ಮನೆ ರಾಜ್ಯ ಹಾಲು, ಮೊಸರು ದರ ಏರಿಕೆ: ಮರುಪಾವತಿ ಪಡೆದರೆ ದರ ಹೆಚ್ಚಿಸುವ ಅಗತ್ಯವಿಲ್ಲ; ಸಿಎಂ ಬೊಮ್ಮಾಯಿ

ಹಾಲು, ಮೊಸರು ದರ ಏರಿಕೆ: ಮರುಪಾವತಿ ಪಡೆದರೆ ದರ ಹೆಚ್ಚಿಸುವ ಅಗತ್ಯವಿಲ್ಲ; ಸಿಎಂ ಬೊಮ್ಮಾಯಿ

0

ಬೆಂಗಳೂರು (Bengaluru): ಬ್ರಾಂಡೆಡ್ ಹಾಗೂ ಪ್ಯಾಕೇಜ್ಡ್ ಹಾಲು ಮೊಸರು ಮಾರುವವವರಿಗೆ ಮಾತ್ರ ಶೇ. 5 ಜಿ.ಎಸ್.ಟಿ ಹಾಕಲಾಗಿದೆ. ಇದನ್ನು ಅವರು ಕ್ಲೇಮು ಮಾಡಲು ಅವಕಾಶವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.‌
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರುಪಾವತಿ ಪಡೆದರೆ ಅವರು ಇದನ್ನು ವಾಪಸ್ಸು ಪಡೆಯಬಹುದು. ಈಗಿನ ದರಕ್ಕಿಂತ ಹೆಚ್ಚಾಗಲು ಸಾಧ್ಯವಿಲ್ಲ. ಹೆಚ್ಚಳ ಮಾಡುವ ಅವಶ್ಯಕತೆ ಇಲ್ಲ. ಇದರ ಬಗ್ಗೆ ಮುಂಬರುವ ದಿನಗಳಲ್ಲಿ ಗಮನಹರಿಸಲಾಗುವುದು. ಗ್ರಾಹಕರಿಗೆ ಅದನ್ನು ದಾಟಿಸಬಾರದು. ಇದನ್ನು ಜಿ.ಎಸ್.ಟಿ ಮಂಡಳಿಯಲ್ಲಿ ಚರ್ಚಿಸಿ, ಸೂಚನೆ ನೀಡಲಾಗುವುದು ಎಂದರು.