ಮಹಾತ್ಮಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್’ಮೆಂಟ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 2 ಅಟೆಂಡರ್, ಕನ್ಸಲ್ಟಿಂಗ್ ಫ್ಯಾಕಲ್ಟಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಬೆಂಗಳೂರಿನಲ್ಲಿ ನೌಕರಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಸಕ್ತರು ನವೆಂಬರ್ 22, 2022ಕ್ಕೆ ಮುನ್ನ ಇ-ಮೇಲ್ ಮಾಡಬೇಕು.
ಹುದ್ದೆಯ ಮಾಹಿತಿ:
ಅಟೆಂಡರ್-1
ಕನ್ಸಲ್ಟಿಂಗ್ ಫ್ಯಾಕಲ್ಟಿ-1
ವಿದ್ಯಾರ್ಹತೆ:
ಅಟೆಂಡರ್- 10ನೇ ತರಗತಿ
ಕನ್ಸಲ್ಟಿಂಗ್ ಫ್ಯಾಕಲ್ಟಿ- ಅಗ್ರಿಕಲ್ಚರ್/ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್ನಲ್ಲಿ ಬಿಇ, ಎಂಎಸ್ಸಿ
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಮಹಾತ್ಮಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ ಇರಬೇಕು
ವಯೋಮಿತಿ ಸಡಿಲಿಕೆ:
ಮಹಾತ್ಮಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ವೇತನ:
ಅಟೆಂಡರ್- ಮಾಸಿಕ₹ 13,000
ಕನ್ಸಲ್ಟಿಂಗ್ ಫ್ಯಾಕಲ್ಟಿ- ಮಾಸಿಕ ₹ 30,000-35,000
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ mgiredblr@gmail.com ಗೆ ನವೆಂಬರ್ 22ಕ್ಕೆ ಮುನ್ನ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 15/11/2022
ಇ-ಮೇಲ್ ಮಾಡಲು ಕೊನೆಯ ದಿನ: 22/11/2022
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್-9739475875, 9844421983 ಗೆ ಕರೆ ಮಾಡಬಹುದು.