತ್ನಿಸಬೇಕು. ಮತ್ತೆ ಮತ್ತೆ ಹೇಳಿ ಕಲಿಸಬೇಕು. ಏಳೆಂಟು ವರ್ಷಗಳ ಶಾಲಾ-ಅಭ್ಯಾಸದಿಂದ ಅವರು ಕಲಿಯಲಾಗದೇ ಮತ್ತೆ ಮತ್ತೆ ಫೇಲಾಗುತ್ತಿದ್ದರೆ, ಅವರಿಗೆ ಕರಕುಶಲ ಕಲೆಗಳಲ್ಲಿ ಅಥವಾ ಸರಳವಾದ ಉದ್ಯೋಗ ಮಾಡಲು ತರಬೇತಿ ಕೊಟ್ಟು ಜೀವನೋಪಾಯ ಮಾಡಲು ಪ್ರೋತ್ಸಾಹ-ಅವಕಾಶವನ್ನು ಕೊಡಬೇಕು.
2. ಮಿದುಳಿನ ನ್ಯೂನತೆಗಳಿಂದ ಬರುವ ನಿರ್ದಿಷ್ಟ ಕಲಿಕಾ ನ್ಯೂನತೆಗಳು: ಡಿಸ್‌ಲೆಕ್ಸಿಯಾ : ಕೆಲವು ಮಕ್ಕಳು ಬಾಯಿ ಮುಖಾಂತರ ಹೇಳಬಲ್ಲರು. ವಿಷಯವನ್ನು
ಆರ್ಥ ಮಾಡಿಕೊಳ್ಳಬಲ್ಲರು ಆದರೆ ಓದಲು, ಬರೆಯಲು, ಅಂಕಿ ಸಂಖ್ಯೆಗಳನ್ನು ಗಣಿತವನ್ನು ಕಲಿಯಲು ಅವರಿಗೆ ಕಷ್ಟವಾಗುತ್ತದೆ, ಬಾಯಲ್ಲಿ ಕಾಗುಣಿತ-ಸ್ಪೆಲ್ಲಿಂಗನ್ನು ಸರಿಯಾಗಿ ಹೇಳಿದರೂ, ಬರೆಯುವಾಗ ಅನೇಕ ತಪ್ಪುಗಳನ್ನು ಪದೇಪದೇ ಮಾಡು ತ್ತಾರೆ. ಆಕ್ಷರಗಳನ್ನು ಹಿಂದುಮುಂದಾಗಿ ಬರೆಯುತ್ತಾರೆ. ಪದಗಳನ್ನು ಹಿಂದು ಮುಂದಾಗಿ ಓದುತ್ತಾರೆ. ಎಡಬಲ ಗೊಂದಲವಾಗುತ್ತದೆ. ಅಂಕಿ ಐದರ ಹಿಂದೆ ಯಾವುದೂ ಮುಂದೆ ಯಾವುದು ಹೇಳಲಾರರು. ಮೇಲೆ, ಕೆಳಗೆ ಹಿಂದೆ ಎಂದರೆ ಯಾವುದೂ ತಿಳಿಯುವುದಿಲ್ಲ. ಇದನ್ನು ‘ಡಿಸ್‌ಲೆಕ್ಸಿಯಾ’ ಎನ್ನುತ್ತಾರೆ. ಇಂತಹ ಮಕ್ಕಳಿಗೆ ಓದಲು, ಬರೆಯಲು, ಬೇಗ ಬೇಗ ಮಾಡಲು ಒತ್ತಡ ಹಾಕಬಾರದು. ನಿಧಾನವಾಗಿ ಹೆಚ್ಚು ಸಮಯ ತೆಗೆದುಕೊಂಡು ಓದಲು, ಬರೆಯಲು, ಲೆಕ್ಕ ಮಾಡಲು ಅವಕಾಶ ಕೊಡಬೇಕು. ಅಕ್ಷರಗಳನ್ನು ಒಟ್ಟಿಗೆ ಬರೆಯದೆ, ದೂರ ದೂರ ಬಿಡಿಬಿಡಿ ಯಾಗಿ ಬರೆಸಬೇಕು. ಪರೀಕ್ಷೆಯನ್ನು ಬರವಣಿಗೆ ಮೂಲಕ ಮಾಡದೇ ಮೌಖಿಕ ವಾಗೇ ಮಾಡಬೇಕು. ತುಂಬಾ ಆಸರೆ / ಪ್ರೋತ್ಸಾಹಗಳನ್ನು ಕೊಡಬೇಕು.
3) ಭಾಷಾ ನ್ಯೂನತೆ : ಕೆಲವು ಮಕ್ಕಳಿಗೆ ಮಾತೃಭಾಷೆಯನ್ನು ಬಿಟ್ಟು ಬೇರೆ ಭಾಷೆ ಅಥವಾ ಭಾಷೆಗಳನ್ನು ಕಲಿಯುವುದು ಕಷ್ಟವಾಗುತ್ತದೆ. ನಮ್ಮ ಶಾಲೆಗಳಲ್ಲಿ ಅನೇಕ ಮಕ್ಕಳು ಇಂಗ್ಲಿಷ್, ಹಿಂದಿ ಕಲಿಯಲು ಕಷ್ಟಪಡುತ್ತಾರೆ. ಇಂಗ್ಲಿಷ್ ಬರದವನು ದಡ್ಡ ಎಂದು ಖಂಡಿತ ಹೇಳಬಾರದು. ಮಾತೃಭಾಷೆಯ ಮಾಧ್ಯಮದಲ್ಲಿ ಈ ಮಕ್ಕಳು ಕಲಿತರೆ, ಅವರ ನಿರ್ವಹಣೆ ಮತ್ತು ಕಲಿಕೆ ಉತ್ತಮಗೊಳ್ಳುತ್ತದೆ. ಪ್ರತಿಷ್ಠೆಗಾಗಿ ಅಥವಾ ಅತಿನಿರೀಕ್ಷೆ ಮಾಡಿ ಅವರನ್ನು ಇಂಗ್ಲಿಷ್ ಮಾಧ್ಯಮದ ಮೂಲಕ ಕಲಿಯಿರಿ ಎಂದು ಒತ್ತಡ ಹೇರಬಾರದು.
b) ಎಡ ಮತ್ತು ಬಲ ಮಿದುಳು : ಪ್ರಧಾನ ಮಸ್ತಿಷ್ಕ (ಸೆರೆಬ್ರಮ್)ದಲ್ಲಿ ಎಡ ಮತ್ತು ಬಲ ಆರೆಗೋಳಗಳಿರುವುದು ನಿಮಗೆ ತಿಳಿದಿದೆ. ಎಡ ಅರೆಗೋಳ ಚೆನ್ನಾಗಿ ವಿಕಾಸ ಹೊಂದಿದರೆ, ಆ ವ್ಯಕ್ತಿಯ ಭಾಷಾ ಸಾಮರ್ಥ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಾಮರ್ಥ್ಯ, ಸೂಕ್ಷಾವಲೋಕನ, ಆಲೋಚಿಸುವ ಸಾಮರ್ಥ್ಯ ಚೆನ್ನಾಗಿರುತ್ತದೆ. ಬಲ ಅರೆಗೋಳ ಚೆನ್ನಾಗಿ ವಿಕಾಸ ಹೊಂದಿದರೆ, ಆ ವ್ಯಕ್ತಿಗೆ ಸಂಗೀತ ನೃತ್ಯ, ಚಿತ್ರಕಲೆ, ಅಭಿನಯ, ಇತ್ಯಾದಿ ಲಲಿತ ಕಲೆಗಳನ್ನು ಕರಗತ ಮಾಡಿಕೊಳ್ಳುವುದು ಸುಲಭ ಆತ ಆಕೆ ಭಾವನಜೀವಿಯಾಗುವುದೆಲ್ಲದೆ ಇದರೊಡನೆ ಹೆಚ್ಚು ಆತ್ಮೀಯ ಸ್ನೇಹ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾರೆ. ಕರುಣೆ ಅನುಕಂಪ, ಕಾತರರಬಗ್ಗೆ ಕಾಳಜಿ ಅವರಲ್ಲಿ ಹೆಚ್ಚಿರುತ್ತದೆ. ಒತ್ತಡದ ಸನ್ನಿವೇಶದಲ್ಲೂ ಶಾಂತಚಿತ್ರರಾಗಿ ಕೆಲಸ ಮಾಡಬಲ್ಲರು. ಜೀವನಕ್ಕೆ ಎರಡೂ ಅರೆಗೋಳಗಳ ಸಾಮರ್ಥ್ಯ ಅತ್ಯಗತ್ಯ ಯಾವ ಅರೆಗೋಳದ ವಿಕಾಸ ಕಡಿಮೆ ಇದೆಯೋ, ಅದಕ್ಕೆ ತಕ್ಕ ಪ್ರೋತ್ಸಾಹ-ತರಪೇತಿ ಕೊಟ್ಟರೆ ಅದು ಹೆಚ್ಚು ವಿಕಾಸ ಹೊಂದುತ್ತದೆ.
3. ಶಾರೀರಿಕ ಅನಾರೋಗ್ಯ – ನ್ಯೂನತೆ ಕೊರತೆಗಳು: ನಮ್ಮ ದೇಶದಲ್ಲಿ
ಶೇಕಡಾ 50ಕ್ಕಿಂತ ಹೆಚ್ಚಿನ ಮಕ್ಕಳು ಅಪೌಷ್ಟಿಕತೆ, ಅನೀಮಿಯಾದಿಂದ ಬಳಲುತ್ತಾರೆ. ಇದರಿಂದಾಗಿ ರಕ್ತದಲ್ಲಿ ಆಮ್ಲಜನಕ, ಗ್ಲೂಕೋಸ್ ಕಡಿಮೆಯಾಗಿ, ಅಥವಾ ಐಯೋಡಿನ್ ಅಂಶದ ಕೊರತೆಯಿಂದಾಗಿ ಮಗುವಿನ ಕಲಿಯುವ ಸಾಮರ್ಥ್ಯ ಕುಂದುತ್ತದೆ. ಯಾವ ಆಹಾರ ಪದಾರ್ಥಗಳನ್ನು ಎಷ್ಟು ತಿನ್ನಬೇಕು ಎಂಬ ಅರಿವಿಲ್ಲ ದಿರುವುದು, ಬಡತನ, ಹೊಟ್ಟೆಯಲ್ಲಿ ಜಂತುಹುಳುಗಳ ಕಾಟ, ರಕ್ತಸ್ರಾವವಾಗುವ ಕಾಯಿಲೆಗಳು ಅಪೌಷ್ಟಿಕತೆ ಮತ್ತು ಅನೀಮಿಯಾಗೆ ಸಾಮಾನ್ಯ ಕಾರಣಗಳು. ಅನಾರೋಗ್ಯಕರ ಪರಿಸರದಲ್ಲಿ ವಾಸಿಸುವುದರಿಂದ, ಪದೇಪದೇ ಬರುವ ಸೋಂಕು ರೋಗಗಳು ವಿದ್ಯಾರ್ಥಿಗಳು ಶಾರೀರಿಕ ಸಾಮರ್ಥ್ಯವನ್ನು ತಗ್ಗಿಸುತ್ತವೆ. ಗಂಟಲ ಬೇನೆ, ಸೈನುಸೈಟಿಸ್, ಶ್ವಾಸನಾಳದುರಿತ (ಬ್ರಾಂಕೈಟಿಸ್) ಚರ್ಮದ ಕುರುಗಳು, ಮೂತ್ರನಾಳದ ಸೋಂಕು, ಕರುಳಿನ ಸೋಂಕು, ಅಮೀಬಿಯಾಸಿಸ್ ಇದಕ್ಕೆ ಕೆಲವು ಉದಾಹರಣೆಗಳು.
ದೃಷ್ಟಿದೋಷ, ಶ್ರವಣ ದೋಷಗಳು : ಸಾಮಾನ್ಯ ಪುಸ್ತಕದ ಸಣ್ಣ ಅಕ್ಷರಗಳನ್ನುಓದಲಾಗದಿರುವುದು, ಕಪ್ಪು ಹಲಗೆಯ ಮೇಲೆ ಬರೆಯುವ ಅಕ್ಷರಗಳು ಕಾಣದಿರು ವುದು. ಶಿಕ್ಷಕರ ಧ್ವನಿ ಕೇಳಿಸದಿರುವುದು, ಕಲಿಕೆಯ ಹಿಂದುಳಿಯುವಿಕೆಗೆ ಕಾರಣವಾಗ ಬಹುದು, ಹುಳುಕು ಹಲ್ಲು, ವಸಡು ನೋವು ವಿದ್ಯಾರ್ಥಿಯ ಏಕಾಗ್ರತೆ ಯನ್ನು ಕಲಿಯುವ ಇಚ್ಛೆಯನ್ನು ನಾಶ ಮಾಡಬಹುದು.
ಅವಧಿಗೊಂದಾವರ್ತಿ ಅಥವಾ ಸಕಾಲಿಕ ವೈದ್ಯಕೀಯ ತಪಾಸಣೆ ಮತ್ತು ಸಲಹೆಯಿಂದ ಈ ಎಲ್ಲ ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು ಅಥವಾ ಪ್ರಾರಂಭದಲ್ಲೇ ಚಿವುಟಿ ಹಾಕಬಹುದು. ತನ್ಮೂಲಕ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬಹುದು.