ಮನೆ ಕ್ರೀಡೆ ಭಾರತ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡಕ್ಕೆ ಮಿಚೆಲ್ ಸ್ಯಾಂಟ್ನರ್ ನಾಯಕ!

ಭಾರತ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡಕ್ಕೆ ಮಿಚೆಲ್ ಸ್ಯಾಂಟ್ನರ್ ನಾಯಕ!

0

ಬೆಂಗಳೂರು: ಭಾರತ ವಿರುದ್ಧದ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮಿಚೆಲ್ ಸ್ಯಾಂಟ್ನರ್ ಅವರು ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.

ಜನವರಿ 27ರಂದು ಟಿ20 ಕ್ರಿಕೆಟ್ ಸರಣಿ ಆರಂಭವಾಗಲಿದ್ದು, ಈ ಸಲುವಾಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಟಿ20 ತಂಡ ಪ್ರಕಟ ಮಾಡಿದ್ದು ಸ್ಟಾರ್ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಕ್ಯಾಪ್ಟನ್ಸಿ ಪಡೆದಿದ್ದಾರೆ. ಎಂದಿನ ನಾಯಕ ಕೇನ್ ವಿಲಿಯಮ್ಸನ್ ಭಾರತ ವಿರುದ್ಧದ ಈ ಸರಣಿಯಿಂದ ಹೊರಗುಳಿದಿದ್ದಾರೆ.

ಆಕ್ಲೆಂಡ್ ಏಸಸ್ ತಂಡದ ಸ್ಟಾರ್ ಎಡಗೈ ವೇಗದ ಬೌಲರ್ ಬೆನ್ ಲಿಸ್ಟರ್ ಇದೇ ಮೊದಲ ಬಾರಿ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್’ಗೆ -ಪಾದಾರ್ಪಣೆ ಮಾಡುವುದನ್ನು ಎದುರು ನೋಡುತ್ತಿದ್ದಾರೆ. ಕಳೆದ ವರ್ಷ ಭಾರತ ಪ್ರವಾಸದಲ್ಲಿ ನ್ಯೂಜಿಲೆಂಡ್ ‘ಎ’ ತಂಡದ ಪರ ಬೆನ್ ಲಿಸ್ಟರ್ ಆಡಿದ್ದರು.

“ವೈಟ್ಬಾಲ್ ಕ್ರಿಕೆಟ್’ನಲ್ಲಿ ಮಿಚೆಲ್ ಸ್ಯಾಂಟ್ನರ್ ಸಮರ್ಥ ನಾಯಕ. ಈ ಮೊದಲು ಭಾರತ ವಿರುದ್ಧದ ಸರಣಿಯಲ್ಲಿ ಅವರು ಟಿ20 ತಂಡದ ನಾಯಕತ್ವ ನಿಭಾಯಿಸಿದ್ದಾರೆ. ಭಾರತೀಯ ಪಿಚ್’ಗಳಲ್ಲಿ ಆಡಿದ ಅನುಭವ ಅವರಲ್ಲಿದ್ದು, ಇದು ತಂಡಕ್ಕೆ ನೆರವಾಗಲಿದೆ. ಹೀಗಾಗಿ ತಂಡದ ನಾಯಕತ್ವಕ್ಕೆ ಅವರು ಸೂಕ್ತ ಆಯ್ಕೆ ಆಗಿದ್ದಾರೆ,” ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಮುಖ್ಯಸ್ಥ ಗೇವಿನ್ ಲಾರ್ಸನ್ ಹೇಳಿದ್ದಾರೆ.

“ಬೆನ್ ಲಿಸ್ಟರ್ ಈ ವರ್ಷ ಆಕ್ಲೆಂಡ್ ತಂಡದ ಪರ ವೈಟ್ ಬಾಲ್ ಕ್ರಿಕೆಟ್’ನಲ್ಲಿ ಅಮೋಘ ಪ್ರದರ್ಶನ ನಿಡಿದ್ದಾರೆ. 2017ರಲ್ಲಿ ಅವರು ಆಕ್ಲೆಂಡ್ ಏಸಸ್ ತಂಡದ ಪರ ಆಡಲು ಶುರು ಮಾಡಿದ ದಿನದಿಂದಲೂ ತಂಡದ ಪರ ಮುಂಚೂಣಿಯ ವಿಕೆಟ್ ಟೇಕರ್ ಎನಿಸಿದ್ದಾರೆ. ಟಿ20 ಮತ್ತು ಲಿಸ್ಟ್ ‘ಎ’ ಕ್ರಿಕೆಟ್’ನಲ್ಲಿ ಅವರ ಸಾಧನೆ ಅದ್ಭುತವಾಗಿದೆ. ಎಡಗೈ ವೇಗಿಯಾಗಿದ್ದು ಚೆಂಡಿಗೆ ಅದ್ಭುತ ಸ್ವಿಂಗ್ ನೀಡುವ ಸಾಮರ್ಥ್ಯಹೊಂದಿದ್ದಾರೆ,” ಎಂದು ವಿವರಿಸಿದ್ದಾರೆ.

ಭಾರತ ಪ್ರವಾಸದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮಾಜಿ ಕ್ರಿಕೆಟಿಗ ಲೂಕ್ ರೊಂಕಿ ಮುಖ್ಯ ಕೋಚ್ ಆಗಿ ಕೆಲಸ ಂಆಡಲಿದ್ದಾರೆ. ಅವರಿಗೆ ಬಾಬರ್ ಕಾರ್ಟರ್ (ಬ್ಯಾಟಿಂಗ್ ಕೋಚ್) ಮತ್ತು ಪಾಲ್ ವೈಸ್ಮನ್ (ಬೌಲಿಂಗ್ ಕೋಚ್) ನೆರವಾಗಲಿದ್ದಾರೆ. ಟ್ರೆವೋರ್ ಪೆನ್ನಿ ನಾಲ್ಕನೇ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ನ್ಯೂಜಿಲೆಂಡ್ ತಂಡದ ವಿವರ

ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಆಲೆನ್, ಮೈಕಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೇನ್ ಕ್ಲೀವರ್, ಡೆವೋನ್ ಕಾನ್ವೇ, ಜೇಕಬ್ ಡಫಿ, ಲಾಕಿ ಫರ್ಗ್ಯೂಸನ್, ಬೆನ್ ಲಿಸ್ಟರ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕಲ್ ರಿಪನ್, ಹೆನ್ರಿ ಶಿಪ್ಲೀ, ಇಶ್ ಸೋಢಿ, ಬ್ಲೇರ್ ಟಿಕ್ನರ್.

ಭಾರತ-ನ್ಯೂಜಿಲೆಂಡ್ ನಡುವಣ ಸರಣಿಯ ವೇಳಾಪಟ್ಟಿ

ಮೊದಲ ಏಕದಿನ ಪಂದ್ಯ: ಜನವರಿ 18ರಂದು, ಹೈದರಾಬಾದ್ (ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ)

ಎರಡನೇ ಏಕದಿನ ಪಂದ್ಯ: ಜನವರಿ 21, ರಾಯ್ಪುರ, (ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣ)

ಮೂರನೇ ಏಕದಿನ ಪಂದ್ಯ: ಜನವರಿ 24, ಇಂದೋರ್ (ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣ)

ಮೊದಲ ಟಿ20 ಪಂದ್ಯ: ಜನವರಿ 27, ರಾಂಚಿ (ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣ)

ಎರಡನೇ ಟಿ20 ಪಂದ್ಯ: ಜನವರಿ 29, ಲಖನೌ (ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ)

ಮೂರನೇ ಟಿ20 ಪಂದ್ಯ: ಫೆಬ್ರವರಿ 01, ಅಹ್ಮದಾಬಾದ್ (ನರೇಂದ್ರ ಮೋದಿ ಕ್ರೀಡಾಂಗಣ)