ಕಲಬುರಗಿ: ವಿದೇಶಕ್ಕೆ ತೆರಳಲು ವೀಸಾ ಮಾಡಿಸಿಕೊಟ್ಟು ಅಲ್ಲಿಯೇ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪದಲ್ಲಿ ಆಳಂದ ಪಟ್ಟಣದ ಇರ್ಫಾನ್ ಮೌಲಸಾಬ್, ಆಸಿಫ್ ಜಿಲಾನಿ ಮತ್ತು ಗಣೇಶ ಹುಮನಾಬಾದ್ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇರ್ಫಾನ್ ಉದ್ಯೋಗ ಆಕಾಂಕ್ಷಿಗಳನ್ನು ವಿದೇಶಕ್ಕೆ ಕಳುಹಿಸುವ ಏಜೆಂಟ್ ಎಂದು ಆಸಿಫ್ ಎಂಬಾತ ರಾಜಶೇಖರ ಕಾಶಿರಾಯ, ಅಶೋಕ ಚಿಂಚನಸೂರ ಸೇರಿದಂತೆ 15 ಮಂದಿ ಉದ್ಯೋಗ ಆಕಾಂಕ್ಷಿಗಳಿಗೆ ಪರಿಚಯಿಸಿದ್ದ. ಸಂತ್ರಸ್ತರಲ್ಲಿ ವಿದೇಶಕ್ಕೆ ಕಳುಹಿಸುವ ಆಸೆ ಹುಟ್ಟಿಸಿದ್ದ ಇರ್ಫಾನ್, ಪ್ರತಿಯೊಬ್ಬರಿಗೆ ₹ 1 ಲಕ್ಷ ಖರ್ಚಾಗುತ್ತದೆ ಎಂದಿದ್ದ.
ಬಳಿಕ ಅವರೆಲ್ಲರಿಂದ ಮುಂಗಡವಾಗಿ ₹ 11.20 ಲಕ್ಷ ಪಡೆದು, ವೀಸಾ ಮಾಡಿಸಿಕೊಡದೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Saval TV on YouTube