ಬೆಂಗಳೂರು(Bengaluru): ಬೆಂಗಳೂರಿನಲ್ಲಿ ಯುವಕ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಹೇಳಿಕೆ ಸರಿ ಇದೆ. ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಜೆಜೆ ನಗರದಲ್ಲಿ ಯುವಕ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಬೆಂಗಳೂರು ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ. ಗೃಹ ಸಚಿವರು ಹೇಳಿದ್ದು ಸರಿ ಇದೆ. ಉರ್ದು ಬರಲ್ಲ ಅಂದಿದ್ದಕ್ಕೆ ಚಂದ್ರುನನ್ನ ಕೊಲೆ ಮಾಡಲಾಗಿದೆ. ಬೈಕ್ ಗೆ ಆಯಕ್ಸಿಂಡೆಂಟ್ ಆಗಿದ್ದು ನಿಜ, ಆಗ ಗಲಾಟೆ ನಡೆದಿದೆ. ಉರ್ದುವಿನಲ್ಲಿ ಮಾತನಾಡಿ ಎಂದು ಚಂದ್ರುಗೆ ಹೇಳಿದ್ದಾರೆ. ಉರ್ದು ಮಾತನಾಡಲು ಬರಲ್ಲ ಎಂದಿದ್ದಕ್ಕೆ ಕೊಲೆ ಮಾಡಿದ್ದಾರೆ ಎಂದು ರವಿಕುಮಾರ್ ಹೇಳಿದ್ದಾರೆ.
ನಾವು ಚಂದ್ರುವಿನ ಮನೆಗೆ ಹೋಗಿದ್ದೆವು. ಆಗ ಅವರ ತಾಯಿ ಮತ್ತು ಗೆಳೆಯ ಸೈಮನ್ ನಮಗೆ ಹೇಳಿದ್ದಾರೆ. ಉರ್ದು ಬರಲ್ಲ ಎಂಬ ವಿಚಾರಕ್ಕೆ ಕೊಲೆ ನಡೆದಿದೆ ಎಂಬುದನ್ನು ಅವರು ಹೇಳಿದ್ದಾರೆ. ಈ ಕುರಿತು ತನಿಖೆಯಾಗಬೇಕು ಎಂದು ರವಿಕುಮಾರ್ ಆಗ್ರಹಿಸಿದ್ದಾರೆ.