ಮನೆ ಆರೋಗ್ಯ ಮಾನಸಿಕ ಸಮಸ್ಯೆಗಳು

ಮಾನಸಿಕ ಸಮಸ್ಯೆಗಳು

0

ಅನೇಕ ತಾಯಿ ತಂದೆಯರು ಅವರ ಮಕ್ಕಳವರ್ತನೆಯ ಬಗ್ಗೆ ಚಿಂತಿತರಾಗುತ್ತಾರೆ. ಕೆಲವು ಅಂದರ್ಭಗಳಲ್ಲಿ ಮಕ್ಕಳ ವರ್ತನೆ ತಾಯಿ ತಂದೆಯರಿಗೆ ತಲೆನೋವಾಗಿ ಪರಿಣಮಿಸುತ್ತದೆ. ಆ ವರ್ತನೆ ಸಾಮಾನ್ಯವೋ, ಅಸಾಮಾನ್ಯವೋ, ಅದಿ ಎತ್ತ ಸಾಗುತ್ತದೋ ಎಂದು ಗೊಂದಲಕ್ಕೆ ಬೀಳುತ್ತಾರೆ. ಮಕ್ಕಳಲ್ಲಿ ಕೂಡ ವಿಚಿತ್ರವಾದ ನಡವಳಿಕೆಯಿರುತ್ತದೆ. ಮನೋರೋಗಗಳಿರುತ್ತದೆ. ಯಾವುದು ಮನೋರೋಗ, ಯಾವುದು ಅಲ್ಲ ಎಂಬುದನ್ನು ಗುರುತಿಸುವುದು ಬಹಳ ಅಗತ್ಯ. ಮಾಮೂಲಿ ವರ್ತನೆಯಲ್ಲಿನ ಲೋಪಗಳು ವಯಸ್ಸು ಬೆಳೆದಂತೆಲ್ಲಾ ಬಹುಮಟ್ಟಿಗೆ ಹೊರಟುಹೋಗುತ್ತದೆ.

ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ದೋಷಗಳು :-

1.ಡೆವಲಪ್ ಮೆಂಟಲ್ ಡಿಸಾರ್ಡರ್ಸ್

2.ನ್ಯೂರೋಟಿಕ್ ಡಿಸಾರ್ಡರ್ಸ್

3.ವಿಚಿತ್ರ ಚಲನೆಗಳು

4.ವಿಭಿನ್ನ ಅಭ್ಯಾಸಗಳು

5.ಶೌಚಾಲಯದ ಸಮಸ್ಯೆಗಳು

6. ಮಾತಿನ ಸಮಸ್ಯೆ

7. ಶಾಲೆಯ ಸಮಸ್ಯೆಗಳು

8. ನಿದ್ರೆಯ ದೋಷಗಳು

9. ಆಹಾರ ಸೇವನೆಯ ನ್ಯೂನತೆ

10. ಆತ್ಮ ಹತ್ಯೆಯ ಭಾವನೆಗಳು

11. ಭಿನ್ನ ಸಂದರ್ಭಗಳಲ್ಲಿ ಮಕ್ಕಳ ವರ್ತನೆ

12. ಮಾನಸಿಕ ರೋಗಗಳು

13. ಮಾದಕ ಚಸ್ತುಗಳ ಸೇವನೆ, ಆಂಟಿ ಸೋಷಿಯಲ್ ಬಿಹೇವಿಯರ್

14. ಕೌಮಾರ್ಯದ ಸಮಸ್ಯೆಗಳು.

ಈ  ಕೋನದಲ್ಲಿ ನಾವು ಪರೀಶಿಲಿಸಿದಾಗ ಮಕ್ಕಳ ಮಾನಸಿಕ ಸ್ಥಿತಿಯನ್ನು, ವರ್ತನೆಯನ್ನು ಎಚ್ಚರಿಕೆಯಿಂದ ವಿಶ್ಲೇಷಿಸುವುದು, ಅವರ ವರ್ತನೆಯನ್ನು ಸರಿಯಾದ ರೀತಿಯಲ್ಲಿ ತಿದ್ದುವುದು ಅವರ ಭವಿಷ್ಯದ ದೃಷ್ಟಿಯಿಂದ ಬಹಳ ಅಗತ್ಯ.

1.ಡೆವಲಪ್ ಮೆಂಟ್ ಡಿಸಾರ್ಡರ್ಸ್ :-

ಇದರಲ್ಲಿ ಮುಖ್ಯವಾಗಿ ಮೆಂಟಲ್ ರಿಟಾರ್ಡೇಷನ್ (ಬುದ್ಧಿಮಾಂದ್ಯತೆ) ಸಮಸ್ಯೆ ಒಂದು. ಐ.ಕ್ಯೂ. ಪರೀಕ್ಷೆಯ ಮೂಲಕ ಎಂ.ಆರ್. ಎಷ್ಟಿದೆಯೆಂಬುದನ್ನು ನಿರ್ಧರಿಸಬಹುದು. ಸೂಕ್ತವಾದ ಕೌನ್ಸೆಲಿಂಗ್ ಮತ್ತು ಮಾರ್ಗದರ್ಶನದ ಮೂಲಕ ಇಂತಹ ಮಕ್ಕಳಿಗೆ ಶಿಕ್ಷಣವನ್ನು ನೀಡಬಹುದು.

2. ನ್ಯೂರೋಟಿಕ್ ಡಿಸಾರ್ಡರ್ಸ್ :-

ನ್ಯೂರೋಟಿಕ್ ಡಿಸಾರ್ಡರ್ಸ್ ಇರುವವರಲ್ಲಿ ಮುಖ್ಯವಾಗಿ ಮಾನಸಿಕ ಅವ್ಯವಸ್ಥೆಯಿರುತ್ತದೆ. ಒತ್ತಡದ ಲಕ್ಷಣಗಲೂ ಇರುತ್ತದೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಭಾವನೆ ಉಂಟಾಗುತ್ತದೆ. ಕೆಲವರಲ್ಲಿ ಮೇನಿಯಾ ಕೂಡ ಇರುತ್ತದೆ. ಇವನ್ನೆಲ್ಲಾ ಸರಿಯಾಗಿ ಗುರಿತಿಸಿ ಚಿಕಿತ್ಸೆ ಮಾಡಬೇಕು.

3. ವಿಚಿತ್ರ ಚಲನೆಗಳು :-

ವಿಚಿತ್ರ ಚಲನೆಗಳನ್ನು ಮೂವ್ಮೆಂಟ್ ಡಿಸಾರ್ಡರ್ಸ್ ಎನ್ನುತ್ತಾರೆ. ಅತಿ ಚಡುವಡಿಕೆಯ ಮಕ್ಕಳಲ್ಲಿ ತುಂಟತನ ಕಂಡುಬರುತ್ತದೆ. ಕಾಣಿಸಿದ್ದನ್ನೆಲ್ಲಾ ಹಾಳು ಮಾಡುವ ಪ್ರವೃತ್ತಿಯಿರುತ್ತದೆ. ಯಾವುದೇ ಸ್ಥಿರತೆಯಿಲ್ಲದೆ ಅತಿಯಾಗಿ ವರ್ತಿಸುತ್ತಾರೆ.

ಮತ್ತೆ ಕೆಲವು ಮಕ್ಕಳ ಕೈ ಕಾಲುಗಳಲ್ಲಿ ನಿಯಂತ್ರಣವಿಲ್ಲದೆ ಸ್ನಾಯುಗಳು ನಡುಗುತ್ತಿರುತ್ತದೆ. ಇಂತಹ ಸ್ನಾಯುಗಳ ನಡುಕವನ್ನು ಟಿಕ್ಸ್ ಎನ್ನುತ್ತಾರೆ. ಟಿಕ್ಸ್ ಇರುವ ಮಕ್ಕಳು ಕಣ್ಣಿನ ರೆಪ್ಪೆಗಳನ್ನು ಸದಾ ಮುಚ್ಚುತ್ತ, ತೆರೆಯುತ್ತಾ ಇರುತ್ತಾರೆ. ಕತ್ತನ್ನು ಕುಣಿಸುತ್ತಾರೆ. ಗಂಟಲನ್ನು ಸರಿಪಡಿಸಿಕೊಂಡಂತೆ ಯಾವುದೋ ಶಬ್ಧ ಹೊರಡಿಸುತ್ತಿರುತ್ತಾರೆ. ಇಂತಹ ಹೆಲೊ ಪೆರಿಡಾಲ್ ಔಷಧಿಯಿಂದ ಸರಿಪಡಿಸಬಹುದು.

ಕೆಲವು ಮಕ್ಕಳು ಕೇಳಿದ್ದನ್ನು ಕೊಡದಿದ್ದರೆ ಜೋರಾಗಿ ಅಳುತ್ತಾರೆ. ಅಳುತ್ತಾ ಅಳುತ್ತಾ ಇದ್ದಕಿದ್ದಂತೆ ಅಳು ನಿಲ್ಲಿಸಿಬಿಡುತ್ತಾರೆ. ಉಸಿರೇ ನಿಂತಂತಿರುತ್ತಾರೆ. ಒಮ್ಮೊಮ್ಮೆ ನೀಲಿ ಬಣ್ನಕ್ಕೆ ತಿರುಗುತ್ತಾರೆ. ಈ ಪರಿಸ್ಥಿತಿಯನ್ನು ಆಂಗರ್ಸ್ ಪಾಸಂ ನೋಡಿ ಹೆದರುವ ಅಗತ್ಯವಿಲ್ಲ. ಮತ್ತೆ ಸಹಜ ಸ್ಥಿತಿಗೆ ಬರುತ್ತಾರೆ. ಯಾವುದೇ ಔಷಧಿಯ ಅಗತ್ಯವಿಲ್ಲ. ಒಳ್ಳೆಯ ಮಾತುಗಳಿಂದ ಅವರ ವರ್ತನೆಯಲ್ಲಿ ಬದಲಾವಣೆ ತರಬಹುದು.