ಮನೆ ರಾಜಕೀಯ ಸೋಮಣ್ಣ ವಿರುದ್ಧ ದೂರು ನೀಡುವಂತೆ ಮಾನಸಿಕ ಹಿಂಸೆ: ಸಂತ್ರಸ್ತೆಯಿಂದ ದೂರು ದಾಖಲು

ಸೋಮಣ್ಣ ವಿರುದ್ಧ ದೂರು ನೀಡುವಂತೆ ಮಾನಸಿಕ ಹಿಂಸೆ: ಸಂತ್ರಸ್ತೆಯಿಂದ ದೂರು ದಾಖಲು

0

ಚಾಮರಾಜನಗರ(Chamarajanagara): ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ನಡೆದ ನಿವೇಶನ ಹಂಚಿಕೆ ಕಾರ್ಯಕ್ರಮ ದಲ್ಲಿ ಸಚಿವ ವಿ.ಸೋಮಣ್ಣ ನನಗೆ ಕೆನ್ನೆಗೆ ಹೊಡೆದಿದ್ದಾರೆ ಎಂಬ ವಿಚಾರ ವನ್ನಿರಿಸಿಕೊಂಡು ವಿವಿಧ ಸಂಘಟನೆ ಮುಖಂಡರು, ರಾಜಕೀಯ ನಾಯಕರು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಕೆಂಪಮ್ಮ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿರುವ ಹಂಗಳ ಗ್ರಾಮದ ಕೆಂಪಮ್ಮ, ನಾನು ಕೂಲಿ ಮಾಡಿ ಬದುಕು ನಡೆಸುತ್ತಿದ್ದೇನೆ. ನನ್ನನ್ನು ಮಕ್ಕಳೊಡನೆ ಬದುಕಲು ಬಿಡಿ ಎಂದು ಕೋರಿದ್ದಾರೆ ಅಂತೆಯೇ ರಕ್ಷಣೆ ನೀಡುವಂತೆಯೂ ಮನವಿ ಮಾಡಿದ್ದಾರೆ.

ದೂರು ನೀಡಲು 15 ಲಕ್ಷ ಆಮಿಷ

ಸಚಿವರು ನನಗೆ ಹೊಡೆದಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದುದು. ನನ್ನ ಸಮಸ್ಯೆ ಆಲಿಸಿ ನಿವೇಶನ ನೀಡುತ್ತೇನೆ, ಕಾಲಿಗೆ ಬೀಳಬೇಡ ಸುಮ್ಮನಿರು ಎಂದು ನನ್ನ ಕೈಹಿಡಿದು ಮೇಲೆತ್ತಿದ್ದರು. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಹಿಂಸೆ ನೀಡುತ್ತಿದ್ದಾರೆ. ಮನೆ ಬಳಿ ಬಂದು ನಿನಗೆ ₹ 15 ಲಕ್ಷ ಕೊಡುತ್ತೇವೆ, ಸೋಮಣ್ಣ ಕಪಾಳಕ್ಕೆ ಹೊಡೆದರು ಎಂದು ಪೊಲೀಸ್ ಠಾಣೆಗೆ ದೂರು ನೀಡು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಕೆಲ ಸಂಘಟನೆ ಮತ್ತು ರಾಜ ಕೀಯ ನಾಯಕರಿಂದ ಹಿಂಸೆಯಾಗಿದೆ ಎಂದು ಕೆಂಪಮ್ಮ ತಿಳಿಸಿದರು.

ಹಣದ ಆಮಿಷವೊಡ್ಡಿ ಹೇಳಿಕೆ ಕೊಡುವಂತೆ ಪೀಡಿಸಲಾಗುತ್ತಿದೆ. ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಸೂಕ್ತ ರಕ್ಷಣೆ ನೀಡಬೇಕು. ಮಾನಸಿಕವಾಗಿ ಹಿಂಸೆ ನೀಡಿದರೆ ನಾನು ಮತ್ತು ನನ್ನ ಮಕ್ಕಳ ಸಾವಿಗೆ ಸಂಘ–ಸಂಸ್ಥೆಯವರೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಿಂದಿನ ಲೇಖನಡಿಆರ್’ಡಿಓ: ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಇಂದು ಅಧಿಕಾರ ಸ್ವೀಕಾರ