ಮನೆ ರಾಜ್ಯ ಆಗಸ್ಟ್​ 1ರಿಂದ ಹಾಲಿನ ದರ ಏರಿಕೆ ಬರೆ: ನಂದಿನಿ ಹಾಲಿನ ದರ ಎಷ್ಟೆಷ್ಟು ಹೆಚ್ಚಾಗಲಿದೆ?

ಆಗಸ್ಟ್​ 1ರಿಂದ ಹಾಲಿನ ದರ ಏರಿಕೆ ಬರೆ: ನಂದಿನಿ ಹಾಲಿನ ದರ ಎಷ್ಟೆಷ್ಟು ಹೆಚ್ಚಾಗಲಿದೆ?

0

ಬೆಂಗಳೂರು: ಹಾಲಿನ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದು,  ಆಗಸ್ಟ್​ 1ರಿಂದ ಹಾಲಿನ ದರ 3 ರೂಪಾಯಿ ಹೆಚ್ಚಾಗಲಿದೆ.

Join Our Whatsapp Group

5 ರೂಪಾಯಿ ಏರಿಕೆ ಮಾಡಲು ಹಾಲು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದ್ದರು. ಆದರೆ, ಸಿಎಂ 3 ರೂ. ಏರಿಕೆಗೆ ಮಾತ್ರ ಅನುಮತಿ ನೀಡಿದ್ದಾರೆ. ಅಲ್ಲದೆ, ಏರಿಕೆಯಾಗುವ 3 ರೂಪಾಯಿ ಹಾಲು ಉತ್ಪಾದಕರಿಗೆ ಹೋಗಬೇಕು ಎಂದು ಖಡಕ್​ ಸೂಚನೆ ನೀಡಿದ್ದಾರೆ.

ಹಾಲಿನ ಪರಿಷ್ಕೃತ ದರ ಪಟ್ಟಿ

1. ನಂದಿನಿ( ಟೋನ್ಡ್ ಹಾಲು)

ಸದ್ಯದ ಹಾಲಿನ ದರ ಅರ್ಧ ಲೀಟರ್ ​ಗೆ 20 ಹಾಗೂ ಒಂದು ಲೀಟರ್ ​ಗೆ 39 ರೂಪಾಯಿ.

ಪರಿಷ್ಕೃತ ದರ 3 ರೂ. ಜಾಸ್ತಿ ಆದರೆ, ಅರ್ಧ ಲೀಟರ್‌ ಗೆ 23 ಹಾಗೂ ಒಂದು ಲೀಟರ್‌ ಗೆ 43 ರೂ. ಆಗಲಿದೆ.

2. ನಂದನಿ (ಡಬಲ್ ಟೋನ್ಡ್ ಹಾಲು)

* ಸದ್ಯದ ಹಾಲಿನ ದರ ಅರ್ಧ ಲೀಟರ್​ 19 ಹಾಗೂ ಒಂದು ಲೀಟರ್‌ ಗೆ 38 ರೂಪಾಯಿ.

* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್ ​ಗೆ 22 ಹಾಗೂ ಒಂದು ಲೀಟರ್‌ ಗೆ 41 ರೂಪಾಯಿ ಆಗಲಿದೆ.

3. ನಂದಿನಿ ಶುಭಂ

* ಸದ್ಯದ ದರ ಅರ್ಧ ಲೀಟರ್​ ಗೆ 23 ಹಾಗೂ ಒಂದು ಲೀಟರ್ 45 ರೂಪಾಯಿ.

* ಪರಿಷ್ಕೃತ ದರ 3 ರೂ. ಜಾಸ್ತಿಯಾದ್ರೆ ಅರ್ಧ ಲೀಟರ್ ​ಗೆ 26 ಹಾಗೂ ಒಂದು ಲೀಟರ್‌ ಗೆ 48 ರೂ. ಆಗಲಿದೆ.

4. ನಂದಿನಿ ಸ್ಪೆಷಲ್

* ಸದ್ಯದ ದರ ಅರ್ಧ ಲೀಟರ್ ​ಗೆ 23 ಹಾಗೂ ಒಂದು ಲೀಟರ್ ​ಗೆ 45 ರೂಪಾಯಿ.

* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ ಗೆ 26 ಮತ್ತು ಒಂದು ಲೀಟರ್‌ ಗೆ 48 ರೂ. ಆಗಲಿದೆ.

5. ನಂದಿನಿ ( ಸಮೃದ್ಧಿ)

* ಸದ್ಯದ ದರ ಅರ್ಧ ಲೀಟರ್ ​ಗೆ 24 ಹಾಗೂ ಒಂದು ಲೀಟರ್ ​ಗೆ 48 ರೂಪಾಯಿ.

* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್ ​ಗೆ 27 ಹಾಗೂ ಒಂದು ಲೀಟರ್‌ ಗೆ 51 ರೂಪಾಯಿ ಆಗಲಿದೆ.

6. ನಂದಿನಿ ಹಸುವಿನ ಹಾಲು

* ಸದ್ಯದ ದರ ಅರ್ಧ ಲೀಟರ್ ​ಗೆ 22 ಹಾಗೂ ಲೀಟರ್‌ ಗೆ 44 ರೂಪಾಯಿ.

* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್ ​ಗೆ 25 ಹಾಗೂ ಒಂದು ಲೀಟರ್‌ ಗೆ 54 ರೂಪಾಯಿ.