ಮೈಸೂರು: ದೇವಸ್ಥಾನದ ಮುಂಭಾಗ ಹಾಕಿದ್ದ ಚಪ್ಪರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮೈಸೂರಿನ 2ನೇ ಈದ್ಗಾ ಬಡಾವಣೆಯಲ್ಲಿ ನಡೆದಿದೆ.
ಬಸವೇಶ್ವರ ದೇವಸ್ಥಾನದ ಮುಂಭಾಗ ಹಾಕಿದ್ದ ತೆಂಗಿನ ಗರಿಯ ಚಪ್ಪರಕ್ಕೆ ದೇವಸ್ಥಾನದಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಹಚ್ಚಿದ್ದಾರೆ.
ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಾಕಿರುವ ಅನುಮಾನ ವ್ಯಕ್ತವಾಗಿದ್ದು, ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube