ಮನೆ ಸ್ಥಳೀಯ ಅರಮನೆ, ಮೃಗಾಲಯಕ್ಕೆ ಲಕ್ಷಾಂತರ ಪ್ರವಾಸಿಗರ ಭೇಟಿ: ಆದಾಯ ಹೆಚ್ಚಳ

ಅರಮನೆ, ಮೃಗಾಲಯಕ್ಕೆ ಲಕ್ಷಾಂತರ ಪ್ರವಾಸಿಗರ ಭೇಟಿ: ಆದಾಯ ಹೆಚ್ಚಳ

0

ಮೈಸೂರು: ದಸರಾ ಮಹೋತ್ಸವ ಹಾಗೂ ಜಂಬೂಸವಾರಿ ಮೆರವಣಿಗೆ ನೋಡಲು ಮೈಸೂರಿಗೆ ಆಗಮಿಸಿದ ಪ್ರವಾಸಿಗರು, ಪ್ರವಾಸಿ ತಾಣಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟಿದ್ದು, ಅರಮನೆ ಹಾಗೂ ಮೃಗಾಲಯದ ಆದಾಯದಲ್ಲಿ ಏರಿಕೆ ಕಂಡಿದೆ.

ಅರಮನೆಗೆ ಅ.೯ ರಿಂದ ಅ.೨೩ರವರೆಗೆ ಒಟ್ಟು ೧೫ ದಿನಗಳಲ್ಲಿ ೧,೬೭,೦೬೫ ಜನರು ಭೇಟಿ ಕೊಟ್ಟಿದ್ದಾರೆ.

ಅ.೯ ರಿಂದ ಅ.೨೩ರವರೆಗೆ ಅರಮನೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೀಗಿದೆ. ಅ.೯ರಂದು ೫,೨೨೯ ಮಂದಿ (ಮಧ್ಯಾಹ್ನ ೨ರಿಂದ ಸಂಜೆ ೫.೩೦ರವರಗೆ), ಅ.೧೦ ರಂದು ೬,೭೧೪, ಅ.೧೧ರಂದು ೫,೯೬೦, ಅ.೧೨ರಂದು ೭,೬೭೫, ಅ.೧೩ ರಂದು ೯,೨೫೩, ಅ.೧೪ರಂದು ೧೫,೪೮೫, ಅ.೧೫ರಂದು ೧೨,೫೧೩ (ಮಧ್ಯಾಹ್ನ ೨ರಿಂದ ಸಂಜೆ ೫.೩೦ರವರೆಗೆ), ಅ.೧೬ರಂದು ೯,೯೫೮, ಅ.೧೭ರಂದು ೧೦,೩೭೬, ಅ.೧೮ರಂದು ೧೦,೬೨೨, ಅ.೧೯ರಂದು ೧೦,೬೯೯, ಅ.೨೦ರಂದು ೧೨,೩೪೫, ಅ.೨೧ರಂದು ೧೭,೮೬೩, ಅ.೨೨ರಂದು ೨೧,೫೬೦, ಅ.೨೩ರಂದು ೧೦,೮೧೩ (ಮಧ್ಯಾಹ್ನ ೨ರಿಂದ ಸಂಜೆ ೫.೩೦ರವರೆಗೆ) ಸೇರಿದಂತೆ ಒಟ್ಟಾರೆ ೧,೬೭,೦೬೫ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ.

ಮೈಸೂರು ಮೃಗಾಲಯಕ್ಕೂ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ದಸರಾ ಮಹೋತ್ಸವ ಉದ್ಘಾಟನೆಯ ಅ.೧೫ರಿಂದ ೨೪ರವರೆಗೆ ೧,೬೫,೦೦೩ ಮಂದಿ ಬಂದು ಹೋಗಿದ್ದಾರೆ.

ಅ.೧೫ರಿಂದ ೨೪ರವರೆಗೆ ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಇಂತಿದೆ.

ಅ.೧೫ರಂದು ೧೬,೬೦೦, ಅ.೧೬ರಂದು ೧೦,೧೪೫, ಅ.೧೭ರಂದು ೮,೫೯೯, ಅ.೧೮ರಂದು ೧೦,೬೦೩, ಅ.೧೯ರಂದು ೧೧,೦೯೮, ಅ.೨೦ರಂದು ೧೧,೨೮೦, ಅ.೨೧ರಂದು ೧೬,೮೭೫, ಅ.೨೨ರಂದು ೨೫,೧೮೦, ಅ.೨೩ರಂದು ೨೮,೨೮೭, ಅ.೨೪ರಂದು ೨೩,೮೯೦ ಅಲ್ಲದೇ, ೨,೪೨೬ ಇತರೆ ಪ್ರವಾಸಿಗರು ಸೇರಿದಂತೆ ಒಟ್ಟಾರೆ ೧,೬೫,೦೦೩ ಮಂದಿ ಆಗಮಿಸಿದ್ದಾರೆ.

ಚಾಮುಂಡೇಶ್ವರಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯ, ನಂಜನಗೂಡಿನ ಶ್ರೀನಂಜುಂಡೇಶ್ವರ ದೇವಾಲಯ ಸೇರಿದಂತೆ ಮೈಸೂರಿನ ಹಲವು ದೇವಾಲಯಗಳು ಹಾಗೂ ಪ್ರವಾಸಿತಾಣಗಳಿಗೆ ಪ್ರವಾಸಿಗರು ಆಗಮಿಸಿದ್ದು, ಆದಾಯ ಹೆಚ್ಚಳವಾಗಿದೆ.