ಮನೆ ಅಪರಾಧ ಕಮಿಷನ್ ಆಸೆ ತೋರಿಸಿ ಇಬ್ಬರಿಗೆ ಆನ್ ಲೈನ್ ಮೂಲಕ ಲಕ್ಷಾಂತರ ರೂ. ವಂಚನೆ         

ಕಮಿಷನ್ ಆಸೆ ತೋರಿಸಿ ಇಬ್ಬರಿಗೆ ಆನ್ ಲೈನ್ ಮೂಲಕ ಲಕ್ಷಾಂತರ ರೂ. ವಂಚನೆ         

0

ಮೈಸೂರು: ಹೋಟೆಲ್ ಗಳಿಗೆ ರೇಟಿಂಗ್ ನೀಡಿದರೆ ದೊಡ್ಡ ಮೊತ್ತದ ಕಮಿಷನ್ ಪಡೆಯಬಹುದು ಎಂದು ನಂಬಿಸಿ ಮೈಸೂರಿನ ಇಬ್ಬರಿಗೆ ಆನ್ಲೈನ್ ಮೂಲಕ ಲಕ್ಷಾಂತರ ವಂಚಿಸಲಾಗಿದೆ.

ಮೈಸೂರಿನ ಅಶೋಕ ರಸ್ತೆಯ ನಿವಾಸಿ ನಯೀಂ ಅಹಮದ್ (37) ಎಂಬವರ ವಾಟ್ಸಪ್ ಗೆ ಪಾರ್ಟ್ ಟೈಮ್ ಜಾಬ್ ಬಗ್ಗೆ ಆಸಕ್ತಿಇದೆಯೇ?  ಎಂದು ಅಪರಿಚಿತರ ಸಂಖ್ಯೆಯಿಂದ ಮೆಸೇಜ್ ರವಾನೆಯಾಗಿದೆ.

ಮೆಸೇಜ್ ಗೆ  ಅವರು ಸಕಾರಾತ್ಮಕವಾಗಿ ಸ್ಪಂದಿಸಿದಾಗ ಅವರು ಟೆಲಿಗ್ರಾಂ ಗ್ರೂಪ್ಗೆ ಸೇರಿಸಿ ಕ್ಲೈಂಟ್ ಐಡಿಯನ್ನು ಕ್ರಿಯೇಟ್ ಮಾಡಿ ಕೊಟ್ಟು, ಹೋಟೆಲ್ ಗಳಿಗೆ ರೇಟಿಂಗ್ ನೀಡಿದರೆ ಸಾಕು, ದೊಡ್ಡಮಟ್ಟದ ಕಮಿಷನ್ ಸಿಗುತ್ತದೆ ಎಂದು ನಂಬಿಸಲಾಗಿದೆ. ಅವರು ಮಾಡಿದ ಮೊದಲ ರೇಟಿಂಗ್ 150 ರೂ. ಕಮಿಷನ್ ಅವರ ಖಾತೆಗೆ ಜಮೆ ಮಾಡಲಾಗಿದೆ. ನಂತರ ಹಂತ ಹಂತವಾಗಿ 2,53,750 ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಉದಯ್ ಗಿರಿ ನಿವಾಸಿ ಅಬ್ದುಲ್ ಷರೀಫ್ (40) ಎಂಬುವವರಿಗೂ ಕೂಡ ಪಾರ್ಟ್ ಟೈಮ್ ಜಾಬ್ ಬಗ್ಗೆ ವಾಟ್ಸಪ್ ಮೆಸೇಜ್ ರವಾನಿಸಿದ್ದು, ಅವರನ್ನು ಟೆಲಿಗ್ರಾಂಗೆ ಸೇರಿಸಿ ಹೋಟೇಲ್ ಗಳಿಗೆ 5 ಸ್ಟಾರ್ ರೇಡಿಂಗ್ ನೀಡಿದರೆ ಕಮಿಷನ್ ಬರಿತ್ತದೆ ಎಂದು ನಂಬಿಸಿ, ಮೊದಲಿಗೆ ಅವರ ಖಾತೆಗೆ 50 ರೂ. ಜಮೆ ಮಾಡಲಾಗಿದೆ. ನಂತರ ಅವರು ಒಮ್ಮೆ ಸಾವಿರ ರೂ…, ಮತ್ತೊಮ್ಮೆ 3000 ವರ್ಗಾಯಿಸಿ ರೇಟಿಂಗ್ ಮಾಡಿದ ಅವರು ಕಮಿಷನ್ ನೀಡಲಾಗಿದೆ. ಹಂತ ಹಂತವಾಗಿ 1.71 ಲಕ್ಷ ರೂಗಳನ್ನು ಅವರು ವರ್ಗಾವಣೆ ಮಾಡಿದ್ದು, ತನ್ನ ಹಣ ಹಾಗೂ ಕಮಿಷನ್ ನೀಡುವಂತೆ ಕೇಳಿದಾಗ ಮತ್ತೆ 6.30 ಲಕ್ಷ ರೂ. ವರ್ಗಾವಣೆ ಮಾಡಿದಾಗ ಮಾತ್ರ ನಿಮ್ಮ ಹಣ ಹಿಂದಿರುಗಿಸಲಾಗುತ್ತದೆ ಎಂದು ಹೇಳುವ ಮೂಲಕ ವಂಚಿಸಲಾಗಿದೆ.

 ಈ ಎರಡೂ ಪ್ರಕರಣಗಳ ಮೈಸೂರು ನಗರ ಸೆನ್ ಠಾಣೆಯಲ್ಲಿ ದಾಖಲಾಗಿದೆ.

ಹಿಂದಿನ ಲೇಖನಅಕ್ರಮ ವಿದ್ಯುತ್ ಸಂಪರ್ಕ: ದಂಡ ಪಾವತಿಸಿದ ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಸುಂಟಿಕೊಪ್ಪದಲ್ಲಿ ಸರಣಿ ಕಳವು: ದೂರು ದಾಖಲು