ಮನೆ ರಾಜ್ಯ ಪುತ್ರ ವ್ಯಾಮೋಹದಿಂದಾಗಿ ಮೋದಿ ಜಪ ಮಾಡುತ್ತಿರುವ ದೇವೇಗೌಡರು: ಎಂ.ವೀರಪ್ಪ ಮೊಯ್ಲಿ

ಪುತ್ರ ವ್ಯಾಮೋಹದಿಂದಾಗಿ ಮೋದಿ ಜಪ ಮಾಡುತ್ತಿರುವ ದೇವೇಗೌಡರು: ಎಂ.ವೀರಪ್ಪ ಮೊಯ್ಲಿ

0

ಚಿಕ್ಕಬಳ್ಳಾಪುರ: ಕುಮಾರಸ್ವಾಮಿರನ್ನು ಕೇಂದ್ರದಲ್ಲಿ ಮಂತ್ರಿ ಮಾಡಬೇಕೆಂಬ ಪುತ್ರ ವ್ಯಾಮೋಹದಿಂದ ದೇವೇಗೌಡರು ಮೋದಿ ಜಪ ಮಾಡುತ್ತಿದ್ದಾರೆಂದು ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಟೀಕಿಸಿದರು.

ಚಿಕ್ಕಬಳ್ಳಾಪುರ ನಗರದಲ್ಲಿ ಮಂಗಳವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ದೇವೇಗೌಡರು ಈ ಹಿಂದೆ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಹೇಳಿದ್ದರು. ಇದೀಗ ಮೋದಿಯೆ ಮತ್ತೆ ದೇಶದ ಪ್ರಧಾನಿ ಮಂತ್ರಿ ಆಗುತ್ತಾರೆಂದು ಹೇಳುತ್ತಿದ್ದಾರೆ. ಕೇಂದ್ರದಲ್ಲಿ ಕುಮಾರಸ್ವಾಮಿಯವರನ್ನು ಮಂತ್ರಿ ಮಾಡಬೇಕೆಂಬ ವ್ಯಾಮೋಹ ದೇವೇಗೌಡರದು ಎಂದರು.

2024 ರಲ್ಲಿ ಮೋದಿ ಮಾಜಿ ಆಗಲಿದ್ದಾರೆ. ಜನ ಮೋದಿ ವಿರುದ್ಧ ರೋಸಿ ಹೋಗಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರ, ಆನ್ಯಾಯದಿಂದ ಜನ ಮೋದಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು. ಹತಾಶೆಯಿಂದ ರಾಹುಲ್‌ ಗಾಂಧಿ ನ್ಯಾಯ ಯಾತ್ರೆಯನ್ನು ತಡೆಯುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ ಎಂದರು.

ಪ್ರಧಾನಿ ಮೋದಿ 11 ದಿನ ಕಠಿಣ ವ್ರತಾಚರಣೆ ಬಗ್ಗೆ ಮೋಯ್ಲಿ ಇದೇ ವೇಳೆ ಅನುಮಾನ ವ್ಯಕ್ತಪಡಿಸಿದರು. 11 ದಿನ ಉಪವಾಸ ಮಾಡುವುದು ಕಷ್ಟ. ವ್ರತ ಆಚರಣೆ ಮಾಡಿದ್ದರೆ ಮೋದಿ ಬದುಕುಳಿದಿರುವುದೇ ಪವಾಡ ಎಂದರು.