ಮಂಡ್ಯ(Mandya): ಬೆಂಗಳೂರು-ಮೈಸೂರು ಹೆದ್ದಾರಿ ವ್ಯಾಪ್ತಿಯ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ ಮೇಲುಕೋಟೆ ಜೆಡಿಎಸ್ ಶಾಸಕ ಸಿ.ಎಸ್ ಪುಟ್ಟರಾಜು ಗಡುವು ನೀಡಿದ್ದಾರೆ.
ಮೇಲುಕೋಟೆ ತಾಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಭಾರೀ ಗಾತ್ರದ ವಾಹನಗಳು ಸಂಚರಿಸುತ್ತಿರುವುದರಿಂದ ಮೇಲುಕೋಟೆ ಕ್ಷೇತ್ರದ ಹೆದ್ದಾರಿ ವ್ಯಾಪ್ತಿಯಲ್ಲಿನ ಬಹುತೇಕ ರಸ್ತೆಗಳು ಗುಂಡಿಗಳು ಬಿದ್ದು ಹಾಳಾಗಿವೆ. ಹೀಗಾಗಿ ಳನ್ನು ದುರಸ್ತಿ ಮಾಡುವಂತೆ ಆಗ್ರಹಗಳು ಕೇಳಿಬರುತ್ತಿದೆ. ಆದಷ್ಟು ಬೇಗ ಹೆದ್ದಾರಿಯನ್ನು ದುರಸ್ತಿ ಮಾಡಬೇಕು ಎಂದು ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಒತ್ತಾಯಿಸಿದ್ದಾರೆ.
ಹೆದ್ದಾರಿ ಕೆಲಸ ಮುಗಿದ ಬಳಿಕ ರಸ್ತೆ ದುರಸ್ಥಿ ಮಾಡಿಸಿ ಕೊಡುವುದಾಗಿ ಸಂಸದ ಪ್ರತಾಪ್ ಸಿಂಹ ಅವರು ಮಾತುಕೊಟ್ಟಿದ್ದರು. ಸದ್ಯ ಬೆಂಗಳೂರು ಮೈಸೂರು ಹೆದ್ದಾರಿ ಕಾಮಗಾರಿ ಬಹುತೇಕ ಅಂತ್ಯಗೊಂಡಿದೆ. ಹೀಗಾಗಿ ಸಂಸದ ಪ್ರತಾಪ್ ಸಿಂಹ ಮಾತು ಉಳಿಸಿಕೊಳ್ಳದೆ ಹೋದರೆ ಪ್ರತಿಭಟನೆ ನಡೆಸುವುದಾಗಿ ಶಾಸಕರು ಎಚ್ಚರಿಕೆ ನೀಡಿದ್ದಾರೆ.
ಹೆದ್ದಾರಿ ಕಾಮಗಾರಿ ಅವೈಜ್ಞಾನವಾಗಿದೆ, ಸಾವಿರಾರು ಜನರ ಅನ್ನ ಕಿತ್ತುಕೊಂಡಿದೆ. ಪ್ರತಾಪ್ ಸಿಂಹ ಕಾಂಟ್ರ್ಯಾಕ್ಟರ್ ಮೇಲೆ ಈತನೊಬ್ಬ ಕಾಂಟ್ರ್ಯಾಕ್ಟರ್. ರಸ್ತೆಗಳನ್ನು ಗಮನಿಸಿದಾಗ ಕಳಪೆ ಕಾಮಗಾರಿ ಅನ್ನೋದು ಬಟಾ ಬಯಲಾಗಿದೆ. ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ಮಾತು ತಪ್ಪಿದರೆ ನಿಮ್ಮ ಮನೆ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.
ವಿಧಾನಸಭೆ ಚುನಾವಣೆ ವಿಚಾರವಾಗಿ ಪಾಂಡವಪುರದಲ್ಲಿ ಮಾತನಾಡಿದ ಶಾಸಕರು, ಮಂಡ್ಯ ಜೆಡಿಎಸ್ ಭದ್ರಕೋಟೆಯಲ್ಲಿ 7ಕ್ಕೆ 7 ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ. ಹೋದ ಬಾರಿ ಕಾಂಚಾಣದ (ಹಣ) ಬಲದಿಂದ ಚುನಾವಣೆಯನ್ನ ಕೆ.ಆರ್ ಪೇಟೆಯಲ್ಲಿ ಗೆದ್ದಿದ್ದರು. ಆದರೆ ಈ ಬಾರಿ ಹಾಗೆ ಆಗುವುದಿಲ್ಲ. ಕೆ.ಆರ್ ಪೇಟೆಯಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.