ದೇಹದ ತೂಕ ಕಡಿಮೆ ಮಾಡುವ ಮೂರು ಬಗೆಯ ಮಿಲ್ಕ್ ಶೇಕ್ ಗಳು ಇಲ್ಲಿವೆ.
ಜೇನುತುಪ್ಪ ಮತ್ತು ವಾಲ್ನಟ್ ಮಿಲ್ಕ್ ಶೇಕ್
ಸಕ್ಕರೆಗೆ ಪರ್ಯಾಯವಾಗಿ ನೀವು ಜೇನುತುಪ್ಪ ಬಳಕೆ ಮಾಡಿದರೆ ನಿಮ್ಮ ದೇಹದ ತೂಕ ಸಾಕಷ್ಟು ಕಂಟ್ರೋಲ್ ಆಗುತ್ತದೆ. ಇದರ ಜೊತೆಗೆ ವಾಲ್ನೆಟ್ ನಿಮಗೆ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳನ್ನು ಕೊಡುತ್ತದೆ ಜೊತೆಗೆ ಇದರಲ್ಲಿ ನಾರಿನ ಅಂಶ ಕೂಡ ಹೆಚ್ಚಾಗಿದೆ. ತೂಕ ಕಡಿಮೆ ಮಾಡಿಕೊಳ್ಳಲು ಇದಕ್ಕಿಂತ ಇನ್ನೇನು ಬೇಕು. ಬೇಕೆಂದರೆ ನೀವು ಇದಕ್ಕೆ ಸ್ವಲ್ಪ ಪ್ರೋಟೀನ್ ಪೌಡರ್ ಸಹ ಮಿಕ್ಸ್ ಮಾಡಿ ಕೊಳ್ಳಬಹುದು.
ಬಾಳೆಹಣ್ಣು ಮತ್ತು ಕ್ಯಾರೆಟ್ ಮಿಲ್ಕ್ ಶೇಕ್
ಇದರಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚು ಪೌಷ್ಟಿಕಾಂಶಗಳು ಇರಲಿವೆ. ಜೊತೆಗೆ ಕ್ಯಾರೆಟ್ ನಲ್ಲಿ ಹೆಚ್ಚಿನ ನಾರಿನ ಅಂಶ, ವಿಟಮಿನ್ ಮತ್ತು ಖನಿಜಾಂಶಗಳು ಇರುತ್ತವೆ.
ನೈಸರ್ಗಿಕವಾಗಿ ಇವು ಸಿಹಿ ಅಂಶವನ್ನು ಒಳಗೊಂಡಿರುತ್ತವೆ ಹಾಗಾಗಿ ಹೆಚ್ಚುವರಿಯಾಗಿ ಸಕ್ಕರೆ ಹಾಕುವ ಪ್ರಮೇಯ ಬರುವುದಿಲ್ಲ. ಇದೊಂದು ಆರೋಗ್ಯಕರವಾದ ಮಿಲ್ಕ್ ಶೇಕ್ ಎಂದು ಹೇಳಬಹುದು.
ಚಾಕಲೇಟ್ ಮಿಲ್ಕ್ ಶೇಕ್
ತೂಕ ಕಡಿಮೆ ಮಾಡಿಕೊಳ್ಳುವುದು ಚಾಕಲೇಟ್ ಸಹ ಸಹಾಯಮಾಡುತ್ತದೆ. ಆದರೆ ಇದು ತುಂಬಾ ಜನರಿಗೆ ಗೊತ್ತಿಲ್ಲ. ಸಕ್ಕರೆ ಅಂಶ ಹೆಚ್ಚಾಗಿರುವ ಚಾಕ್ಲೆಟ್ ಬಳಕೆ ಮಾಡುವುದನ್ನು ಬಿಟ್ಟು ಡಾರ್ಕ್ ಚಾಕಲೇಟ್ ಬಳಸಿದರೆ ಉತ್ತಮ. ಇದರಿಂದ ತಯಾರಾಗುವ ಮಿಲ್ಕ್ ಶೇಕ್ ನಿಮ್ಮ ತೂಕವನ್ನು ಸಾಕಷ್ಟು ನಿಯಂತ್ರಣ ಮಾಡಬಲ್ಲದು.