ಮನೆ ರಾಜ್ಯ ಬ್ರಿಗೇಡ್ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ:  ಗುಂಡಿಬಿದ್ದ ರಸ್ತೆ

ಬ್ರಿಗೇಡ್ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ:  ಗುಂಡಿಬಿದ್ದ ರಸ್ತೆ

0

ಬೆಂಗಳೂರು(Bengaluru): ಗುರುವಾರ ಮೆಟ್ರೊ ಕಾಮಗಾರಿ ನಡೆಯುತ್ತಿರುವ ಬ್ರಿಗೇಡ್ ರಸ್ತೆಯಲ್ಲಿ ‘ಸಿಂಕ್ ಹೋಲ್’ ಮೂಡಿದೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಈ ಕುರಿತು ಪ್ರತಿಕ್ರಿಯಿಸಿದ್ದು, ಬ್ರಿಗೇಡ್‌ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿರುವ ವೇಳೆ ಸಿಂಕ್‌ ಹೋಲ್‌ ಬಿದ್ದಿದೆ. ಬ್ರಿಗೇಡ್‌ ರಸ್ತೆಯ ಬಳಿ ಟ್ರಿನಿಟಿ ವೃತ್ತದಿಂದ ಶಿವಾಜಿನಗರದವರೆಗೂ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು, ಶಿವಾಜಿನಗರದಿಂದ 2ನೇ ಹಂತದಲ್ಲಿ ಸುರಂಗ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ.

ನಾಲ್ಕು ದಿನಗಳ ಹಿಂದೆ ಆ ಸ್ಥಳದಿಂದ ಟಿಬಿಎಂ ಹಾದುಹೋಗಿದೆ.  ಟಿಬಿಎಂ ಹಾದುಹೋದ ಆ ಸ್ಥಳದಲ್ಲಿ ಕಾಂಕ್ರಿಟ್‌ ಪಿಲ್ಲರ್‌ ಕೂಡ ಅಳವಡಿಸಲಾಗಿದೆ. ಬ್ರಿಗೇಡ್‌ ರಸ್ತೆಯಲ್ಲಿ ಬಿದ್ದಿರುವ ಸಿಂಕ್‌ ಹೋಲ್‌’ಗೆ ಕಾಂಕ್ರಿಟ್‌ ಹಾಕಲಾಗುವುದು. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.