ಮನೆ ರಾಜ್ಯ ನಾಳೆ ದೇಶಾದ್ಯಂತ ಅಮೃತ್ ಭಾರತ್ ಯೋಜನೆಗೆ ಮೋದಿ ಚಾಲನೆ: ಬಾಗಲಕೋಟೆಯಲ್ಲಿ ಸಚಿವ ವಿ. ಸೋಮಣ್ಣ ಭಾಗಿ

ನಾಳೆ ದೇಶಾದ್ಯಂತ ಅಮೃತ್ ಭಾರತ್ ಯೋಜನೆಗೆ ಮೋದಿ ಚಾಲನೆ: ಬಾಗಲಕೋಟೆಯಲ್ಲಿ ಸಚಿವ ವಿ. ಸೋಮಣ್ಣ ಭಾಗಿ

0

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಮೇ 22ರಂದು ದೇಶಾದ್ಯಂತ ಅಮೃತ್ ಭಾರತ್ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಈ ಮಹತ್ವದ ಯೋಜನೆಯಡಿ ನವೀಕರಿಸಲಾದ 103 ರೈಲ್ವೆ ನಿಲ್ದಾಣಗಳ ಉದ್ಘಾಟನಾ ಕಾರ್ಯಕ್ರಮವು ವಿಡಿಯೋ ಕಾನ್ಫರೆನ್ಸ್ ಮೂಲಕ ಏಕಕಾಲದಲ್ಲಿ ನಡೆಯಲಿದ್ದು, ಕರ್ನಾಟಕದ ಐದು ನಿಲ್ದಾಣಗಳು ಸಹ ಈ ಪೈಕಿ ಸೇರಿವೆ. ಈ ಐದು ನಿಲ್ದಾಣಗಳು: ಮುನಿರಾಬಾದ್, ಬಾಗಲಕೋಟೆ, ಗದಗ್, ಗೋಕಾಕ್ ರಸ್ತೆ, ಧಾರವಾಡ.

ಈ ವಿಶೇಷ ಸಮಾರಂಭದ ಅಂಗವಾಗಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ನಾಳೆ ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಸ್ಥಳೀಯ ಮಟ್ಟದಲ್ಲಿ ಕಾರ್ಯಕ್ರಮಕ್ಕೆ ಶೋಭೆ ತರಲಿದ್ದಾರೆ.

ಉದ್ಘಾಟನಾ ಸಮಾರಂಭದ ಬಳಿಕ, ಮಧ್ಯಾಹ್ನ 2 ಗಂಟೆಗೆ ಸಚಿವ ವಿ. ಸೋಮಣ್ಣ ಅವರು ತೇಜಸ್ ಇಂಟರ್‌ನ್ಯಾಷನಲ್ ಎಜುಕೇಶನಲ್ ಇನ್ಸಿಟ್ಯೂಷನ್ ಗೆ ಭೇಟಿ ನೀಡಿ, ಅಲ್ಲಿ ನೂತನ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಕಾರ್ಯವನ್ನು ನೆರವೇರಿಸಲಿದ್ದಾರೆ.

ಅಮೃತ್ ಭಾರತ್ ಯೋಜನೆಯು ರೈಲ್ವೆ ನಿಲ್ದಾಣಗಳನ್ನು ಆಧುನಿಕೀಕರಿಸಿ, ಪ್ರಯಾಣಿಕರಿಗೆ ಉತ್ತಮ ಅನುಭವ, ಮೂಲಭೂತ ಸೌಲಭ್ಯಗಳು, ಸುಧಾರಿತ ಇನ್‌ಫ್ರಾಸ್ಟ್ರಕ್ಚರ್, ಪ್ರತ್ಯಕ್ಷ ಪ್ರವೇಶ, ಸುಧಾರಿತ ಪ್ಲಾಟ್‌ಫಾರ್ಮ್, ಆಧುನಿಕ ನಿರೀಕ್ಷಣಾ ಮಂದಿರ ಮುಂತಾದುವನ್ನು ಒದಗಿಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.