ನವದೆಹಲಿ : ಇಂದಿನಿಂದ ಮೂರು ದಿನಗಳ ಕಾಲ ಪ್ರಧಾನಿ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಸದ್ಯ ಜೋರ್ಡಾನ್ ತಲುಪಿರುವ ಮೋದಿ ಬಳಿಕ ಇಥಿಯೋಪಿಯಾ, ಒಮಾನ್ಗೆ ಭೇಟಿ ನೀಡಲಿದ್ದಾರೆ.
ಈ ಕುರಿತು ಭಾನುವಾರ (ಡಿ.14) ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಮಾಹಿತಿ ನೀಡಿದ್ದರು. ರಾಜ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಭೇಟಿ ಕೈಗೊಂಡಿದ್ದು, ಇಂದಿನಿಂದ ಡಿ.16ರವರೆಗೆ ಜೋರ್ಡಾನ್ ಪ್ರವಾಸದಲ್ಲಿರಲಿದ್ದಾರೆ.
ಈಗಾಗಲೇ ಜೋರ್ಡಾನ್ನ ಅಮ್ಮನ್ ಪ್ರದೇಶಕ್ಕೆ ತಲುಪಿರುವ ಮೋದಿ ಅವರನ್ನು ಪ್ರಧಾನಿ ಜಾಫರ್ ಹಸನ್ ಅವರು ಸ್ವಾಗತಿಸಿದರು. ಪ್ರಧಾನಿ ಮೋದಿ ಜೋರ್ಡಾನ್ಗೆ ನೀಡುತ್ತಿರುವ ಮೊದಲ ಭೇಟಿಯಿದಾಗಿದೆ.
ಡಿ.16ರಿಂದ 17ರವರೆಗೆ ಇಥಿಯೋಪಿಯಾಗೆ ಭೇಟಿ ನೀಡಲಿದ್ದು, ಇಥಿಯೋಪಿಯನ್ ಕೌಂಟರ್ ಡಾ. ಅಬಿಯ್ ಅಹ್ಮದ್ ಅಲಿ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಲಿದ್ದಾರೆ. ಬಳಿಕ ಡಿ.17ರಿಂದ 18ರವರೆಗೆ ಒಮಾನ್ಗೆ ತೆರಳಲಿದ್ದು, ವಿಶೇಷ ಪಾಲುದಾರಿಕೆ, ವ್ಯಾಪಾರ ಸಂಪರ್ಕ ಹಾಗೂ ಹಲವು ದಾಖಲೆಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಹೇಳಿದರು.














