ಮನೆ ಸುದ್ದಿ ಜಾಲ ಅಪ್ರಾಪ್ತೆಗೆ ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿ ಗ್ಯಾಂಗ್‌ ರೇಪ್‌..!

ಅಪ್ರಾಪ್ತೆಗೆ ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿ ಗ್ಯಾಂಗ್‌ ರೇಪ್‌..!

0

ನವದೆಹಲಿ : ಅಪ್ರಾಪ್ತ ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದೆಹಲಿ ಹೊರವಲಯದ ಸಮಯಪುರ್‌ ಬದ್ಲಿ ಬಳಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೃತ್ಯ ಎಸಗಿದ ನರೋತ್ತಮ್‌ ಅಲಿಯಾಸ್‌ ನೇತಾ (28) ಮತ್ತು ರಿಷಭ್‌ ಝಾ (26) ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ನರೋತ್ತಮ್‌ ಎಂಬಾತ ರಾಜ ವಿಹಾರ್‌ನಲ್ಲಿರುವ ತನ್ನ ಮನೆಯ ಬಳಿ ಕ್ಷೌರಿಕನ ಅಂಗಡಿ ನಡೆಸುತ್ತಿದ್ದ. ಈತ ಹುಡುಗಿ ಮತ್ತು ಆಕೆಯ ಕುಟುಂಬಸ್ಥರಿಗೆ ಪರಿಚಿತನಾಗಿದ್ದ. ರಿಷಭ್‌ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.

ಬಾಲಕಿಯ ಹೇಳಿಕೆ ಮತ್ತು ಆಕೆಯ ವೈದ್ಯಕೀಯ ಪರೀಕ್ಷಾ ವರದಿಯ ಆಧಾರದ ಮೇಲೆ ಆರೋಪಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್ 70 (ಸಾಮೂಹಿಕ ಅತ್ಯಾಚಾರ) ಮತ್ತು ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೇ ದಿನ ಇಬ್ಬರನ್ನೂ ಬಂಧಿಸಲಾಗಿದೆ.

ಅಪ್ರಾಪ್ತೆಯನ್ನು ನರೋತ್ತಮ್‌ ಮನೆಗೆ ಕರೆತಂದು ಆಕೆಗೆ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ವಿಚಾರ ತಿಳಿದು ಸಂತ್ರಸ್ತೆಯ ಕುಟುಂಬವು ಪೊಲೀಸರಿಗೆ ಕರೆ ಮಾಹಿತಿ ನೀಡಿದ್ದರು. ನಂತರ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ, 18 ವರ್ಷದ ಹುಡುಗಿ, ಸುಲ್ತಾನಪುರಿ ಪೊಲೀಸ್ ಠಾಣೆಯಲ್ಲಿ 21 ವರ್ಷದ ಯುವಕನೊಬ್ಬ ಮದುವೆಯಾಗುವುದಾಗಿ ಭರವಸೆ ನೀಡಿ ಕಳೆದ ಮೂರು ವರ್ಷಗಳಲ್ಲಿ ಹಲವಾರು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾಳೆ.

ಆರೋಪಿಯು ಆಟೋ ಚಾಲಕನಾಗಿದ್ದ. ಈತ ಮತ್ತೊಬ್ಬಳನ್ನು ಮದುವೆಯಾಗಿರುವ ವಿಚಾರ ತಿಳಿದು ಯುವತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ತಾನು ಅಪ್ರಾಪ್ತೆಯಾಗಿದ್ದಾಗ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ದೂರಿದ್ದಾರೆ. ದೂರನ್ನು ಆಧರಿಸಿ ಪೊಲೀಸರು ಪೋಕ್ಸೊ ಕೇಸ್‌ ದಾಖಲಿಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.