ಮನೆ ರಾಷ್ಟ್ರೀಯ ಮಿಜೋರಾಂ: ಕಲ್ಲಿನ ಕ್ವಾರಿ ಕುಸಿದು ಐವರ ಸಾವು, ಹಲವರು ನಾಪತ್ತೆ

ಮಿಜೋರಾಂ: ಕಲ್ಲಿನ ಕ್ವಾರಿ ಕುಸಿದು ಐವರ ಸಾವು, ಹಲವರು ನಾಪತ್ತೆ

0

ಐಜ್ವಾಲ್: ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್‌ ನಲ್ಲಿ ಮಂಗಳವಾರ ಬೆಳಿಗ್ಗೆ ಕಲ್ಲಿನ ಕ್ವಾರಿ ಕುಸಿದು ಐವರು ಸಾವನ್ನಪ್ಪಿದ್ದು ಹಲವರು  ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Join Our Whatsapp Group

ನಿರಂತರ ಮಳೆಯ ಪರಿಣಾಮ ಈ ಕ್ವಾರಿ ಕುಸಿದಿದೆ ಎಂದು ಪೊಲೀಸರು ಹೇಳಿದ್ದಾರೆ. ನಗರದ ದಕ್ಷಿಣ ಹೊರವಲಯದಲ್ಲಿರುವ ಮೆಲ್ಥಮ್ ಪ್ರದೇಶದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಐದು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು ಇನ್ನೂ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಹಿಂದಿನ ಲೇಖನಪಕ್ಷವನ್ನು ತೊರೆಯುವವರು ಅವಕಾಶವಾದಿಗಳು: ಅಶೋಕ್​ ಗೆಹ್ಲೋಟ್​
ಮುಂದಿನ ಲೇಖನಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು- ಪ್ರಾಣಾಪಾಯದಿಂದ ಯುವಕರು ಪಾರು