ಪುದೀನವು ಆಹಾರದಲ್ಲಿ ಚಟ್ನಿಯ ರೂಪದಲ್ಲಿ, ಚಟ್ನಿ ಮತ್ತಿತರ ಖಾದ್ಯ ಪದಾರ್ಥಗಳಲ್ಲಿ ಹೇರಳವಾಗಿ ಉಪಯೋಗಿಸಲಾಗುತ್ತದೆ. ಇದರ ಎಲೆಗಳು ಸುವಾಸಿತ ಮತ್ತು ಸ್ವಾದೊಷ್ಟಯಿರುತ್ತದೆ. ಇದನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಬೆಳೆದು ಉಪಯೋಗಿಸಲಾಗುತ್ತದೆ. ಆಯುರ್ವೇದದ ಅಭಿಪ್ರಾಯದಂತೆ ಇದು ಹಗುರ, ಕಟು, ವಾಂತಿ ನಿವಾರಕ, ತೀಕ್ಷ್ಣ, ರೇಚಕ, ಪಾಚಕ, ಕಫ, ವಾತ, ಹೃದಯ ಉತ್ತೇಜಕ, ಗರ್ಭಾಶಯ ಸಂಕೋಚಕ ಮತ್ತು ತ್ಚಚಾ ರೋಗ ನಿವಾರಕವಾಗಿದೆ.
ಔಷಧೀಯ ಗುಣಗಳು :-
* ಬಿಕ್ಕಳಿಕೆ – ಬಿಕ್ಕಳಿಕೆ ಸಮಸ್ಯೆಯಿದ್ದವರು ಇದನ್ನು ಸೇವಿಸಿದರೆ ಅದರಿಂದ ಲಾಭಪಡೆಯಬಹುದು. ಅವರ ಬಿಕ್ಕಳಿಕೆಯು ನಿಂತು ಹೋಗುತ್ತದೆ.
* ವಾಂತಿ-ಭೇದಿ – ಉಳ್ಳಾಗಡ್ಡೆಯ ರಸ, ಪುದೀನಾ ರಸ ಬೆರೆಸಿ ರೋಗಿಗೆ ಕುಡಿಸಿದರೆ ವಾಂತಿಭೇದಿಯು ನಿಲ್ಲುತ್ತದೆ.
* ತಲೆಯ ಹೇನು – ಪುದೀನಾ ಸತ್ವ ನೀರಿನಲ್ಲಿ ಬೆರೆಸಿ ಹಚ್ಚಿ ತಿಕ್ಕಿದರೆ ತಲೆಯಲ್ಲಿರುವ ಹೇನುಗಳು ಸಾಯುತ್ತದೆ.
ಹಾನಿಕಾರಕ ಅಂಶ :-
ಪುದೀನ ಅಧಿಕ ಸೇವನೆಯಿಂದ ಕರುಳು, ಮೂತ್ರ ಜನಕಾಂಗ ಮತ್ತು ಕಾಮಶಕ್ತಿಗೆ ಹಾನಿಕಾರಕವಾಗಿದೆ.