ಮನೆ ಅಪರಾಧ ಸಾಲದ ಹೊರೆ: ಮೊಬೈಲ್ ಶಾಪ್ ಮಾಲೀಕ ಆತ್ಮಹತ್ಯೆ

ಸಾಲದ ಹೊರೆ: ಮೊಬೈಲ್ ಶಾಪ್ ಮಾಲೀಕ ಆತ್ಮಹತ್ಯೆ

0

ಮೈಸೂರು: ಸಾಲದ ಹೊರೆಗೆ ನೊಂದ ಮೊಬೈಲ್ ಶಾಪ್ ಓನರ್ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.

ಹೇಮಂತ್ ಕುಮಾರ್(24) ಮೃತ ದುರ್ದೈವಿ. ಆರ್.ಟಿ.ನಗರ ರಿಂಗ್ ರಸ್ತೆ ಬಳಿ ಇರುವ ಶಿವೇಗೌಡ ಫಾರಂ ನ ಮರವೊಂದಕ್ಕೆ ನೇಣು ಬಿಗಿದುಕೊಂಡು ಹೇಮಂತ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೈಸೂರಿನ ಮಹಾಮನೆ ವೃತ್ತದಲ್ಲಿ ಮೊಬೈಲ್ ಶಾಪ್ ನಡೆಸುತ್ತಿದ್ದ ಹೇಮಂತ್ ಕುಮಾರ್, ಹೆಚ್ಚಿನ ಸಾಲ ಮಾಡಿಕೊಂಡಿದ್ದನೆಂದು ಹೇಳಲಾಗಿದೆ. ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.