ಹಾಸನ: ಹಾಸನದ ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಕೆ.ಗೋಪಾಲಯ್ಯ ಅವರು ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಬೇಲೂರು ಶಾಸಕರಾದ ಹೆಚ್.ಕೆ.ಸುರೇಶ್ ರವರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಅವರು, ಶ್ರೀ ಹಾಸನಾಂಬ ದೇವಿ ನಾಡಿನ ಜನತೆಗೆ ಒಳಿತು ಮಾಡಲಿ, ಹಾಸನಾಂಬಾ ದೇವಿಯ ಎಲ್ಲ ಭಕ್ತರನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿದರು. ರಾಜ್ಯದಲ್ಲಿ ಸುಖ ಸಮೃದ್ಧಿ ನೆಲಸಲಿ ಎಂದು ಶುಭ ಹಾರೈಸಿದರು.