ಮನೆ ಸುದ್ದಿ ಜಾಲ ಮೈಸೂರಿಗೆ ಪ್ರಧಾನಿ ಮೋದಿ ಆಗಮನ: ಭಾರಿ ಭದ್ರತೆ; 2 ದಿನ ಮಾಲ್‌ ಆಫ್‌ ಮೈಸೂರು ಬಂದ್‌

ಮೈಸೂರಿಗೆ ಪ್ರಧಾನಿ ಮೋದಿ ಆಗಮನ: ಭಾರಿ ಭದ್ರತೆ; 2 ದಿನ ಮಾಲ್‌ ಆಫ್‌ ಮೈಸೂರು ಬಂದ್‌

0

ಮೈಸೂರು (Mysuru): ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ.

ಕೇಂದ್ರ ವಿಶೇಷ ಭದ್ರತಾ ಪಡೆಯಿಂದ ಭಾರಿ ಬಂದೋಬಸ್ತ್‌ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಮೋದಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಪ್ರತ್ಯೇಕ ಪ್ರೋಟೋಕಾಲ್‌ ವ್ಯವಸ್ಥೆ ಮಾಡಲಾಗಿದೆ.

ಇನ್ನು ಮಾಲ್‌ ಆಫ್‌ ಮೈಸೂರನ್ನು ಕಂಪ್ಲೀಟ್ಲಿ ಕ್ಲೋಸ್‌ ಮಾಡಿಸಲಾಗಿದೆ. ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಪ್ರಧಾನಿ ಮೋದಿ ವಾಸ್ತವ್ಯ ಹೂಡಲಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಇಂದಿನಿಂದ ಎರಡು ದಿನಗಳ ಕಾಲ ಮಾಲ್‌ ಆಫ್‌ ಮೈಸೂರನ್ನು ಬಂದ್‌ ಮಾಡಿಸಲಾಗಿದೆ.

ಬಸ್ ಸಂಚಾರ ಹಾಗೂ ನಿಲ್ದಾಣಗಳಲ್ಲಿ ಬದಲಾವಣೆ:

ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಹಾಗೂ ನಿಲ್ದಾಣಗಳಲ್ಲಿ ಬದಲಾವಣೆಯಾಗಿದೆ. ಹೊರಭಾಗದಿಂದ ಬಸ್ ಗಳು ಸಿಟಿ ಪ್ರವೇಶ ಮಾಡದಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ದ್ವಿಚಕ್ರ, ನಾಲ್ಕೂ ಚಕ್ರ ಹಾಗೂ ಬಸ್ ನಿಲುಗಡೆಯಲ್ಲೂ ಬದಲಾವಣೆಯಾಗಿದೆ. ಮೈಸೂರು ನಗರಕ್ಕೆ ನಾಲ್ಕು ದಿಕ್ಕುಗಳಿಂದ ಆಗಮಿಸುವ ಬಸ್ , ಕಾರ್ ತಾತ್ಕಾಲಿಕ ಬಸ್ ನಿಲುಗಡೆ ಗೆ ಸ್ಥಳ ನಿಗಧಿ ಪಡಿಸಲಾಗಿದೆ.

ನಗರ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಿಂದ ಬರುವ ಬಸ್  ಜೆ.ಕೆ ಮೈದಾನದಲ್ಲಿ ನಿಲ್ದಾಣ, ಹುಣಸೂರು ಹಾಸನ ವರ್ಗವಾಗಿ ಬರುವ ಬಸ್ ಗಳಿಗೆ ವಿಲೇಜ್ ಹಾಸ್ಟೆಲ್ ಮೈದಾನ ಬಳಿ ನಿಲ್ದಾಣ, ಪಿರಿಯಾಪಟ್ಟಣ, ಕೆ.ಆರ್.ನಗರ ಮಾರ್ಗದ ಬಸ್ ಗಳಿಗೆ ಮೈಸೂರು ವಿವಿ ಪಾರ್ಕಿಂಗ್ ನಲ್ಲಿ ವ್ಯವಸ್ಥೆ, ನಂಜನಗೂಡು ಚಾಮರಾಜನಗರ ಮಾರ್ಗದ ಬಸ್ ಗಳಿಗೆ ಎನ್ ಎಸ್ ಎಸ್ ಕಚೇರಿ ಮೈದಾನ ಹಾಗೂ ಸೋಮಾನಿ ಬಿಎಡ್ ಕಾಲೇಜು ಮೈದಾನದ ಆವರಣ, ಎಚ್ ಡಿ ಕೋಟೆ ಕಡೆಯಿಂದ ಬರುವ ಬಸ್ ಗಳಿಗೆ ಮಹಾಬೋದಿ ಹಾಸ್ಟೆಲ್ ಮೈದಾನ, ತಿ.ನರಸೀಪುರ ಕಡೆಯಿಂದ ಬರುವ ಬಸ್ ಗಳು ಸ್ಕೌಟ್ ಅಂಡ್ ಗೈಡ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಬಸ್ ಮೋದಿ ಸಂಚರಿಸುವ ಮಾರ್ಗದಲ್ಲಿ ಸಂಚಾರ ಮಾಡದಂತೆ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ‌ ನಿಗದಿತ ಪಾರ್ಕಿಂಗ್ ಸ್ಥಳಕ್ಕೆ ತೆರಳಲು. ಮೈಸೂರಿನ ಹೊರ ವಲಯದ ರಿಂಗ್ ರಸ್ತೆ ಮೂಲಕ ಆಗಮಿಸಬಹುದು.

ಹಿಂದಿನ ಲೇಖನಅಗ್ನಿಪಥ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ: ಅನಿಲ್ ಪುರಿ
ಮುಂದಿನ ಲೇಖನ16 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಯುವತಿ ತಾನು ಇಷ್ಟಪಟ್ಟ ವ್ಯಕ್ತಿಯೊಂದಿಗೆ ಮದುವೆಯಾಗಬಹುದು: ಹರಿಯಾಣ ಹೈಕೋರ್ಟ್