ಮನೆ ಸುದ್ದಿ ಜಾಲ ನಿಗದಿತ ಅವಧಿಯೊಳಗೆ ಮೆಟ್ರೋ ನೀಲಿ ಮಾರ್ಗ ಕಾಮಗಾರಿ ಮುಗಿಯಬೇಕು – ಡಿಕೆಶಿ

ನಿಗದಿತ ಅವಧಿಯೊಳಗೆ ಮೆಟ್ರೋ ನೀಲಿ ಮಾರ್ಗ ಕಾಮಗಾರಿ ಮುಗಿಯಬೇಕು – ಡಿಕೆಶಿ

0

ಬೆಂಗಳೂರು : ಬೆಳಗಾವಿ ಅಧಿವೇಶನ ಆರಂಭವಾಗುತ್ತಿದ್ದು, ಬೆಂಗಳೂರಿನಲ್ಲಿ ಕೆಲಸ ಕಾರ್ಯಗಳನ್ನು ಚುರುಕುಗೊಳಿಸಲು ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಶುಕ್ರವಾರದಂದು ಮೆಟ್ರೋ ಕಾಮಗಾರಿ ಪರಿಶೀಲಿಸಿದ ಡಿಸಿಎಂ, ನಿಗದಿತ ಅವಧಿಯೊಳಗೆ ಮೆಟ್ರೋ ನೀಲಿ ಮಾರ್ಗ ಕಾಮಗಾರಿ ಮುಗಿಯಬೇಕು. ಇಲ್ಲವಾದಲ್ಲಿ ಇನ್ನು ಮುಂದೆ ಕಾಮಗಾರಿ ನೀಡುವುದಿಲ್ಲವೆನ್ನುತ್ತಾ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊಡಿಗೆಹಳ್ಳಿ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿ ಪರಿಶೀಲನೆ ನಡೆಸಿದ ಡಿಕೆಶಿ, ಕಾಮಗಾರಿಯಲ್ಲಾದ ವಿಳಂಬಕ್ಕೆ ಕೋಪಗೊಂಡರು. ಸ್ಥಳದಲ್ಲಿದ್ದ ನಾಗಾರ್ಜುನ್ ಕನ್ಸ್ಟ್ರಕ್ಷನ್‌ನ ಪ್ರತಿನಿಧಿ ಪ್ರೇಮ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡು, ಟೈಂ ಈಸ್ ಮನಿ, ಟೈಂ ಈಸ್ ವ್ಯಾಲ್ಯೂ. ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಿದ್ರೇ ಮುಂದಿನ ಕಾಮಗಾರಿ ನೀಡುತ್ತೇವೆ ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಲಾಂಚಿಂಗ್ ಗರ್ಡರ್ ಯಂತ್ರವನ್ನು ನಗರದಿಂದ ಹೊರಕ್ಕೆ ಕೊಂಡೊಯ್ಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುತ್ತಿಗೆದಾರರಿಗೆ ಖಡಕ್ ಆಗಿ ಹೇಳಿದ್ದಾರೆ.

ಕೆ.ಆರ್.ಪುರ–ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಿನ ಮೆಟ್ರೋ ಸಂಚಾರವನ್ನು 2026 ಡಿಸೆಂಬರ್‌ನಲ್ಲಿ, ಹೆಬ್ಬಾಳ–ಎರೋಪೋರ್ಟ್ ಮಾರ್ಗವನ್ನು 2027 ಜೂನ್‌ನಲ್ಲಿ ಆರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದ ಅವರು, 58 ಕಿ.ಮೀ ಉದ್ದದ ಈ ಮಾರ್ಗಕ್ಕೆ 15 ಸಾವಿರ ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. 30 ಮೆಟ್ರೋ ನಿಲ್ದಾಣಗಳಲ್ಲಿ 5–10 ಸ್ಟೇಷನ್ ಬ್ಲಾಕ್‌ಗಳು ಪೂರ್ಣಗೊಳ್ಳಿತ್ತಿದ್ದಂತೆ ಸಂಚಾರ ಭಾಗಶಃ ಆರಂಭಿಸುವ ನಿರ್ಧಾರ ಮಾಡಿದ್ದೇವೆಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಭೂಮಿ ನೀಡಲು ಒಪ್ಪಿದ ರೈತರಿಗೆ ಕೊಟ್ಟ ಮಾತಿನಂತೆ ಪರಿಹಾರ ನೀಡಲಾಗುವುದು, ಒಪ್ಪದವರಿಗೆ ಹಳೆಯ ದರದಲ್ಲಿ ಡೆಪಾಸಿಟ್ ಮಾಡಲು ಸೂಚಿಸಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ. ರಸ್ತೆ ನಿರ್ಮಾಣ ತಪ್ಪದೇ ನಡೆಯಲಿದೆ. ರೈತರಿಗೆ ಐದು ಆಯ್ಕೆಗಳನ್ನು ನೀಡಿದ್ದೇವೆ. 35 ಪರ್ಸೆಂಟ್ ಕಮರ್ಷಿಯಲ್ ಲ್ಯಾಂಡ್ ಕೊಡುವುದಾಗಿಯೂ ಹೇಳಿದ್ದೇವೆ. ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.