ಒಡಿಶಾದ ಮಾಲ್ಕನ್ ಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಮೈಕ್ರೋಸ್ಕೋಪ್ ಅನ್ನು ಅಳವಡಿಸಲಾಗಿದೆ. ಅದರ ಸಹಾಯದಿಂದ ಮಲೇರಿಯಾವನ್ನು ಸಮರ್ಪಕವಾಗಿ ಪತ್ತೆ ಹಚ್ಚಲಾಗುತ್ತಿದೆ.
ಮುಂಬೈನಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನೆರವಿನಿಂದ ಸ್ಥಾಪನೆಗೊಂಡಿರುವ ಸ್ಟಾರ್ಟ್ ಅಪ್ ನ ತಾಂತ್ರಿಕ ನೆರವಿನಿಂದ ಅದನ್ನು ಅಳವಡಿಸಲಾಗಿದೆ. ಪಿ. ಫಾಲ್ಸಿಪಾರಮ್, ಪಿ. ವಿವಾಕ್ಸ್ ಎಂಬ ಎರಡು ಮಲೇರಿಯಾ ವಿಧಗಳನ್ನು ಸೂಕ್ತವಾಗಿ ವರ್ಗೀಕರಿಸಿ, ಕಂಡುಹಿಡಿಯಲು ಇದು ನೆರವಾಗುತ್ತಿದೆ.