ಮನೆ ಜ್ಯೋತಿಷ್ಯ ಬುಧ ಗ್ರಹ

ಬುಧ ಗ್ರಹ

0


ಸೌರಮಂಡಲದಲ್ಲಿರುವ ಅತಿ ಚಿಕ್ಕ ಹಾಗೂ ಪ್ರಕಾಶಮಾನವಾದ ಗ್ರಹ ಬುಧ ಗ್ರಹವಾಗಿದೆ. ಇದು ಸೂರ್ಯನಿಗೆ ಅತಿ ಸಮೀಪದಲ್ಲಿದೆ. ಕೇವಲ 40 ದಿನಗಳಲ್ಲಿ ಒಂದು ಬಾರಿ ಸೂರ್ಯನನ್ನು ಸುತ್ತುವುದು. ಸೂರ್ಯೋದಯದ ಮೊದಲು ಅಥವಾ ಸೂರ್ಯಾಸ್ತದ ತಕ್ಷಣದಲ್ಲಿ ಇದನ್ನು ನೋಡಬಹುದಾಗಿದೆ. ಬುಧ ಗ್ರಹದಲ್ಲಿ 350°c ಉಷ್ಣತೆಯಿರುವುದು. ಈ ಗ್ರಹದಲ್ಲಿಯೂ ಅಧಿಕ ಉಷ್ಣತೆಯಿರುವ ಕಾರಣ ಅಲ್ಲಿ ಯಾವುದೇ ಜೀವಿ ಇರುವುದು ಸಾಧ್ಯವಿಲ್ಲ. ಇದು ಸೂರ್ಯನ ಸನಿಹದಲ್ಲಿರುವುದರಿಂದಾಗಿ ಅಲ್ಲಿಗೆ ಹೋಗುವುದು ಸಹ ಕಠಿಣವಾಗಿರುವುದು.
ಭೂಮಿಯಿಂದ ಬುಧ ಗ್ರಹವು 3 ಕೋಟಿ 70 ಲಕ್ಷ ಮೈಲಿ ದೂರದಲ್ಲಿರುವುದು.


ಬುಧ ಗ್ರಹಕ್ಕೆ ಜೋತಿರ್ವಿಜ್ಞಾನಿಗಳು 5 ಅಂಕೆಯನ್ನು ನೀಡಿದ್ದಾರೆ. ಕನ್ಯಾ ಹಾಗೂ ಮಿಥುನ ರಾಶಿಗಳಿಗೆ ಬುಧ ಗ್ರಹವು ಅಧಿಪತಿಯಾಗಿರುವದು. ಭೂಮಿಯ ಮೇಲೆ ಬುಧ ಗ್ರಹದ ಪರಿಣಾಮ ಅಧಿಕವಾಗಿರುವುದು. ಸೂರ್ಯನ ಗತಿಯನ್ನು ದಾಟುವಂತಿದ್ದಾಗ ಬಿರುಗಾಳಿ, ಚಂಡಮಾರುತ, ಮಳೆ ಅಥವಾ ಬರಗಾಲಗಳ ಭಯ ಮೂಡಿಸುವುದು.
ಬುಧ ಗ್ರಹವು ಶುಭಕರವಾಗಿದ್ದಾಗ ವ್ಯಾಪಾರ, ಮಾತಿನ ಚತುರತೆ, ಗಣಿತ, ಶಿಲ್ಪಕಲೆ, ಚಿತ್ರ ನಿರ್ಮಾಣ, ನೃತ್ಯ, ಗಾಯನ, ವಾದ್ಯ, ಹಾಸ್ಯ, ಧ್ವನಿ, ಚರ್ಮ, ಕೈಕಾಲು, ವಿದ್ಯೆ, ಬುದ್ಧಿ ಚತುರ್ಯ, ಕೂಟ ನೀತಿ, ಮಾವ, ಚಿಕ್ಕಪ್ಪ ಮುಂತಾದ ವಿಷಯಗಳ ಬಗೆಗೆ ತಿಳಿಯಬಹುದಾಗಿದೆ. ಬುಧ ಗ್ರಹವು ಸೌರಮಂಡಲದಲ್ಲಿ ಅತಿ ಚಿಕ್ಕ ಗ್ರಹವಾಗಿ ಪಕ್ಷಿಗಳ ಜಗತ್ತಿಗೆ ಸಹ ಅಧಿಪತಿ ಎನಿಸಿರುವುದು.
ಬುಧ ಗ್ರಹವು ಹಸಿರು ಬಣ್ಣ, ಸ್ಪಷ್ಟಮಾತು, ರಜೋಗುಣ, ಕ್ಷೀಣ ಶರೀರ, ಪ್ರಸನ್ನಮುದ್ರೆ, ಕಫ, ಪ್ರಕೃತಿ, ಶೂದ್ರ ಜಾತಿ ಮತ್ತು ನಪುಂಸಕತೆಗಳನ್ನು ತಿಳಿಯಲು ಕಾರಣವಾಗಿದೆ. ಪಕ್ಷಿಗಳ ಆಕೃತಿ ಪಂಡಿತರ ಬುದ್ಧಿವಂತರ ಸ್ವಭಾವ, ಆಟಗಾರರ ವಿಶೇಷತೆ ತಿಳಿಯಲು ಸಹಾಯಕವಾಗಿದೆ. ಶರದ್ ಋತು, ಸುಗಂಧ ತೈಲ, ಮೈದಾನಗಳು, ಹಸಿರು ತೋಟ, ಉದ್ಯಾನಗಳು, ಬೇಳೆ, ಹವಳ, ದುಡ್ಡು, ಕಂಚು, ಸ್ಥಾನಗಳಲ್ಲಿ ಪ್ರಭಾವಿರುವುದು.
ಬುಧ ಶುಭಕರನಾಗಿದ್ದಾಗ ಅನೇಕ ಗುಣ ಮತ್ತು ಕಲೆಗಳ ವಿಕಾಸನಕ್ಕೆ ಕಾರಣವಾಗುವನು. ಅಶುಭಕರನಾಗಿದ್ದಾಗ ಶ್ವಾಸರೋಗ, ಸ್ನಾಯು ರೋಗ, ಮಾತಿನ ದೋಷ, ತಲೆನೋವು, ಕೆಮ್ಮು, ದಮ್ಮು ಮುಂತಾದ ರೋಗಗಳಿಗೆ ಕಾರಹನೆನಿಸುವನು. ಉತ್ತಮಫಲ ನೀಡುವ ಬುಧ ಗ್ರಹ ವೈಜ್ಞಾನಿಕ, ಗಣಿತಜ್ಞ ,ಸಂಪಾದನ, ಲೇಖನ, ಸಾರ್ವಜನಿಕ ಸಭೆ, ಅಧ್ಯಕ್ಷರ, ಮುಂತಾದ ವಿಷಯಗಳಿಗೆ ಪರಿಣಾಮಕಾರಕನಾಗಿದ್ದಾನೆ.
ಅಶುಭಕರಕನಾಗಿದ್ದಾಗ ಹುಟ್ಟಿದವನು ಅವಿಶ್ವಾಸಿ. ಸಂಶಯೇ ಸ್ವಾರ್ಥಿಯಾಗಲು ಕಾರಣನಾಗುವವನು. ಬುಧಗ್ರಹ ದೋಷ ನಿವಾರಣೆಗೆ ಮಣಿಧಾರಣೆ ಮಾಡಬೇಕು. ಬುಧಗ್ರಹದ ಪ್ರಭಾವ 32 ರಿಂದ 41 ವರ್ಷದವರೆಗೆ ಉಂಟಾಗುವುದು. ಅಶುಭ ಕಾರಕನಾದ ಬುಧನ ಪೀಡಾ ಪರಿಹಾರಕ್ಕೆ ಮರಕತಮಣಿ ಧರಿಸುವುದು ಪರಿಹಾರವೆನಿಸಿದೆ.