1. ಮೈಗ್ರೇನ್ ಸಂಬಂಧಿಸಿದ ಪ್ರಾರಂಭಿಕ ಲಕ್ಷಣಗಳು,ತಲೆಯ ಒಂದು ಪರ್ಶ್ ಕ್ಕೆ ಹೋಗುವ ರಕ್ತನಾಳಗಳು ಆಕಸ್ಮಿಕವಾಗಿ ಸಂಕುಚಿತಗೊಳ್ಳುವುದರಿಂದ ಪ್ರಾರಂಭವಾಗುತ್ತವೆ. ಇವೇ ರಕ್ತನಾಳಗಳು ಒಂದೇ ಬಾರಿಗೆ ಹಿಗ್ಗುವುದರಿಂದ.ಅಲ್ಲಿಗೆ ಹೆಚ್ಚಿನ ರಕ್ತ ಹರಿದುಬಂದು ತಲೆನೋವು ಪ್ರಾರಂಭವಾಗುತ್ತದೆ.
2. ಆದರೆ ಈ ರಕ್ತನಾಳಗಳು ಹೀಗೆ ತಕ್ಷಣವೇ ಆಗಿ ಏಕೆ ಕುಗ್ಗುತ್ತವೆ,ಏಕೆ ಹಿಗುತ್ತವೆ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ.
3. ಮೈಗ್ರೇನ್ ತಲೆನೋವು ಕಷ್ಟಪಟ್ಟು ಕೆಲಸ ಮಾಡುವವರಿಗೆ ಹೆಚ್ಚಾಗಿ ಬರುತ್ತದೆ.ಅಧಿಕ ಶ್ರಮ, ಮಾನಸಿಕ ಒತ್ತಡ ಅವರಲ್ಲಿ ಮೈಗ್ರೇನ್ ಸೃಷ್ಟಿಸಿತ್ತಿರುತ್ತದೆ ವಿಚಿತ್ರವೇನೆಂದರೆ,ಆಯಾ ಒತ್ತಡ ಕಡಿಮೆಯಾದಾಗ ಅಂದರೆ ವಾರಂತ್ಯದಲ್ಲಿಯೋ, ರಾಜಾ ದಿನಗಳಲ್ಲಿಯೋ ಅವರಿಗೆ ಮೈಗ್ರೇನ್ ಹೆಚ್ಚಾಗುತ್ತಿರುತ್ತದೆ.
4. ಸ್ರೀಯರಿಗೆ ಗರ್ವನಿರೋಧಕ ಮಾತ್ರೆಗಳ ಸೇವನೆಯಿಂದ ಮೈಗ್ರೇನ ಉಂಟಾಗುವ ಸಂಭವವಿದೆ. ಗರ್ಭಧಾರಣೆಯ ನಂತರ ಕಡಿಮೆಯಾಗುತ್ತದೆ.
5. ಪ್ರಕಾಶಮಾನವಾದ ಬೆಳಕು ಇಲ್ಲವೇ ಪ್ಲಾಷ್ ಲೈಟ್ ಕಣ್ಣುಗಳ ಮೇಲೆ ಬಿದ್ದಾಗ,ಮದ್ಯ ಸೇವನೆ ಮಾಡಿದಾಗ,ಇಲ್ಲವೇ ಕೆಲವು ಬಗೆಯ ಆಹಾರ ಪದಾರ್ಥಗಳನ್ನು ತೆಗೆದುಕೊಂಡಾಗ ಮೈಗ್ರೇನ್ ಬರುವ ಸಾಧ್ಯತೆಯಿದೆ.
ಕಾಂಪ್ಲಿಕೇಷನ್ ಜಟಿಲತೆಗಳು
1.ಮೈಗ್ರೇನ್ ಸಮಯದಲ್ಲಿ ಇರುವ ಅಸಹನೀಯ ಸಂಕಟದ ಹೊರತಾಗಿ,ಮೈಗ್ರೇನ್ ಕಾರಣದಿಂದ ಆನಂತರ ಏರ್ಪಡುವ ಜಟಿಲತೆಗಳೇನೂ ಇರುವುದಿಲ್ಲ.ಮೈಗ್ರೇನ್ ಇಲ್ಲದ ದಿನಗಳಲ್ಲಿ ಆ ವ್ಯಕ್ತಿ ಸಾಮಾನ್ಯವಾಗಿಯೇ ಕೆಲಸ ನಿರ್ವಹಿಸುತ್ತಿರುತ್ತಾನೆ.
ಗೃಹ ಚಿಕಿತ್ಸೆ
1. ತೀವ್ರ ತಲೆನೋವು ಅನಿಸಿದ ಕೂಡಲೇ ಪ್ರಶಾಂತವಾಗಿರುವ ಕತ್ತಲು ಕೋಣೆಗೆ ಹೋಗಿ ಕಣ್ಣು ಮುಚ್ಚಿಕೊಂಡು ಮಲಗಬೇಕು. ಇಲ್ಲವೇ ವಿಶ್ರಮಿಸಬೇಕು.
2. ಬಿಸಿನೀರು ಸ್ನಾನ ಮಾಡಬಾರದು..
3. ಮೆತ್ತನೆಯ ಒದ್ದೆ ಬಟ್ಟೆಯನ್ನು ಕಣ್ಣ ಮೇಲೆ ಹಾಕಿಕೊಳ್ಳಬೇಕು.
4. ತಲೆನೋವು ಬಂದಾಗ ಅಸ್ಪಿರಿನ್,ಪ್ಯಾರಾಸಿಟಮಾಲ್ ಇಲ್ಲವೆ ಇಬ್ರುಪ್ರೋಫೆನ್ ನಂತಹ ನೋವು ನಿವಾರಕವನ್ನು ಬಳಸಬಹುದು. ಆದರೆ 12 ವರ್ಷದೊಳಗಿನ ಮಕ್ಕಳಿಗೆ ಆಸ್ಪಿರಿನ್ ಕೊಡಬಾರದು. (ಔಷಧಗಳನ್ನು ವೈದ್ಯರ ಉಸ್ತುವಾರಿಯಲ್ಲಿ ತೆಗೆದುಕೊಳ್ಳುವುದೇ ಉತ್ತಮ ಎಂಬುದು ಮರೆಯಬೇಡಿ!)
5. ಪ್ರಶಾಂತವಾದ,ಸಂತೋಷ ಕರವಾದ ನೆನಪುಗಳು, ಆಲೋಚನೆಗಳೊಂದಿಗೆ ರಿಲ್ಯಾಕ್ಸ್ ಆಗಲು ಪ್ರಯತ್ನಿಸಬೇಕು. ನಿಧಾನವಾಗಿ ಗಾಢವಾಗಿ ಉಸಿರನ್ನು ಎಳೆದುಕೊಳ್ಳುತ್ತಾ ಬಿಡುತ್ತಿರಬೇಕು.
ಡಾಕ್ಟರ್ ಅನ್ನು ಯಾವಾಗ ಭೇಟಿಯಾಗಬೇಕು?
1. ತಲೆನೋವು ಹೆಚ್ಚು ತೀವ್ರವಾಗಿದ್ದು ಪದೇ ಪದೇ ಬರುತ್ತಿದ್ದರೆ ಡಾಕ್ಟರ್ ನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಬೇಕು.ಮೈಗ್ರೇನ್ ಎಂದು ತೀರ್ಮಾನವಾದರೆ ಪುನಃ ಡಾಕ್ಟರ್ ಬಳಿ ಹೋಗುವಾಗ ಅಗತ್ಯವಿಲ್ಲ .
ಡಾಕ್ಟರೇನು ಮಾಡುತ್ತಾರೆ ?
1. ಲಕ್ಷಣಗಳನ್ನು ಕೇಳಿ ತಿಳಿದಂತಹ ಅದು ಮೈಗ್ರೇನ್ ಹೌದೇ ಅಲ್ಲವೇ,ಎಂಬ ವಿಷಯದಲ್ಲಿ ಒಂದು ತೀರ್ಮಾನಕ್ಕೆ ಬರುತ್ತಾರೆ. ತಲೆನೋವಿಗೆ ಹೈ.ಬಿ.ಪಿ ಕಾರಣವೇ, ಅಲ್ಲವೇ ಎಂದು ತೀರ್ಮಾನಿಸಲು ತಕ್ಕ ಪರೀಕ್ಷೆಗಳನ್ನು ಮಾಡಿಸಬಹುದು.
2. ತೀವ್ರವಾದ ಪ್ರಕರಣಗಳಲ್ಲಿ ಮೈಗ್ರೇನ್ ಗೆ ಹೊರತಾದ ಬೇರೆ ಕಾರಣಗಳಿರಬಹುದೇ ಎಂಬ ಸಂದೇಹ ಬಂದರೆ ರಕ್ತ ಪರೀಕ್ಷೆ,ಇಲ್ಲವೇ ಕ್ಷ ಕಿರಣ ಮಾಡಲು ಶಿಫಾರಸ್ಸು ಮಾಡಬಹುದು.
3. ಎಲ್ಲ ಪರೀಕ್ಷೆಗಳನ್ನು ಮಾಡಿ. ಮೈಗ್ರೇನ್ ಎಂಬ ತೀರ್ಮಾನಕ್ಕೆ ಬಂದಾಗ ಮೈಗ್ರೇನ್ ಪುನಃ ಪುನಃ ಇಲ್ಲವೇ ಹೆಚ್ಚು ತೀವ್ರವಾಗಿಯಾಗಲಿ ಬರುತ್ತಿದ್ದರೆ, ಡಾಕ್ಟರ್ ಗೆಮ ಕೆಲುವು ಪ್ರತ್ಯೇಕ ಔಷಧಗಳನ್ನು ಬರೆದುಕೊಡುತ್ತಾರೆ.
4. ಈ ಔಷಧಿಗಳಲ್ಲಿ ಕೆಲವನ್ನು ಮೈಗ್ರೇನ್ ಬರದಂತಿರಲು, ಕ್ರಮಬದವಾಗಿ ಬಳಸುವ ಅಗತ್ಯವಿರಬಹುದು.
5. ಮತ್ತೆ ಕೆಲವು ಔಷಧಗಳನ್ನು ಮೈಗ್ರೇನ್ ಪ್ರಾರಂಭವಾಗುತ್ತಲೇ ತೆಗೆದುಕೊಳ್ಳ ಬೇಕಾಗಬಹುದು.
6. ಈ ಔಷಧಿಗಳ ವಿಷಯದಲ್ಲಿ ಒಂದು ಸೂಚನೆಯೇನೆಂದರೆ ಡಾಕ್ಟರು ಸೂಚಿಸಿದ ಪ್ರಮಾಣಕ್ಕಿಂತ ಎಂದಿಗೂ ಹೆಚ್ಚಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಅವುಗಳಲ್ಲಿ Ergot ಎಂಬ ಔಷಧಿಗಳಿಗೆ ಸಂಬಂಧಿಸಿದ ಮಾತ್ರೆಗಳನ್ನು ಮೈಗ್ರೇನ್ ಶುರುವಾದ ಕೆಲವು ನಿಮಿಷಗಳ ನಂತರ ಸೇವಿಸಿದರೆ ಒಳ್ಳೆಯ ಕೆಲಸ ಮಾಡುತ್ತದೆ.ಈ ಔಷಧಿಯ ಡೋಸನ್ನು ಮೀರಿ ಅತಿಯಾಗಿ ತೆಗೆದುಕೊಂಡರೆ,ಅದಕ್ಕೆ ತಲೆನೋವನ್ನು ಹೆಚ್ಚಿಸುವ ಗುಣವಿರುತ್ತದೆ.
ನಿವಾರಣೆ
1. ಕೆಲಸದ ಒತ್ತಡ ಅಧಿಕವಾಗಿರುವುದು, ಇಲ್ಲವೇ ಭಾವೋದ್ವೇಗಗಳ ಒತ್ತಡದ ಕರಣದಿಂದ ಮೈಗ್ರೇನ್ ಉಂಟಾಗುತ್ತಿದ್ದರೆ, ಜೀವನಶೈಲಿಯಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮೈಗ್ರೇನ್ ನಿಂದ ದೂರವಿರಬಹುದು.
2. ಒಂದೊಂದು ವೇಳೆ ಕೆಲವು ಬಗೆಯ ಆಹಾರ ಪಾನೀಯಗಳಿಂದಾಗಿ ಮೈಗ್ರೇನ್ ಬರುತ್ತಿರಬಹುದು.ಅಂತಹ ಆಹಾರ ಪಾನೀಯಗಳನ್ನು ಗುರುತಿಸಿ ಅವುಗಳಿಂದ ದೂರವಿರುವುದರ ಮೂಲಕ, ಮೈಗ್ರೇನ್ ಬರದಂತೆ ನೋಡಿಕೊಳ್ಳಬಹುದು.
3. ಸ್ತ್ರೀಯರಿಗೆ ಗರ್ಭನಿರೋಧಕ ಮಾತ್ರೆ ಗಳಿಂದ ಮೈಗ್ರೇನ್ ಬರುವುದೆಂದು ಗೊತ್ತಾದರೆ,ತಾವು ಬಳಸುತ್ತಿರುವ ಮಾತ್ರೆಗಳನ್ನು ನಿಲ್ಲಿಸಿ, ಬೇರೆ ಗರ್ಭ ನಿರೋಧಕ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಿಕೊಳ್ಳಬೇಕು.
4. ಕೆಲವರು ಸ್ತ್ರೀಯರಿಗೆ ಮೆನೋಪಾಸ್ ಮುಟ್ಟು ನಿಲ್ಲುವಿಕೆಗೆ ಬರುತ್ತಲೇ ಮೈಗ್ರೇನ್ ತಂತಾನೇ ಪೂರ್ತಿಯಾಗಿ ನಿಂತು ಹೋಗುತ್ತದೆ.