ರಾಮನಗರ: ಬಾಲ ಮಂದಿರದಿಂದ ಮೂರು ಬಾಲಕರು ನಾಪತ್ತೆಯಾಗಿರುವ ಪ್ರಕರಣ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮುಖ ತೊಳೆಯುವ ನೆಪದಲ್ಲಿ ಸರ್ಕಾರಿ ಬಾಲ ಮಂದಿರದಿಂದ ಅಪ್ರಾಪ್ತರು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಕಳೆದ ಮೂರು ದಿನಗಳಿಂದ ಸಿಬ್ಬಂದಿಗಳು ಮಕ್ಕಳನ್ನು ಹುಡುಕುತ್ತಿದ್ದರು ಎನ್ನಲಾಗಿದೆ. ಬಾಲಕರು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ 14ರಂದು ರಾಮನಗರ ಬಾಲ ಮಂದಿರದಿಂದ ಚನ್ನಪಟ್ಟಣ ತಾಲೂಕಿಗೆ ಬಾಲಕರು ವರ್ಗಾಗೊಂಡಿದ್ದರು. ಮೂರು ಪಾಳಿಯಲ್ಲಿ ಬಾಲಕರನ್ನು ಸಿಬ್ಬಂದಿ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ನಾಪತ್ತೆಯಾಗಿರುವ ಬಾಲಕರು 16, 13, 11 ವರ್ಷದವರು ಎನ್ನಲಾಗಿದೆ. ಸಿಬ್ಬಂದಿ ಸಿದ್ದರಾಜು ನೋಡಿಕೊಳ್ಳುತ್ತಿದ್ದ ಸಮಯದಲ್ಲಿ ಬಾಲಕರು ನಾಪತ್ತೆಯಾಗಿದ್ದು, ಇದೀಗ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.