ಬೆಂಗಳೂರು : ಪವರ್ ಶೇರಿಂಗ್ ಇತ್ಯರ್ಥದ ಗೊಂದಲದ ನಡುವೆಯೇ ಶಾಸಕರು ವಿದೇಶಕ್ಕೆ ಹಾರಲಿದ್ದಾರೆ. ಫೆಬ್ರವರಿ 3ನೇ ವಾರದಲ್ಲಿ 33 ಶಾಸಕರು ಆಫ್ರಿಕಾಗೆ ಹೋಗಲಿದ್ದಾರೆ. ಎರಡು ತಂಡಗಳಲ್ಲಿ ತೆರಳುವ ಶಾಸಕರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿ ಮಾರ್ಚ್ 1ರೊಳಗೆ ವಾಪಸ್ ಬನ್ನಿ ಎಂದು ಸೂಚನೆ ನೀಡಿದ್ದಾರೆ.
ಫೆಬ್ರವರಿ 16ರಿಂದ ಮಾರ್ಚ್ 3ರ ತನಕ ಪಶುಸಂಗೋಪನಾ ಇಲಾಖೆಯ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ಗೆ ಪ್ರವಾಸಕ್ಕೆ ಹೋಗಲಿದ್ದಾರೆ. ಪಶುಸಂಗೋಪನಾ ಇಲಾಖೆಯ ಅಧ್ಯಯನ ಪ್ರವಾಸ ಎನ್ನಲಾಗುತ್ತಿದ್ದು, 15ಕ್ಕೂ ಹೆಚ್ಚು ಶಾಸಕರು ವಿದೇಶ ಪ್ರವಾಸಕ್ಕೆ ಹೋಗುವ ಸಾಧ್ಯತೆಯಿದೆ.
ಕೃಷಿ, ಪಶುಸಂಗೋಪನೆಯಲ್ಲಿ ಈ ದೇಶಗಳು ಯಾವ ರೀತಿ ಪ್ರಗತಿ ಸಾಧಿಸಿದೆ. ಈ ದೇಶಗಳು ಅಳವಡಿಸಿರುವ ತಂತ್ರಜ್ಞಾನವನ್ನು ನಾವು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಶಾಸಕರು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಯಾವೆಲ್ಲ ಶಾಸಕರು ವಿದೇಶಿ ಪ್ರವಾಸಕ್ಕೆ ತೆರಳುತ್ತಿದ್ದಾರೆ ಎನ್ನುವುದು ಮುಂದಿನ ಕೆಲ ದಿನಗಳಲ್ಲಿ ತಿಳಿಯಲಿದೆ.














