ಮನೆ ರಾಷ್ಟ್ರೀಯ ಸಂಸತ್ ​ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ವರದಿ ಮಂಡನೆ

ಸಂಸತ್ ​ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ವರದಿ ಮಂಡನೆ

0

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸೋಮವಾರ ಸಂಸತ್​ನಲ್ಲಿ 2023-24ರ ಸಾಲಿನ ಆರ್ಥಿಕ ಸಮೀಕ್ಷೆ ವರದಿ ಪ್ರಸ್ತುತಪಡಿಸಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಲೋಕಸಭೆಯಲ್ಲಿ, ಮತ್ತು 2 ಗಂಟೆಗೆ ರಾಜ್ಯಸಭೆಯಲ್ಲಿ ಈ ವರದಿಯನ್ನು ಮಂಡನೆ ಮಾಡಲಿದ್ದಾರೆ. ನಾಳೆ ಮಂಗಳವಾರ (ಜುಲೈ 23) ಕೇಂದ್ರ ಬಜೆಟ್ ಮಂಡನೆ ಆಗಲಿದೆ. ಬಜೆಟ್ ಮಂಡನೆಗೆ ಒಂದು ದಿನ ಆರ್ಥಿಕ ಸಮೀಕ್ಷೆ ವರದಿಯನ್ನು ಪ್ರಸ್ತುತಪಡಿಸಲಾಗುತ್ತದೆ. ಇದು ಬಜೆಟ್​ನ ಪೂರ್ವಭಾವಿ ಆರ್ಥಿಕ ಅವಲೋಕನದ ದಾಖಲೆಯಾಗಿರುತ್ತದೆ. ದೇಶದ ಒಟ್ಟಾರೆ ಆರ್ಥಿಕ ಚಿತ್ರಣ ಹೇಗಿದೆ ಎಂಬುದನ್ನು ಈ ಸಮೀಕ್ಷೆ ಸುಳಿವು ನೀಡುತ್ತದೆ.

Join Our Whatsapp Group

2024-24ರಲ್ಲಿ ಜಿಡಿಪಿ ದರ ಶೇ. 6.5ರಿಂದ 7: ಸಮೀಕ್ಷೆ ಅಂದಾಜು

ಸಿಇಒ ವಿ ಅನಂತ ನಾಗೇಶ್ವರನ್ ನೇತೃತ್ವದಲ್ಲಿ ತಯಾರಾಗಿರುವ ಆರ್ಥಿಕ ಸಮೀಕ್ಷೆಯು 2024-25ರ ಭಾರತದ ಜಿಡಿಪಿ ಶೇ. 6.5ರಿಂದ 7ರಷ್ಟು ವೃದ್ಧಿಸಬಹುದು ಎಂದು ಅಂದಾಜಿಸಿದೆ. ಜಾಗತಿಕ ರಾಜಕೀಯ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ಉತ್ತಮವಾಗಿದೆ. ಕೋವಿಡ್​ನಿಂದ ಬಿದ್ದಿದ್ದ ಆರ್ಥಿಕತೆ ಈಗ ಬಹಳಷ್ಟು ಚೇತರಿಸಿಕೊಂಡಿದೆ. ಹಣಕಾಸು ಸ್ಥಿರತೆ ಸ್ಥಾಪನೆಯಾಗಿದೆ ಎಂದು ಹೇಳಿರುವ ಈ ಸಮೀಕ್ಷೆಯು, ಸದ್ಯ ಎದುರಾಗಿರುವ ಸವಾಲುಗಳ ಬಗ್ಗೆಯೂ ಬೆಳಕು ಚೆಲ್ಲಿದೆ.

ವ್ಯಾಪಾರ, ಹೂಡಿಕೆ, ಹವಾಮಾನ ಮೊದಲಾದ ಪ್ರಮುಖ ಜಾಗತಿಕ ಸಮಸ್ಯೆಗಳ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಮತಕ್ಕೆ ಬರಲು ಬಹಳ ಕಷ್ಟಕರವಾಗಿದೆ. ಹೀಗಾಗಿ, ಆಂತರಿಕವಾಗಿ ಆರ್ಥಿಕ ಬೆಳವಣಿಗೆಗೆ ಪೂರಕವಾದ ಅಂಶಗಳತ್ತ ಹೆಚ್ಚು ಗಮನ ಕೊಡಬೇಕಾಗುತ್ತದೆ ಎಂಬ ಸಂಗತಿಯನ್ನು ಆರ್ಥಿಕ ಸಮೀಕ್ಷೆ ಎತ್ತಿತೋರಿಸಿದೆ.

ಆರ್ಥಿಕ ಸಮೀಕ್ಷೆಯ ವರದಿ ಪ್ರಸ್ತುತಪಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಸುಲಭ ವ್ಯಾಪಾರಕ್ಕೆ ಅನುವಾಗಲು ಬಹಳಷ್ಟು ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ್ಧಾರೆ. ‘63 ಕೃತ್ಯಗಳನ್ನು ಅಪರಾಧ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದಾಗಿ ಕಂಪನಿಗಳು ಹೆಚ್ಚು ಕಾನೂನು ಚಿಂತೆ ಇಲ್ಲದೇ ತಮ್ಮ ಉದ್ಯಮದ ಮೇಲೆ ಗಮನ ಕೊಡಲು ಸಾಧ್ಯವಾಗುತ್ತದೆ. ಸೆಂಟ್ರಲ್ ಪ್ರೋಸಸಿಂಗ್ ಸಿಸ್ಟಂ ಅನ್ನೂ ಸ್ಥಾಪಿಸಲಾಗಿದೆ,’ ಎಂದು ಸಚಿವೆ ವಿವರಿಸಿದ್ದಾರೆ.