ಮೈಗ್ರೇನ್ ಎನ್ನುವುದು ಪದೇಪದೇ ಬರುವ ಒಂದು ಬಗೆಯ ತಲೆನೋವು. ಇದು ನರ ವ್ಯವಸ್ಥೆಗೆ ಸಂಬಂಧಿಸಿದ ಒಂದು ಸಾಧಾರಣ ರೋಗ.
ಜನಸಂಖ್ಯೆಯಲ್ಲಿ ಶೇಕಡ ಐದು ಮಂದಿ ಮೈಗ್ರೇನ್ ನಿಂದ ತೊಂದರೆ ಪಡುತ್ತಿರುವರೆಂದು ಅಂದಾಜು.ಪುರುಷರಿಗಿಂತ ಸ್ತ್ರೀಯರಿಗೆ ಅಧಿಕವಾಗಿ ಬರುತ್ತದೆ. ವಂಶಪಾರಂಪರ್ಯವಾಗಿ ಬರುವ ಸಂಭವವಿದೆ.
ಮೈಗ್ರೇನ್ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ರೀತಿಯಾಗಿರುತ್ತವೆ, ಇದರಲ್ಲಿ ಎರಡು ಬಗೆಗಳಿವೆ :
1.ಸಾಧಾರಣ ಮೈಗ್ರೇನ್
2.ಕ್ಲಾಸಿಕ್ ಮೈಗ್ರೇನ್
ಸಾಧಾರಣ ಮೈಗ್ರೇನ್ ನಲ್ಲಿ ತಲೆನೋವು ಮಾತ್ರವಿದ್ದರೆ, ಕ್ಲಾಸ್ಸಿಕ್ ಮೈಗ್ರೇನ್ ನಲ್ಲಿ ತೀವ್ರ ತಲೆನೋವಿನ ಜೊತೆಗೆ, ಈ ಕೆಳಗಿನ ಲಕ್ಷಣಗಳಲ್ಲಿ ಕೆಲವು ಅಥವಾ ಎಲ್ಲವೂ ಇರಬಹುದು.
ಲಕ್ಷಣಗಳು :-
★ ಮೈಗ್ರೇನ್ ಅಟ್ಯಾಕ್ ಬರುತ್ತಿರುವಂತೆ ಮೊದಲೇ ಸೂಚನೆಗಳು ಕಂಡುಬರುತ್ತವೆ, ಸಾಧಾರಣವಾಗಿ ಇದು ನಿದ್ರೆಯಿಂದ ಎಚ್ಚರವಾಗುತ್ತಲೇ ಅನಿಸುತ್ತದೆ.
ಕಣ್ಮುಂದೆ ಕಣ್ಣು ಕೋರೈಸುವಂತಹ ಬೆಳಕಿನ ಚಿಕ್ಕೆಗಳಾಗಲಿ, ಝಿಗ್ ಝಾಗ್ ಗೀಟುಗಳಾಗಲಿ ಕಾಣಿಸುವುದರೊಂದಿಗೆ ಮುನ್ಸೂಚನೆ ಪ್ರಾರಂಭವಾಗುತ್ತದೆ.
ಈ ಸೂಚನೆ ಕಾಣಿಸಿಕೊಂಡ ಕೆಲವು ನಿಮಿಷಗಳ ನಂತರ,ಮುಖದ ಒಂದು ಭಾಗವಾಗಲಿ, ಒಂದು ಕೈ ಅಥವಾ ಒಂದು ಕಾಲಾಗಲಿ ಮರಗಟ್ಟಿದಂತೆ ಅನಿಸುವುದು, ಸೂಜಿಗಳಿಂದ ಚುಚ್ಚುತ್ತಿರುವ ಅನುಭವ, ಬಲಹೀನತೆಗಳಂತಹವು ಉಂಟಾಗುತ್ತವೆ.
ನಂತರ ಕಣ್ಣುಗಳು ತಿರುಗುತ್ತಿರುವ ಭಾವನೆ ಗೊಂದಲ ಇರುತ್ತವೆ ಮಾತನಾಡಲು ಸ್ವಲ್ಪ ತೊಂದರೆಯೂ ಅನ್ನಿಸಬಹುದು.
ಕೆಲವು ನಿಮಿಷಗಳ ಅವಧಿಯಲ್ಲಿ,ಈ ಲಕ್ಷಣಗಳು ಶರೀರದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವ್ಯಾಪಿಸುತ್ತವೆ.
ಸ್ವಲ್ಪ ಸಮಯದಲ್ಲಿ ಈ ಪ್ರಾರಂಭಿಕ ಲಕ್ಷಣಗಳು ನಿಧಾನವಾಗಿ ಅದೃಶ್ಯವಾಗಿ,ನಿಜವಾದ ತೀವ್ರ ತಲೆನೋವು ಪ್ರಾರಂಭವಾಗುತ್ತದೆ.ತಲೆಯ ಒಂದು ಪಾರ್ಶ್ವದಲ್ಲಿ ಸುತ್ತಿಗೆಯಿಂದ ಹೊಡೆಯುತ್ತಿರುವಂತಿರುತ್ತದೆ.
ಆ ಮುನ್ನ ಶರೀರದ ಯಾವ ಪಾರ್ಶ್ವದಲ್ಲಿ ಮರಗಟ್ಟುವಿಕೆ,ಸೂಜಿಗಳಿಂದ ಚುಚ್ಚುವ ಅನಿಸಿಕೆಯಾಗಿತ್ತೋ. ಅದಕ್ಕೆ ವಿರುದ್ಧ ಪಾರ್ಶ್ವದ ತಲೆಯ ಭಾಗದಲ್ಲಿ ನೋವಿರುತ್ತದೆ.
ಉದಾಹರಣೆಗೆ ಮರಗಟ್ಟುವಿಗೆ, ಸೂಜಿಗಳಿಂದ ಚುಚ್ಚಿದಂತೆ ಶರೀರದ ಎಡಭಾಗದಲ್ಲಿ ಅನುಭವವಾದರೆ,ಮೈಗ್ರೇನ್ ತಲೆನೋವು ಅದಕ್ಕೆ ವಿರುದ ದಿಕ್ಕಿನಲ್ಲಿ ಅಂದರೆ ತಲೆಯ ಬಲ ಭಾಗದಲ್ಲಿ ಉಂಟಾಗುತ್ತದೆ.
ಒಂದೊಂದು ಬಾರಿ ಬೆಳಕನ್ನು ಸಹಿಸಲಾರದ ಸ್ಥಿತಿಯೂ ಇರುತ್ತದೆ.
ಇದೇ ಸ್ಥಿತಿಯಲ್ಲಿ ವಾಕರಿಕೆ,ವಾಂತಿ ಕೂಡಾ ಬರಬಹುದು.
ಮಕ್ಕಳಿಗಾದರೆ ವಾಂತಿಯ ಜೊತೆಗೆ ಕಿಬ್ಬೊಟ್ಟೆಯಲ್ಲಿ ನೋವೂ ಇರುತ್ತದೆ. ಇದರೊಂದಿಗೆ ತಲೆನೋವಿರಬಹುದು ಅಥವಾ ಇಲ್ಲದಿರಲೂಬಹುದು. ಮಕ್ಕಳಿಗೆ ಬರುವ ಈ ಸ್ಥಿತಿಯನ್ನು ಅಬ್ದುಮಿನಲ್ ಮಿಗ್ರನೆ ಎನ್ನುತ್ತಾರೆ.
ಎಷ್ಟು ಸಮಯ ಇರುತ್ತದೆ?
ಮೈಗ್ರೇನ್ ತಲೆನೋವು ಕೆಲವು ಗಂಟೆಗಳಿಂದ ಕೆಲವು ದಿನಗಳವರೆಗೂ ಮುಂದುವರೆಯುವ ಸಂಭವವಿದೆ.
ಮೈಗ್ರೇನ್ ತಲೆನೋವು ವಾರದಲ್ಲಿ ಎರಡು ಮೂರು ಬಾರಿ ಬರಬಹುದು, ಕಡಿಮೆ ಬಾರಿಯೂ ಬರಬಹುದು.ಮಹಿಳೆಯರಿಗೆ ಋತುಚಕ್ರದ ದಿನಗಳಲ್ಲಿ ಬರುತ್ತದೆ.