ಮನೆ ಮನೆ ಮದ್ದು ಪುದೀನ

ಪುದೀನ

0

ನೀರಿನ ಆಶ್ರಯವಿರುವ ಕಡೆ ಪುದೀನ ಸೊಂಪಾಗಿ ಬೆಳೆಯುತ್ತದೆ. ಆದ್ದರಿಂದ ಇದನ್ನು ಲ್ಯಾಟಿನ್ ಭಾಷೆಯಲ್ಲಿ ‘ಮೆಂತ’ ಅಂದರೆ ‘ಜಲದೇವಿ’ ಎಂದು ಕರೆಯುತ್ತಾರೆ. ‘ಚಟ್ಟಿ ಮರುಗ’ ಎಂದೂ ಪುದೀನ ಪರಿಚಿತವಾಗಿದೆ.

Join Our Whatsapp Group

       ಪುದೀನ ಒಂದು ಬಹುವಾರ್ಷಿಕ ಬೆಳೆ ಯಾಗಿದ್ದು ಇದನ್ನು ಔಷಧಿ, ಆಹಾರ, ಸೌಂದರ್ಯವರ್ಧಕ, ಮದ್ಯಪೇಯ ಹಾಗೂ ಇತರೆ ಉದ್ದಿಮೆಗಳಲ್ಲಿ ಉಪಯೋಗಿಸುತ್ತಾರೆ. ಇದನ್ನು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಮನೆಗಳಲ್ಲಿ ಉಪಯೋಗಿಸುತ್ತಾರೆ. ಪುದೀನದಲ್ಲಿ ಜಪಾನಿಸ್ ಪುದೀನ, ಸ್ಪಿಯರ್ ಪುದೀನ, ಬರ್ಗಾಮಾಟ್ ಪುದೀನ ಮತ್ತು ಪೆಪ್ಪರ್ ಪುದೀನ ಎಂಬ ಪ್ರಭೇದಗಳಿವೆ.

      Bಸುಗಂಧಯುಕ್ತವಾದ ಪುದೀನ ಸೊಪ್ಪು ಎಲ್ಲರ ಮನೆಯ ಹಿತ್ತಲಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಆಹಾರ ಪದಾರ್ಥಗಳಲ್ಲಿ ಪರಿಮಳವನ್ನು ಹೆಚ್ಚಿಸಲು ಇದರ ಪಾತ್ರ ಮುಖ್ಯವಾಗಿದೆ. ಇದು ಜೀರ್ಣಕಾರಿಯಾಗಿ ಕೆಲಸ ಮಾಡುತ್ತದೆ. ಇದರ ಬಳಕೆಯಿಂದ ದೇಹಕ್ಕೆ ಕಬ್ಬಿಣ ಸತ್ವವನ್ನು ಒದಗಿಸಬಹುದು. ಇದು ಉತ್ತಮ ಪಾಚಕ ಔಷಧಿಗಳಲ್ಲಿ ಒಂದಾಗಿದೆ. ಇದರ ಪರಿಚಯ ಗ್ರೀಕರಿಗೂ, ಯುನಾನಿ ಚಿಕಿತ್ಸಕರಿಗೂ ಅಲ್ಲದೆ ಚೀನಾ, ಜಪಾನಿನ ಚಿಕಿತ್ಸಕರಿಗೂ ಗೊತ್ತಿತ್ತು ಪುರಾತನ ಆಯುರ್ವೇದ ಗ್ರಂಥದಿಂದ ಹಿಡಿದು ಇತ್ತೀಚಿನ ಗ್ರಂಥಗಳಲ್ಲೂ ಇದರ ಪ್ರಶಂಸೆಯನ್ನು ಕಾಣಬಹುದು.

ಪುದೀನವನ್ನು ಬಳಸದ ಅಡುಗೆಮನೆ ಅಪರೂಪ. ಅದರಲ್ಲಿಯೂ ಮಾಂಸಾಹಾರಿ ಗಳಿಗಂತೂ ಪುದೀನ ಬಹಳ ಪ್ರಿಯವಾದುದು.

 ಸಸ್ಯವರ್ಣನೆ

ಮೆಂತಾ ವಿರಿಡಿಸ್ ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯವು ಲ್ಯಾಮಿಯೇಸಿ ಕುಟುಂಬಕ್ಕೆ ಸೇರಿದೆ. ಅಡುಗೆಯಲ್ಲಿ ಹೆಚ್ಚು ಬಳಸಲಾಗುವ ಪ್ರಭೇದವಿದು. ಈ ಸಸ್ಯವು ಸಾಮಾನ್ಯವಾಗಿ ಏಕವಾರ್ಷಿಕದಂತೆ ಬೆಳೆಯುತ್ತದೆ. ಹಾಗೆಯೇ ಬೆಳೆಯಲು ಬಿಟ್ಟರೆ ಬಹುವಾರ್ಷಿಕದಂತೆಯೂ ಬೆಳೆಯುತ್ತದೆ. ಕವಲು, ರೆಂಬೆಗಳು ಮೃದುವಾಗಿ ಇರುತ್ತವೆ. ಸಾಮಾನ್ಯ ರೀತಿಯ ಮೃದುವಾದ ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆಯಾಗಿವೆ. ಈ ಸಸ್ಯದ ಎಲ್ಲಾ ಭಾಗಗಳು ಮಧುರವಾದ ಸುವಾಸನೆಯಿಂದ ಕೂಡಿದೆ. ಜಪಾನಿನ್ ಪುದೀನ, ಬರ್ಗಾಮಾಟ್ ಪುದೀನ ಮತ್ತು ಪೆಪ್ಪರ್ ಪುದೀನಗಳನ್ನು ಸುಗಂಧ ತೈಲವನ್ನು ತಯಾರಿಸಲು ಬಳಸುವರು.

 ಮಣ್ಣು

       ಮಧ್ಯಮ, ಆಳವಾದ ಫಲವತ್ತಾದ ಮತ್ತು ಸಾವಯವಯುಕ್ತ ಮಣ್ಣು ಅತಿಯೋಗ್ಯ. ಹೆಚ್ಚು ನೀರು ಹಿಡಿದಿಟ್ಟುಕೊಳ್ಳುವ, ಆದರೆ ನೀರು ನಿಲ್ಲದಂತಹ ಮಣ್ಣು ಒಳ್ಳಯದು.

 ಹವಾಗುಣ

ಉಷ್ಣವಲಯ ಮತ್ತು ಸಮಶೀತೋಷ್ಣ ವಲಯದ ಎಲ್ಲಾ ಪ್ರದೇಶದಲ್ಲಿ ನೀರಾವರಿಯಲ್ಲಿ ಬೆಳೆಯಬಹುದು. ಆದರೆ ಚಳಿಗಾಲದಲ್ಲಿ ಬೇರು ಕೊಳೆಯುವ ರೋಗಕ್ಕೆ ಕುತ್ತಾಗುತ್ತದೆ.

 ನೀರಾವರಿ

      ನೀರಿನ ಆಶ್ರಯವಿರುವ ಕಡೆ ಪುದೀಗ ಕೊಂಪಾಗಿ ಬೆಳೆಯುತ್ತದೆ. ಪುದೀನಕ್ಕೆ ಅತಿ ಹೆಚ್ಚಿನ ನೀರು ಅಪಶ್ಯಕತೆ ಇದೆ. ಮಣ್ಣು ಮತ್ತು ಹವಾಗುಣವನ್ನು ಆಧರಿಸಿ ಬೆಳೆಗೆ 6-9 ಮುಂಗಾರು ಮಳೆ ಶುರುವಾಗುವ ಮುನ್ನ ನೀರನ್ನು ಹಾಯಿಸಬೇಕು.

 ಬೇಸಾಯ ಕ್ರಮಗಳು

       ಪುದೀನವನ್ನು ಬಳ್ಳಿಯಂತಿರುವ ಸ್ಟೋಲನ್ ಗಳಿಂದ ವೃದ್ಧಿಪಡಿಸಬಹುದು. ಪುದೀನ ಬೆಳೆಯಲು ಒಂದು ಚ.ಮೀಟರ್ ಭೂಮಿಯನ್ನು ಚೆನ್ನಾಗಿ ಹದ ಮಾಡಿ ಬೇರು, ಕಳೆಯನ್ನು ಸಂಪೂರ್ಣವಾಗಿ ತೆಗೆಯಬೇಕು. ಪುದೀನದ ಬೇರುಗಳನ್ನು 7-10 ಸೆಂ.ಮೀ. ಉದ್ದವಿರುವಂತೆ ಕತ್ತರಿಸಿ 45-60 ಸೆಂ.ಮೀ. ಅಂತರದಲ್ಲಿ ಸಸಿಗಳನ್ನು ನೆಡಬೇಕು.

       ಮೈದಾನ ಪ್ರದೇಶದಲ್ಲಿ ಸಸಿಯನ್ನು ಚಳಿಗಾಲದಲ್ಲಿ ನೆಡುತ್ತಾರೆ. ಆದರೆ ಶೀತವಲಯದಲ್ಲಿ ಸಸಿಯನ್ನು ವಸಂತ ಕಾಲದಲ್ಲಿ ಅಂದರೆ ಡಿಸೆಂಬರ್‌ನ ಕೊನೆಯವಾರದಿಂದ ಮಾರ್ಚ್ ತಿಂಗಳಿನ ಮೊದಲನೆಯ ವಾರದವರೆಗೆ ಸಸಿಯನ್ನು ನೆಡಬಹುದು. ಆದರೆ ತಡವಾಗಿ ಸು ನೆಟ್ಟರೆ ಅಲ್ಪಪ್ರಮಾಣದ ಇಳುವರಿ ಸಿಗುತ್ತದೆ.

 ಕಳೆ ನಿಯಂತ್ರಣ

      ಕಳೆ ಹೆಚ್ಚಾದರೆ ಈ ಬೆಳೆಯಲ್ಲಿ 60ರಷ್ಟು ಸೊಪ್ಪು ಮತ್ತು ಎಣ್ಣೆಯ ಇಳುವರಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಪುದೀನದಲ್ಲಿ ನಿರಂತರ ಕಳೆ ತೆಗೆಯಬೇಕು.

 ಸಸ್ಯ ಸಂರಕ್ಷಣೆ

       ತುಕ್ಕು ಬೂದಿರೋಗ ಮತ್ತು ಬೇರು ಕೊಳೆ ರೋಗವು ಮುಖ್ಯ ರೋಗಗಳು ಸುರಳಿ ಪುಂಡಿ, ಕಂಬಳಿಹುಳು ಮತ್ತು ಗೆದ್ದಲು ಈ ಸಸ್ಯಗಳಿಗೆ ಹಾನಿಮಾಡುವ ಮುಖ್ಯ ಕೀಟಗಳು.

        ಬೇವಿನ ಹಿಂಡಿಯ ಸಾರವನ್ನು ಸಿಂಪಡಿಸುವುದರಿಂದ ರೋಗ ಮತ್ತು ಕೀಟಗಳ ಹಾವಳಿಯನ್ನು ಹತೋಟಿ ಮಾಡಬಹುದು.

 ಕೊಯ್ದು ಮತ್ತು ಇಳುವರಿ

      ಸಾಮಾನ್ಯವಾಗಿ ಈ ಬೆಳೆಯನ್ನು ನೆಟ್ಟ 100-120 ದಿವಸಗಳ ನಂತರ ಕೆಳಗಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ದನ್ನು ಪ್ರಾರಂಭಿಸಬೇಕು. ಕೊಯ್ದನ್ನು ಸೂರ್ಯನ ತಾಪಮಾನ ಹೆಚ್ಚಿರುವಾಗ ಮಾಡಬೇಕು. ಹಸಿರು ಸೊಪ್ಪನ್ನು 2-3 ಸೆಂ.ಮೀ. ಎತ್ತರದಲ್ಲಿ ಕತ್ತರಿಸಬೇಕು. ಮೊದಲನೇ ಬೆಳೆಯು ಜೂನ್ ಕೊನೆಯ ವಾರದಲ್ಲಿ ಮತ್ತು ಎರಡನೇ ಬೆಳೆಯು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಮೊದಲನೇ ಕೊಯ್ದು ಮಾಡಿದ 80 ದಿನಗಳ ನಂತರ ಎರಡನೇ ಕೊಯ್ದು ಸಿದ್ಧವಾಗುತ್ತದೆ. ಉತ್ತಮವಾಗಿ ಬೆಳೆದ 4 X 4 ಆಡಿ ಜಾಗದಿಂದ 2-3 ಕೆ.ಜಿ. ತಾಜಾ ಸೊಪ್ಪನ್ನು ಪಡೆಯಬಹುದು. ಕಂತೆ ಕಟ್ಟಿ ಆಡಿಗೆಮನೆಯಲ್ಲಿ ಒಣಹಾಕಿ, ಉದುರಿದ ಒಣ ಎಲೆಗಳನ್ನು ಡಬ್ಬಿಗಳಲ್ಲಿ ಶೇಖರಿಸಿಡಬಹುದು.

 *ಪೋಷಕಾಂಶಗಳು (100 ಗ್ರಾಂ ಸೊಪ್ಪಿನಲ್ಲಿ )

*

ತೇವಾಂಶ     84.90 0

ಸಸಾರಜನಕ     5.90 ಗ್ರಾಂ

ಕೊಬ್ಬು             0.70ಗ್ರಾಂ

ಪಿಷ್ಪ               , 8.8  ಗ್ರಾಂ

ಸುಣ್ಣಾಂಶ       400ಮಿ. ಗ್ರಾಂ

 ರಂಜಕ               62  ಮಿ. ಗ್ರಾಂ

 ಕಬ್ಬಿನ              19.2  ಮಿ. ಗ್ರಾಂ

ಥೈಯಮೈನ್         0.05 ಮಿ.ಗ್ರಾಂ

ರೈಬೊಫ್ಲಾವಿನ್      0.26.ಮಿಗ್ರಾಂ

ನಯಾಸಿನ್            1.0  ಮಿ. ಗ್ರಾಂ

‘ಸಿ’ ಜೀವಸತ್ವ          27ಮಿ. ಗ್ರಾಂ

‘ಎ’ ಜೀವಸತ್ವ          , 1600 ಐಯು

 ಔಷಧೀಯ ಗುಣಗಳು

 ★ ಪುದೀನ ಸೊಪ್ಪನ್ನು ಬಾಯಿಯಲ್ಲಿಟ್ಟು ಅಗಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ.

2.ಆಹಾರವನ್ನು ಪಚನ ಮಾಡಲು ಪುದೀನ ಸಹಾಯ ಮಾಡುವುದಲ್ಲದೇ ಕೊಬ್ಬನ್ನು ಜೀರ್ಣಿಸಲು ಸಹಕಾರಿಯಾಗುತ್ತದೆ.

★- ನೆಗಡಿ ಮತ್ತು ಕೆಮ್ಮಿನಿಂದ ಬಳಲುವವರು ಪುದೀನ ಸೊಪ್ಪಿನಿಂದ ತಯಾರಿಸಿದ

ಚಹಾವನ್ನು ಕುಡಿಯಬೇಕು.

★ಜ್ವರದಿಂದ ಬಳಲುವವರು ಪುದೀನ ಸೊಪ್ಪಿನ ಕಷಾಯ ಕುಡಿಯಬೇಕು.

★ಅಜೀರ್ಣವಿರುವಾಗ ಪುದೀನ ಸೊಪ್ಪಿನ ರಸದೊಂದಿಗೆ ಹಸಿಶುಂಠಿಯ ರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯಬೇಕು.

ದಿ ಮೊಡವೆಗಳಾಗಿದ್ದಲ್ಲಿ ಪುದೀನ ಎಲೆಗಳೊಂದಿಗೆ ಅರಿಶಿನ ಬೆರೆಸಿ ಅರೆದು ಮುಖಕ್ಕೆ ಹಚ್ಚಿ ಅರ್ಧಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು.★

* ಹೊಟ್ಟೆಯುಬ್ಬರ, ಹೊಟ್ಟೆನೋವು ಇರುವಾಗ ಪುದೀನ ರಸಕ್ಕೆ ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯಬೇಕು.

★ಊಟವಾದ ನಂತರ ಪುದೀನ ಎಲೆಗಳನ್ನು ಆಗಿಯುವುದರಿಂದ ಹುಳುಕು ಹಲ್ಲಿನಿಂದಾಗುವ ದುರ್ವಾಸನೆ ತಡೆಯುವುದಲ್ಲದೇ ವಸಡನ್ನು ಬಲಪಡಿಸುತ್ತದೆ.

೧)()ಜಂತುಹುಳುಗಳ ತೊಂದರೆಯಿದ್ದಲ್ಲಿ ಖಾಲಿಹೊಟ್ಟಿಗೆ ಪುದೀನ ಸೊಪ್ಪನ್ನು ಅಗಿದು ತಿನ್ನಬೇಕು.

ಸ್ವರ ಒಡೆದಿದ್ದಲ್ಲಿ ಪುದೀನ ಕಷಾಯ ತಯಾರಿಸಿ ಇದರಿಂದ ಬಾಯಿ ಮುಕ್ಕಳಿಸಬೇಕು. ಹಾಡುಗಾರರು ಇದನ್ನು ನಿಯಮಿತವಾಗಿ ಉಪಯೋಗಿಸುವುದರಿಂದ ಸ್ವರ ಶುದ್ಧವಾಗುತ್ತದೆ.

* ಮುಟ್ಟಿನ ಹೊಟ್ಟೆನೋವಿನಿಂದ ಬಳಲುವ ಸ್ತ್ರೀಯರು ಮುಟ್ಟಾಗುವುದಕ್ಕೆ ಒಂದು ವಾರ ಮುಂಚೆ ದಿನಕ್ಕೆರಡು ಬಾರಿ ಪುದೀನ ಕಷಾಯ ಕುಡಿಯುವುದರಿಂದ ನೋವಿನ ತೀವ್ರತೆ ತಗ್ಗುತ್ತದೆ.

0 ಗಾಯಗಳಾದಾಗ ಪುದೀನ ಎಲೆಯ ರಸ ಲೇಪಿಸಿದಲ್ಲಿ ಬೇಗನೇ ಗುಣವಾಗುತ್ತದೆ.

ಎಚ್ಚರಿಕೆ : ಗರ್ಭಿಣಿಯರು ಪುದೀನವನ್ನು ಅಧಿಕ ಪ್ರಮಾಣದಲ್ಲಿ ಬಳಸಬಾರದು.