ಮನೆ ರಾಜ್ಯ ಸ್ಪೇನ್ ನ ʻಫಿಮಾ ಅಗ್ರಿಕೋಲʼ ಮೇಳಕ್ಕೆ ತೆರಳಿದ ಸಚಿವ ಎಸ್.ಟಿ.ಸೋಮಶೇಖರ್‌

ಸ್ಪೇನ್ ನ ʻಫಿಮಾ ಅಗ್ರಿಕೋಲʼ ಮೇಳಕ್ಕೆ ತೆರಳಿದ ಸಚಿವ ಎಸ್.ಟಿ.ಸೋಮಶೇಖರ್‌

0

ಮೈಸೂರು/ಬೆಂಗಳೂರು (Mysuru/Bengaluru)-ಸ್ಪೇನ್‌ನ ಫೆರಿಯಾ ಡೆ ಝರಗೋಜ಼ದಲ್ಲಿ ನಡೆಯಲಿರುವ 42ನೇ ದ್ವೈ ವಾರ್ಷಿಕ “ಫಿಮಾ ಅಗ್ರಿಕೋಲ-2022” (Fima Agricola-2022) ಅಂತಾರಾಷ್ಟ್ರೀಯ ಕೃಷಿ ವಸ್ತು ಪ್ರದರ್ಶನ ಮೇಳಕ್ಕೆ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ (Minister) ಎಸ್.ಟಿ.ಸೋಮಶೇಖರ್ (S.T.Somashekar) ಅವರು ಇಂದು ಪ್ರಯಾಣ ಬೆಳೆಸಿದರು.

ಕೃಷಿ ಉತ್ಪನ್ನ ಹಾಗೂ ಕೃಷಿ ಯಂತ್ರೋಪಕರಣಗಳ ಈ ವಸ್ತು ಪ್ರದರ್ಶನ ಏ.26 ರಿಂದ 30ರವರೆಗೆ ನಡೆಯಲಿದೆ.  ಸುಮಾರು 80 ದೇಶಗಳಿಂದ 1600 ಕ್ಕೂ ಹೆಚ್ಚು ಪ್ರದರ್ಶಕರು, 2.30 ಲಕ್ಷಕ್ಕೂ ಹೆಚ್ಚು ವೀಕ್ಷಕರು ಭಾಗವಹಿಸುತ್ತಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಕೃಷಿ ಪವರ್ ಯೂನಿಟ್‌ಗಳು, ಬಿತ್ತನೇ ಯಂತ್ರೋಪಕರಣಗಳು, ನಾಟಿ-ಕಟಾವು ತಂತ್ರಜ್ಞಾನ, ನೀರಾವರಿ ವ್ಯವಸ್ಥೆ, ಹಸಿರುಮನೆ, ಗಾರ್ಡನ್ ಉಪಕರಣಗಳು, ಲಾಜಿಸ್ಟಿಕ್ ಸರ್ವೀಸ್ ಇನ್ನೂ ಅನೇಕ‌ ಕೃಷಿ ಸಂಬಂಧಿತ ವಿಷಯಗಳು ಈ ವಸ್ತು ಪ್ರದರ್ಶನದಲ್ಲಿ ಇವೆ. ಕೃಷಿ ಉತ್ಪನ್ನ ಹೆಚ್ಚಳ ಹಾಗೂ ಪರಿಸರ ಸಂರಕ್ಷಣೆಗೆ ವಿನೂತನ ಪರಿಹಾರಗಳನ್ನೂ ಈ ಪ್ರದರ್ಶನದಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.