ಮನೆ ರಾಜಕೀಯ ಮೈಕ್ರೋ ಫೈನಾನ್ಸ್ ಹಾವಳಿ: ಕಿರುಕುಳ ನೀಡಿದವರ ವಿರುದ್ಧ ಸುಮೊಟೋ ಕೇಸ್- ಗೃಹ ಸಚಿವ ಪರಮೇಶ್ವರ್

ಮೈಕ್ರೋ ಫೈನಾನ್ಸ್ ಹಾವಳಿ: ಕಿರುಕುಳ ನೀಡಿದವರ ವಿರುದ್ಧ ಸುಮೊಟೋ ಕೇಸ್- ಗೃಹ ಸಚಿವ ಪರಮೇಶ್ವರ್

0

ಬೆಂಗಳೂರು: ಸಾಲ ವಸೂಲಿಗಿಳಿದು ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಗಳ ವಿರುದ್ದ ಸುಮೊಟೋ ಕೇಸ್ ದಾಖಲಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Join Our Whatsapp Group

ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರಿವಾಜ್ಞೆ ಹೊರಡಿಸಲಾಗುವುದು.  . ಕಿರುಕುಳ ನೀಡಿದವರ ವಿರುದ್ದ ಸುಮೋಟೊ ಕೇಸ್ ದಾಖಲಿಸಲಾಗುತ್ತದೆ. ಕಿರುಕುಳದ  ಬಗ್ಗೆ ಎಸ್ ಪಿ ಡಿಸಿಗೆ ದೂರು ಕೊಡಬಹುದು.

ಜನರು ದೂರು ನೀಡಿದ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ . ಈ ಸಂಬಂಧ ರಾಜ್ಯಾದ್ಯಂತ ಸಹಾಯವಾಣಿ ಪ್ರಾರಂಭಿಸಲಾಗಿದೆ.  ಸುಗ್ರೀವಾಜ್ಞೆ ಕುರಿತು ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.