ಮೈಸೂರು(Mysuru): ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಕೇಸರೀಕರಣ ನಡೆದಿದೆ.. ಅಚ್ಚೇದಿನ್ ಎಲ್ಲಿದೆ.. 2 ಕೋಟಿ ಉದ್ಯೋಗ ಎಲ್ಲಿ.. ಮೈಸೂರನ್ನು ಪ್ಯಾರೀಸ್ ಮಾಡುವುದು ಯಾವಾಗ… ಮೋದಿ ಗೋಬ್ಯಾಕ್.. ಎಂದು ಘೋಷಣೆ ಕೂಗಿ ರೈತ ಸಂಘ, ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಎದುರು ಸೋಮವಾರ ಸಂಜೆ ಸುರಿಯುವ ಮಳೆಯಲ್ಲಿಯೇ ರೈತ ಸಂಘ, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಘೋಷಣೆ ಮೊಳಗಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.