ಕೊರಟಗೆರೆ: ಸರ್ಕಾರಿ ಶಾಲೆಯ ಆವರಣದಲ್ಲಿ ನರೇಗಾ ಯೋಜನೆಯಡಿ ಮಾಡಿರುವ ಕಾಂಪೌಂಡ್ ಕಾಮಗಾರಿಯ ಹಣ ಫಲಾನುಭವಿಗೆ ತಲುಪಿಸದೇ ಅನುದಾನ ದುರುಪಯೋಗ ಪಡಿಸಿಕೊಂಡು ಕರ್ತವ್ಯ ಲೋಪ ಎಸಗಿರುವ ಆರೋಪದಡಿ ಬೂದಗವಿ ಗ್ರಾ.ಪಂ. ಪಿಡಿಓ ರಘುನಂದನ್ ಅಮಾನತು ಆಗಿರುವ ಘಟನೆ ಸೆ.25ರ ಬುಧವಾರ ನಡೆದಿದೆ.
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾ.ಪಂ ಪಿಡಿಓ ವಿರುದ್ಧ ಸಾರ್ವಜನಿಕವಾಗಿ ದಾಖಲೆ ಸಮೇತ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆ ಕೊರಟಗೆರೆ ತಾ.ಪಂ. ಇಓ ಅವರು ಗ್ರಾ.ಪಂ ಪಿಡಿಓ ರಘುನಂದನ್‍ಗೆ ಕಾರಣ ಕೇಳಿ ನೋಟಿಸ್ ನೀಡಿದ್ದರೂ ಸಹ ಯಾವುದೇ ಸಮಜಾಯಿಸಿ ನೀಡದೆ ಕರ್ತವ್ಯಲೋಪ ಎಸಗಿದ್ದಾರೆ.
ನರೇಗಾ ಯೋಜನೆಯಲ್ಲಿ ನಿಯಮ ಬಾಹಿರವಾಗಿ ಅನುದಾನ ಪಾವತಿಸಿ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಫಲವಾಗಿ ಕರ್ತವ್ಯಲೋಪ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಹಿನ್ನೆಲೆ ಕರ್ನಾಟಕ ನಾಗರೀಕ ಸೇವಾ ಮತ್ತು ನಿಯಮಾವಳಿ ಪ್ರಕಾರ ಇಲಾಖೆಯ ವಿಚಾರಣೆ ಬಾಕಿಯಿರಿಸಿ ಸೇವೆಯಿಂದ ಅಮಾನತು ಆದೇಶ ಮಾಡಿ ಜಿಪಂ ಸಿಇಓ ಜಿ.ಪ್ರಭು ಆದೇಶ ಮಾಡಿದ್ದಾರೆ.