ಮನೆ ರಾಜ್ಯ ಕಿದ್ವಾಯಿ-ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯರು-ಸಿಬ್ಬಂದಿಗಳಿಗೆ ಚಳಿ ಬಿಡಿಸಿದ ಸಚಿವ ಶರಣಪ್ರಕಾಶ್ ಪಾಟೀಲ್

ಕಿದ್ವಾಯಿ-ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯರು-ಸಿಬ್ಬಂದಿಗಳಿಗೆ ಚಳಿ ಬಿಡಿಸಿದ ಸಚಿವ ಶರಣಪ್ರಕಾಶ್ ಪಾಟೀಲ್

ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ

0

ಬೆಂಗಳೂರು: ಸಮಸ್ಯೆಗಳ ಆಗರವಾಗಿದ್ದ ನಗರದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಮತ್ತುಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಬುಧವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಅನಿರೀಕ್ಷಿತ ಭೇಟಿ ನೀಡಿ ವೈದ್ಯರ ಕಾರ್ಯವೈಖರಿಗೆ ಕೆಂಡಮಂಡಲರಾದರು.

Join Our Whatsapp Group

ಮೊದಲು ಕಿದ್ವಾಯಿ ಆಸ್ಪತ್ರೆಗೆ ಭೇಟಿ ಕೊಟ್ಟ ಅವರು ಫಾಸ್ಟ ಟ್ರಾಕ್ (fast track) ವಾರ್ಡ್‍ನಲ್ಲಿ ಪರಿಶೀಲನೆ ನಡೆಸಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.

ವಸತಿ ಸೌಲಭ್ಯ ಹೇಗಿದೆ? ಯಾವೆಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದೀರಿ? ಎಷ್ಟು ರೋಗಿಗಳು ಇಲ್ಲಿ ದಾಖಲಾಗುತ್ತಿವೆ ಎಂದು ಕಿದ್ವಾಯಿ ಆಸ್ಪತ್ರೆಯ ಆಡಳಿತಾಧಿಕಾರಿ ಮಂಜುಶ್ರೀ ಹಾಗೂ ನಿರ್ದೇಶಕರಾದ ಡಾ. ಲೋಕೇಶ್ ಅವರನ್ನು ಪ್ರಶ್ನೆ ಮಾಡಿದರು.

ರೋಗಿಗಳಿಗೆ ಚಿಕಿತ್ಸೆ ಕೊಡಲು ಎಷ್ಟು ದಿನ ಬೇಕು? ಕ್ಯಾನ್ಸರ್ ಪತ್ತೆಗೆ ಎಷ್ಟು ದಿನ ತೆಗೆದುಕೊಳ್ಳುತ್ತದೆ? ಚಿಕಿತ್ಸೆ, ಅಂತಿಮ ಚಿಕಿತ್ಸೆ ನೀಡಲು ಎಷ್ಟು ದಿನ ತೆಗೆದುಕೊಳ್ಳುತ್ತೀದ್ದೀರಿ? ಕ್ಯಾನ್ಸರ್ ಪತ್ತೆ ಬಳಿಕಯಾದ ಬಳಿಕ ರೋಗಿಯನ್ನು ಎಷ್ಟು ದಿನದ ನಂತರ ದಾಖಲು ಮಾಡಿಕೊಳ್ಳುತ್ತಿದ್ದೀರಿ? ಯಾವ ಸಮಯದಲ್ಲಿ ಗರಿಷ್ಠ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ರಾಜ್ಯದ ತುಮಕೂರು, ಶಿವಮೊಗ್ಗ, ಮಂಡ್ಯ ಹಾಗೂ ಕಾರವಾರದಲ್ಲಿ ಕಿದ್ವಾಯಿ   ಮಾದರಿಯ ಆಸ್ಪತ್ರೆಯನ್ನು ತೆರೆಯುವ ಆಲೋಚನೆ ಇದೆ ಎಂದು ಹೇಳಿದರು. ರಾಜಧಾನಿ ಬೆಂಗಳೂರಿಗೆ ರಾಜ್ಯದ ನಾನಾಗ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುವುದರಿಂದ ಸಕಾಲದಲ್ಲಿ ಎಲ್ಲರಿಗೂ ಉತ್ತಮವಾದ ಚಿಕಿತ್ಸೆ ನೀಡಲು ಕಷ್ಟಕರವಾಗುತ್ತದೆ. ಇದನ್ನು ತಪ್ಪಿಸಲು ತುಮಕೂರು, ಶಿವಮೊಗ್ಗ, ಮಂಡ್ಯ ಹಾಗೂ ಕಾರವಾರದಲ್ಲಿ ಕಿದ್ವಾಯಿ ಮಾದರಿಯ ಆಸ್ಪತ್ರೆಯನ್ನು ತೆರೆಯುವ ಚಿಂತನೆ ಇದೆ ಎಂದರು.

ಇದೇ ರೀತಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯನ್ನು ಕಲಬುರಗಿಯಲ್ಲಿ ಪ್ರಾರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಪಾಟೀಲ್ ಹೇಳಿದರು.

ಆಸ್ಪತ್ರೆಯಲ್ಲಿ ಯಾವ ಯಾವ ಸಮಸ್ಯೆಗಳು ಇವೆ ಎಂಬುದನ್ನು ಖುದ್ದು ಅರಿಯಲು ನಾನೇ ಆಸ್ಪತ್ರೆಗೆ ಭೇಟಿ ನೀಡಿದ್ದೇನು. ಇಲ್ಲಿ ಕೆಲವು ಸಮಸ್ಯೆಗಳು ಇರುವುದು ನನ್ನ ಗಮನಕ್ಕೆ ಬಂದಿದೆ. ಕಾಲ ಮಿತಿಯೊಳಗೆ ಹಂತಹಂತವಾಗಿ ಪರಿಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಕೆಲವು ಸಮಸ್ಯೆಗಳ ನಡುವೆಯೂ ಆಸ್ಪತ್ರೆಯಲ್ಲಿ ಹಲವು ಅಭಿವೃದ್ಧಿಗಳು ನಡೆದಿದೆ. ಹಿಂದೆ ವೇಟಿಂಗ್‌ ಪಿರಿಯಡ್ ಇತ್ತು, ಆದರೆ ಈಗ ಇಲ್ಲ. ಪರಿಹಾರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಿದ್ವಾಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ಒಂದು ತಿಂಗಳಾದರೂ ಚಿಕಿತ್ಸೆ ನೀಡದಿರುವುದನ್ನು ಕಂಡು ವೈದ್ಯರ ವಿರುದ್ಧ ಕೋಪಗೊಂಡರು. ದಾಖಲಾಗಿ ಒಂದು ತಿಂಗಳಾದರೂ ಏಕೆ ಸರ್ಜರಿ ಮಾಡಿಲ್ಲ?  ತಡ ಮಾಡುತ್ತಿರುವ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿ ಕೊಡಲೇ ಸಮಸ್ಯೆನ್ನು ಬಗೆಹರಿಸಿ ಎಂದು ನಿರ್ದೇಶನ ನೀಡಿದರು

ಮಾನವೀಯತೆ ಮೆರೆದ ಸಚಿವರು:

ವಿಕಲಚೇತನ ರೋಗಿ ರಮೇಶ್ ಎಂಬುವರು ರೂ. 75,000 ಕೊಟ್ಟು ಔಷಧಿಗಳನ್ನು ಖರೀದಿಸಲು ತಮ ಬಳಿ ಅಷ್ಟು ದೊಡ್ಡ ಮೊತ್ತದ ಹಣವಿಲ್ಲ ಎಂದು ಅಳಲು ತೋಡಿಕೊಂಡಾಗ, ಕೂಡಲೇ ಅವರಿಗೆ ಉಚಿತವಾಗಿ ಔಷಧಿ ನೀಡುವಂತೆ ಸಚಿವ ಪಾಟೀಲ್ ವೈದ್ಯರಿಗೆ ತಾಕೀತು ಮಾಡಿದರು.